ಕಾರವಾರ: “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.”

Source: jagadish vaddina | By Arshad Koppa | Published on 28th March 2017, 8:09 AM | State News |

ಹೊಸ ವರುಷಕ್ಕೆ ಹೊಸತು ಹೊಸತು ತರುತಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಯುಗಾಯೇ ಹೊಸ ವರ್ಷ, ಅಂದು ಸೂರ್ಯ ವಸಂತವಿಷುವ ಬಿಂದುವಿಗೆ ಬರುವ ದಿನ. ಸೂರ್ಯನು ಮೇಘರಾಶಿಯನ್ನು ಪ್ರವೇಶ ಮಾಡುವ ಮರುದಿನವನ್ನೇ ಹೊಸ ಯುಗದ ಪ್ರಾರಂಭ ಎಂದು ಕರೆಯಲಾಗುತ್ತದೆ. ಹೇಗೆ ಹಿಂದೂಗಳಿಗೆ ಸೂರ್ಯೋದಯವಾದ ಮೇಲೆ ಹೊಸ ದಿನ ಪ್ರಾರಂಭವಾಗುತ್ತದೆಯೋ ಹಾಗಯೇ ಹೊಸ ವರ್ಷ ಸಹ ಈ ಸಂದರ್ಭದ ಸೂರ್ಯೋದಯದಿಂದ ಶುರುವಾಗುತ್ತದೆ.

 

ಯುಗಾದಿಯ ಬೇವು-ಬೆಲ್ಲ ಯಗಾದಿಗಿಂತಲೂ ಪ್ರಸಿದ್ಧಿ. ಸಿಹಿಯಾದ ಬೆಲ್ಲ, ಕಹಿಯಾದ ಬೇವು ಬದುಕಿನ ಸುಖ-ದುಃಖಗಳ ಪ್ರತೀಕ. ಸುಖ ದುಃಖಗಳಿಗೆ ಸಮವರ್ತಿಯಾಗಿ ತೆರೆದುಕೊಳ್ಳುವುದು ಯುಗಾದಿಯ ಆದರ್ಶ ಯೋಗ-ಭೋಗಗಳಲ್ಲಿ ಸಮಶೀಲನಾಗಿರುವುದು. ಯುಗಾದಿಯ ಕಾಣ ್ಕ. ಬೇವಿನ ಹೂ, ಚಿಗರು, ಮೆಣಸು, ಬೆಲ್ಲ ಅಥವಾ ಉಪ್ಪು, ಇಂಗು, ಜಿರಿಗೆ, ಓಮ ಇವುಗಳನ್ನು ಕಂಚಿನಪಾತ್ರೆಯಲ್ಲಿ ಬಿಸಿಮಾಡಿ, ಕುಟ್ಟಿ ಕಲ್ಕಕವನ್ನು ಸಿದ್ಧಪಡಿಸಿಕೊಂಡು ಈ ಕೆಳಗಿನ ಪುರಾಣ ಮಂತ್ರವನ್ನು ಪಠಿಸುತ್ತ ಸೇವಿಸುವುದು ಕ್ರಮ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ| ಸರ್ವಾರಿಷ್ಟವಿನಾಶಯ ನಿಂಬಕಂದಳಭಕ್ಷಣಮ್|| ಈ ಕಲ್ಯದಿಂದ ದೇಹ ವಜ್ರಸದೃಶವಾಗುತ್ತದೆ. ನೂರು ವರ್ಷಗಳ ಆಯುಷ್ಯ ದೊರೆಯುತ್ತದೆ. ಎಲ್ಲ ರೀತಿಯ ಸಂಪತ್ತುಗಳು ಸೇರುತ್ತವೆ. ಸರ್ವಪಾಪಗಳು ನಾಶವಾಗುತ್ತವೆ. ಬೇವು ಪ್ರಜಾಪತಿಗೆ ಪ್ರಿಯ, ಆದುದರಿಂದ ಅವನ ಪೂಜೆಯ ಪ್ರಸಾದವೂ ಅದೇ.

ಹೊಸತು ಹಳತಾಗುತ್ತದೆ; ಹಳತು ಹೊಸತಾಗುತ್ತದೆ. ಹಳತನ್ನು ಸದಾ ಹೊಸತು ಮಾಡಿಕೊಳ್ಳುವ ನಿಸರ್ಗದ ನಡೆಯಲ್ಲಿ ಮಹತ್ವದ ಸಂದೇಶವಿದೆ. ಅದೇ ಜಿವನ ಶ್ರದ್ಧೆ. ಜೀವನೋತ್ಸಾಹ ಗಾಳಿಯ, ನೀರಿನ, ತಳಿರಿನ ಆ ಹೊಸತನ ನಮ್ಮಲ್ಲಿ ಜೀವನೋತ್ಸಾಹವನ್ನು, ಜೀವನ ಶ್ರದ್ಧೆಯನ್ನು ಹೆಚ್ಚಿಸಬೇಕಿದೆ. ಅದನ್ನು ಸಾರುತ್ತ ಬಂದಿದೆ ಯುಗಾದಿ ಹಬ್ಬ. ಬೇರೆ ಎಲ್ಲಾ ಹಬ್ಬಗಳಿಗೆ ದೇವರ ನಂಟು ಗಂಟುಗಳಿವೆ; ಪುರಾಣ ಪುಣ್ಯ ಕಥೆಗÀಳಿವೆ. ಯುಗಾದಿ ಯಾವುದೇ ನಿರ್ದಿಷ್ಟ ದೇವರ ಹಬ್ಬವಲ್ಲ, ವೇದಗಳಲ್ಲಾಗಲೀ, ಪರಾಣಗಳಲ್ಲಾಗಲೀ ಯುಗಾದಿಯ ಮಹಿಮೆಯಾಗಲೀ ಹಬ್ಬದ ಉಲ್ಲೇಖವಾಗಲೀ ಕಂಡುಬಂದಿಲ್ಲ. ಇದು ಯಾವಾಗ ಆರಂಭವಾಯಿತೋ ಗೊತ್ತಿಲ್ಲ. ಅಂಥ ದಾಖಲೆಗಳು ಲಭ್ಯವಿಲ್ಲ. ಹಾಗೆ ನೋಡಿದರೆ ಯಾವುದೇ ಹಬ್ಬ ಅಪ್ಪಟ ದೈವಿಕ ಆಗಿರುವುದಿಲ್ಲ. ದೇವರು ಧರ್ಮಗಳ ಸಂಗತಿಯೊಂದಿಗೆ ಸಂಬಂಧ ಹೊಂದಿಯೂ ಅಷ್ಟೇ ಆಗಿರದೆ, ಸಾಂಸ್ಕ್ರತಿಕವೂ ಸಾಮಾಜಿಕವೂ ಆಗಿರುತ್ತವೆ. ಪ್ರಾದೇಶಿಕ ರೀತಿ ರಿವಾಜುಗಳು, ಕೃಷಿ, ಪಶುಪಾಲನೆ , ವ್ಯಾಪಾರ, ವಾಣ ಜ್ಯ ಮುಂತಾದ ಜೀವನಾಲಂಬಕಗಳು, ಆಹಾರ ವ್ಯವಹಾರ, ಭಾಷೆ, ಮನೋಧರ್ಮ, ನಂಬಿಕೆ, ಮೂಢÀನಂಬಿಕೆ ಇಂಥ ಸಾಮಾಜಿಕ ಸಾಂಸ್ಕ್ರತಿಕ ಅಂಶಗಳೆಲ್ಲ ಸೇರಿ ಹಬ್ಬದ ಆಚರಣೆ ರೂಪುಗೊಂಡಿರುತ್ತದೆ. ಯುಗಾದಿಯಂತೂ ಸಾಂಸ್ಕ್ರತಿಕ ಹಬ್ಬವಾಗಿ ತೋರುತ್ತದೆ; ದೈವಿಕ ಹಬ್ಬವಾಗಿ ಅಲ್ಲ.

ಹೊಸ ವರ್ಷ, ಗಿಡಬಳ್ಳಿಗಳು ಚಿಗುರುವ, ಪ್ರಕೃತಿ ಮಾತೆ ಸಡಗರದಿಂದ ವಸಂತೋತ್ಸವ ಆಚರಿಸುವ ಸಂಭ್ರಮವೇ ಯುಗಾದಿ. ನಮ್ಮದು ಕೃಷಿ ಪ್ರಧಾನ ಬದುಕು. ಹೊಸ ವರ್ಷ ಮೊದಲ ದಿನ ಮಂಗಲ ದ್ರವ್ಯಗಳನ್ನು ದರ್ಶಿಸುತ್ತಾ. ಗುರುಹಿರಿಯರಿಂದ, ದೈವ-ದೇವರುಗಳಿಂದ ಒಳ್ಳೆಯದನ್ನು ಬೇಡುತ್ತಾ. ಕೃಷಿಯತ್ತ ಗಮನಹರಿಸುವ ಸಂದರ್ಭವೇ ಯುಗಾದಿ. ಹಿಂದಿನ ಕಾಲದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಭೂಮಾಲಿಕರಿಗೆ ಬೆಳೆ ಕಾಣ ಕೆ ಸಲ್ಲಿಸಿ, ಹೊಸ ಕೃಷಿಯನ್ನು ಆರಂಭಿಸಲು ಅಪ್ಪಣೆ ಕೇಳುವ ಕ್ರಮವಿತ್ತು. ಒಂದು ಸಾಲು ಉಳುವುದು, ಹಿಡಿ ಬೀಜ ಹಾಕುವ ಕ್ರಮದೊಂದಿಗೆ ಕೃಷಿ ಆರಂಭ ಯುಗಾದಿಯಿಂದಲೇ ಅಂದರೆ ಯುಗಾದಿ ಕೃಷಿಗೆ ಮುನ್ನುಡಿಯಾಗಿದೆ. 

ವಸಂತದಲ್ಲಿ ವರ್ಷಾರಂಭ ಎನ್ನುವುದೇ ತುಂಬ ಸಾರ್ಥಕವಾದ ಔಚಿತ್ಯ ಪೂರ್ಣವಾದ ಪರಿಕಲ್ಪನೆ. ಪುರಾಣ ಕಾವ್ಯ ರೂಪಕದಲ್ಲಿ ವಸಂತ ಮನ್ಮಥನ ಸಹಚಾರಿ ಸಖ. ಕಾಳಿದಾಸನಲ್ಲಿ ವಸಂತ ಜೀವಕಾಯದ ಯೋಧ ಪರಮಯೋಗಿ ಶಿವನ ಆಶ್ರಮದ ಮುನಿವನಗಳನ್ನೂ ಹುಚ್ಚೆಬ್ಬಿಸಬಲ್ಲ , ಸ್ವಯಂ ಶಿವನ ಕಣ್ಣರಳಿಸಬಲ್ಲ ವಸಂತ ಚೆಲುವೆ ಅಂಥಮ! ಎಲ್ಲೆಲ್ಲೂ ಚೆಲ್ಲುವ ಹೂವಿನ ಚೆಲುವೆ ಚೆಲುವು ‘ಪುಷ್ಪ ಮಾಸೇ ಹಿ ತರವ: ಸಂಘರ್ಷಾದಿವ ಪುಷ್ಟಿತಾಃ ವಸಂತಮಾಸದಲ್ಲಿ ಪರಸ್ಪರ ಸ್ಪರ್ಧೆಯಿಂದೆಂಬತೆ ಮರಗಳು ಹತಳೆವಿದೆಎನ್ನುತ್ತಾನೆ ವಾಲ್ಮೀಕಿ. ವಸಂತ ಪುಷ್ಪಮಾಸವಂತೆ ಜೀವಪ್ರೀತಿ ಜೀವನೋತ್ಸಾಹ ಉಲ್ಲಾಸ ಊರ್ಜೆಗಳ ಆಗರ ಈ ಮಧು (ಸವಿ) ಮಾಸ. ಸೀತೆಯನ್ನು ಅರಸಿ ಹನುಮಂತ ಅಶೋಕವನಕ್ಕೆ ಬಂದಿದ್ದು ವಸಂತದಲ್ಲಿ. ಅರಳಿದ ಸುಮ, ಸುವಾಸಿತ ಮಂದಾನಿಲ, ಝೇಂಕರಿಸುವ ದುಂಬಿ, ಕೂಹೂ ಎನ್ನುವ ಕೋಗಿಲೆ, ಮೈತುಂಬ ಹೂತಳೆದ ಮಾಮರಗಳು ಒಟ್‍ಟಿನಲ್ಲಿ ಚೆಲುವಿನ ಆಗರದೊಂದಿಗೆ ಜೀವನಪ್ರೀತಿಯ ಉಲ್ಲಾಸದ ಮಾದರಿಗಳು ಪ್ರತಿವರ್ಷದ ಯುಗಾದಿ ಅವನ್ನೆಲ್ಲ ನಮಗೆ ನೆನಪಿಸುತ್ತಲೇ ಇದೆ.

ಹಳತು ಕಳೆಯದೆ ಹೊಸತು ಬರದು. ಹೊಸತು ಹುಟ್ಟದೆ ಹರುಷ ಸಿಗದು. ಇದು ಹಳೆಯದರ ಯಶಸ್ಸಿನಲ್ಲಿ ಮೈ ಮರೆಯದೆ ಹೊಸತನ್ನು ಕಟ್ಟುವ ಸಂಧಿಕಾಲ ಹೊಸತನ್ನು ಕಟ್ಟುವ ಆ ಕ್ರಿಯೆಯಲ್ಲಿ ಇನ್ನಷ್ಟು ಮುಂದೆ ಸಾಗೋಣ. ಸಮಸ್ತ ಕನ್ನಡ ಜನತೆಗೆ ಯುಗಾದಿಯ ಶುಭಾಶಯಗಳು.


ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ ಕಾರವಾರ
ಮೊ : 9632332185

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...