ಕಾರವಾರ:“ಜಲ ಸಂರಕ್ಷಣೆ, ಜೀವ ಸಂರಕ್ಷಣೆ” - 22 ಮಾರ್ಚ ವಿಶ್ವ ಜಲ ಸಂರಕ್ಷಣಾ ದಿನಾಚರಣೆ

Source: jagadish waddina | By Arshad Koppa | Published on 21st March 2017, 8:03 AM | Special Report | Guest Editorial | Don't Miss |

ಜೀವ ಪ್ರಪಂಚಕ್ಕೆ ಮುಖ್ಯವಾಗಿ ಬೇಕಾದದ್ದು ನೀರು. ನಾವು ನಿತ್ಯ ಉಪಯೋಗಿಸುವ ಸಂಪನ್ಮೂಲಗಳಾದ ಗಾಳಿ, ಆಹಾರ ಹಾಗೂ ನೀರಿಲ್ಲದೆ ಬದುಕಲಾರೆವು. ಈ ನೀರು ಎಂಬ ವಸ್ತು ಭೂಮಿಯ ಮೇಲೆ ಇರದಿದ್ದರೆ ಜೀವ ಜಗತ್ತು ಜೀವಿಸಲು ಸಾಧ್ಯವಿರುತ್ತಿರಲಿಲ್ಲ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದರೂ ಸಹ ಈಗ ಜಗತ್ತಿನಾದ್ಯಂತ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ಮಾನವನು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜಲ ಸಂಪನ್ಮೂಲಗಳನ್ನು ಮತ್ತು ಪರಿಸರವನ್ನು ನಾಶ ಮಾಡುತ್ತಿದ್ದಾನೆ.

ಪ್ರಾಚೀನ ಭಾರತೀಯರು ನೀರಿನ ಮಹತ್ವ ಅರಿತು ಅದನ್ನು ಪಂಚ ಮಹಾಭೂತಗಳಲ್ಲಿ ಒಂದೆಂದು ಪರಿಗಣ ಸಿದ್ಧರು. ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಗೆ ನೀರು ಇಲ್ಲದ ಹಾಗೆ ಆಗುತ್ತದೆ. ಆದ್ದರಿಂದ ಜನರಲ್ಲಿ ನೀರಿನ ಮಹತ್ವದ ಅರಿವು ಮೂಡಿಸಲು ಮಾರ್ಚ 22, 1993 ರಂದು ವಿಶ್ವ ಜಲ ಸಂರಕ್ಷಣಾ ದಿನ ಆಚರಿಸಲು ನಿರ್ಧರಿಸಲಾಯಿತು.

ನೀರಿನ ರಾಸಾಯನಿಕ ಸೂತ್ರ ಊ2ಔ. ಜಲಜನಕದ ಎರಡು ಮತ್ತು ಆಮ್ಲಜನಕದ ಒಂದು ಪರಮಾಣುಗಳು ಕೂಡಿ ಆದ ಸಂಯುಕ್ತ ವಸ್ತು. ನೀರು ಅತ್ಯುತ್ತಮ ದ್ರಾವಕ. ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ನೀರು ಕ್ರಿಯಾವರ್ಧಕವಾಗಿ (ಕೆಟಲಿಸ್ಟ್) ವರ್ತಿಸುತ್ತದೆ. ನೀರನ್ನು ನಾವು ದ್ರವ, ಘನ ಹಾಗೂ ಅನಿಲ ರೂಪದಲ್ಲಿ ನೋಡಬಹುದು. ಆದ್ದರಿಂದ ನೀರನ್ನು ಬಹುರೂಪ ದ್ರವವೆಂದು ಕರೆಯುತ್ತೇವೆ. 

ಭೂಮಿಯಲ್ಲಿ ಒಟ್ಟು 1,460,000,000 ಘನ ಕಿಲೋಮೀಟರ್ ನೀರಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಶೇ. 97.2 ಭಾಗ ಸಾಗರ ಸಮುದ್ರಗಳ ನೀರು, ಶೇ. 2.2 ಭಾಗ ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಕಾಣಬರುವ ಹೆಪ್ಪುಗಟ್ಟಿದ ನೀರು, ಅಂದರೆ ಮಂಜುಗಡ್ಡೆ. ಉಳಿದ ಶೇ. 0.6 ಭಾಗ ಮಾತ್ರ ದ್ರವ ಸ್ಥಿತಿಯಲ್ಲಿರುವ ಸಿಹಿನೀರು. ಇದು ಭೂಮಿಯ ಮೇಲೆ ದೊರೆಯುವ ಒಟ್ಟು ನೀರಿನ ಅತ್ಯಲ್ಪ ಭಾಗವಾದರೂ ಇದರ ಪ್ರಮಾಣ ಕಡಿಮೆ ಏನಿಲ್ಲ 87,60,000 ಘನ ಕಿಲೋಮೀಟರಗಳಷ್ಟಾಗುತ್ತದೆ.

ನೆಲದಾಳದ ನೀರಿನ ಬಗ್ಗೆ ಮಹಾಭಾರತದಲ್ಲಿ ವಿಶಿಷ್ಟವಾದ ಉಲ್ಲೇಖವಿದೆ. ಭೀಷ್ಮನ ದಾಹವನ್ನು ತಣ ಸಲು ಗಾಂಡೀವ ಬಾಣವನ್ನು ನೆಲಕ್ಕೆ ಬಿಟ್ಟು ಜಲ ಉಕ್ಕುವಂತೆ ಮಾಡಿದ ಪ್ರಸಂಗದ ವರ್ಣನೆ ಅಂತರ್ಜಲದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಸಿಹಿ ನೀರಿನ ಶೇ. 97.74 ಭಾಗ ಭೂಮಿಯ ಒಳಗಡೆ ಇದೆ. ಭೂಮ್ಯಂತರ್ಗತ ಜಲಧರದಲ್ಲಿ ಮತ್ತು ಜಲವಾಹಿನಿಗಳಲ್ಲಿದೆ. ಶೇ. 1.47 ಭಾಗ ಸಿಹಿ ನೀರಿನ ಸರೋವರಗಳಲ್ಲಿಯೂ ಶೇ. 0.78 ಭಾಗ ಮಣ ್ಣನಲ್ಲಿ ಹೀರಿದ ಸ್ಥಿತಿಯಲ್ಲಿಯೂ ಶೇ. 0.01 ಭಾಗ ನದಿ ಮತ್ತು ಚಿಕ್ಕ ಚಿಕ್ಕ ತೊರೆಗಳಲ್ಲಿಯೂ ಉಂಟು. ಮನುಷ್ಯ ಜೀವನಕ್ಕೆ ಅಗತ್ಯವಾಗುವ ನೀರು ಒದಗುವುದು ಈ ಆಕರÀಗಳಿಂದ ಮಾತ್ರ.

“ಆಪತ್ತಾಲಕ್ಕೆ ಜೀವ ನೀಡುವುದು ಅಂತರ್ಜಲ” ಅಂತರ್ಜಲಕ್ಕೂ ಇತರ ನೀರಿನ ರೂಪಗಳಿಗೂ ಇರುವ ಸಂಬಂಧ ವಿಶೇಷತೆಯನ್ನು ಸ್ಪಷ್ಟವಾಗಿ ಅರಿಯುವ ಅವಶ್ಯಕತೆ ಇದೆ. ‘ಕೂತು ತಿಂದರೆ ಕೂಡಿಕೆ ಹಣ ಸಾಕೆ?” ಎಂಬ ನಾಣ್ಣುಡಿಯಂತೆ ಈ ಅಂತರ್ಜಲವನ್ನೂ ಕೂಡ ಹಿತಮಿತವಾಗಿ ಉಪಯೋಗಿಸುವುದನ್ನು ನಾವೆಲ್ಲಾ ಅರಿಯಬೇಕು. ಭಾರತ ವ್ಯವಸಾಯ ಪ್ರಧಾನ ದೇಶ ಅಂತರ್ಜಲದ ಬಗ್ಗೆ ಅರಿಯುವುದರಿಂದ ವ್ಯವಸ್ಥಿತ ವ್ಯವಸಾಯವನ್ನು ಮಾಡಬಹುದು.

ಜಲಚಕ್ರ : “ಭೂ ವಿಷಯದಲ್ಲಿ ಪುದಿದ ರಸವಾಸನೆಗಳೆಲ್ಲ 
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು 
ಬಾವಿಗೂಟೆಯನಿತ್ತು ನರರೊಡಲ ಸೇರುವುದು 
ದೈವ ರಸ ತಂತ್ರವಿದು – ಮಂಕುತಿಮ್ಮ.”

ಮೇಲೆ ತಿಳಿಸಿರುವುದು ಡಿ.ವಿ.ಜಿ. ಯವರು “ದೈವ ರಸ ತಂತ್ರ” ಪ್ರಕೃತಿ ಚಕ್ರ ಪ್ರಕೃತಿಯ ಇನ್ನೊಂದು ರೂಪ ಜಲಚಕ್ರ.

ಸೂರ್ಯನ ತಾಪದಿಂದ ಸಮುದ್ರದ ನೀರು ಹಾಗೂ ನೆಲ ಕಾಯುತ್ತದೆ. ಕಾವು ಜಾಸ್ತಿಯಾದಾಗ ಎಲ್ಲಾ ದ್ರವಗಳಂತೆ, ನೀರು ಸಹ ಆವಿಯಾಗಿ ಅತಿ ಹಗುರವಾಗುವುದರಿಂದ ಮೇಲೇರುತ್ತದೆ. ಇದೇ ರೀತಿ ಗಿಡಮರಗಳ ಉಸಿರಾಟವೂ ಆಕಾಶವನ್ನು ಆವಿಯ ರೂಪದಲ್ಲಿ ಸೇರುತ್ತದೆ. ಇದು ಆಕಾಶದಲ್ಲಿ ಮೋಡಗಳನ್ನು ಉಂಟುಮಾಡುತ್ತದೆ. ಗಾಳಿಯ ದೆಸೆಯಿಂದ ಮೋಡಗಳು ಚಲಿಸುತ್ತವೆ. ಈ ಚಲನೆಯನ್ನು ಬೆಟ್ಟಗಳು, ಗುಡ್ಡಗಳು ತಡೆದಾಗ, ಉಷ್ಣತೆ ಕಡಿಮೆಯಾಗಿ, ನೀರಾಗಿ ಪರಿಣಮಿಸಿ, ನೆಲದ ಮೇಲೆ ಮಳೆಯಾಗಿ ಬೀಳುತ್ತದೆ. ನೆಲದ ಮೇಲೆ ಬಿದ್ದ ನೀರು ನೆಲದ ಅಡತಡೆಗಳನ್ನು ಕೊರೆದು ನದಿಯಾಗಿ ಹರಿದು, ಕೆರೆ, ಕಟ್ಟೆಗಳನ್ನೂ ಸಾಗರವನ್ನು ಸೇರಿ ತನ್ನ ಯಾನವನ್ನು ಮುಗಿಸುತ್ತದೆ. ಮತ್ತೆ ಇದು ಆವಿಯಾಗಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

ಜಲಮಾಲಿನ್ಯ ತಡೆಯುವ ವಿಧಾನ :  ಮಾನವನು ಕಾಡನ್ನು ನಾಶ ಮಾಡುವದನ್ನು ಬಿಟ್ಟು ಬೆಳೆಸಬೇಕು. ಕೆರೆಗಳನ್ನು ಮುಚ್ಚುವ ಬದಲು ಹೊಸ ಹೊಸ ಕೆರೆಗಳನ್ನು ನಿರ್ಮಿಸಬೇಕು. ಜಲಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ಕೈಗಾರಿಕೆ ಕಾರ್ಖಾನೆ ಹಾಗೂ ಅಣುಸ್ಥಾವರಗಳಿಂದ ಬರುವ ಕಶ್ಮಲ ನೀರನ್ನು ಸೋಸಿ ಶುದ್ಧಗೊಳಿಸಿ ನದಿಗೆ ಹಾಗೂ ಸಮುದ್ರಕ್ಕೆ ಬಿಡಬೇಕು. ನೀರಿನ ದುರ್ಬಬಳಕ್ಕೆ ಮಾಡುವುದನ್ನು ನಿಲ್ಲಿಸಬೇಕು.

ಮಾನವನು ಜಲಮಾಲಿನ್ಯ ಮಾಡುತ್ತಾ ಮುಂದುವರೆದರೆ ಪ್ರಾಣ  ಹಾಗೂ ಸಸ್ಯಜೀವಿಗಳು ಬಹಳ ಸಂಕಷ್ಟಕ್ಕೆ ಒಳಗಾಗುತ್ತವೆ. ಈಗಾಗಲೇ ನಮ್ಮ ದೇಶದಲ್ಲಿ ನೀರಿಗಾಗಿ ರಾಜ್ಯ ರಾಜ್ಯಗಳಲ್ಲಿ ಹೋರಾಟಗಳು ನಡೆಯುತ್ತಿವೆ. ಇದೇ ರೀತಿಯಾಗಿ ಮುಂದುವರೆದರೆ ದೇಶ ದೇಶಗಳ ಮಧ್ಯೆಯೂ ಸಹ ನೀರಿಗಾಗಿ ಯದ್ಧಗಳು ಪ್ರಾರಂಭವಾಗಬಹುದು. ಅಷ್ಟೇಅಲ್ಲ ಮೂರನೇಯ ಮಹಾಯುದ್ಧಕ್ಕೆ ನೀರೇ ನಾಂದಿಯಾಗಬಹುದು!

ಮಂಗಳಗ್ರಹವನ್ನು ವೀಕ್ಷಿಸಿದರೆ ಮಂಗಳನ ಮೇಲೆ ಕೆರೆ, ಕೊಳ್ಳಗಳು, ನದಿ, ಸಮುದ್ರಗಳ ಕುರುಹನ್ನು ಕಾಣುತ್ತೇವೆ. ನೀರು ಕಾಣುವುದಿಲ್ಲ. ಆದರೆ ನೀರಿನ ಚಿನ್ಹೆ ಕುರುಹುಗಳನ್ನು ಕಾಣುತ್ತೇವೆ. ಅಂದರೆ ಒಂದಾನೊಂದು ಕಾಲದಲ್ಲಿ ಮಂಗಳನ ಮೇಲೆ ನೀರು ಇತ್ತು. ಇಂದು ಗ್ರಹಗಳಲ್ಲಿ ನೀರಿಲ್ಲ. ಇದೇ ರೀತಿಯಾಗಿ ಪರಿಸರ ಮಾಲಿನ್ಯ, ಜಲಮಾಲಿನ್ಯ, ನೀರನ್ನು ಪೋಲು ಮಾಡುತ್ತಾ ಹೋದರೆ ನಮ್ಮ ಭೂಮಿಯು ಸಹ ಒಂದು ದಿನ ಮಂಗಳಗ್ರಹದಂತೆ ಆಗಬಹುದು.

ಮಳೆ ಕೊಯ್ಲು (Rain Water Harvesting) “ಆಪತ್ಕಾಲಕ್ಕೆ ಜೀವ ನೀಡುವುದು ಅಂತರ್ಜಲ”. ಆದ್ದರಿಂದ ಮಳೆಗಾಲದಲ್ಲಿ ಹರಿದು  ಹೋಗಿ ಪೋಲಾಗುವ ನೀರನ್ನು ಇಂಗುಗುಂಡಿಗಳನ್ನು ತಯಾರಿಸಿ ಭೂಮಿಯಲ್ಲಿ ನೀರು ಇಂಗುವಂತೆ ಮಾಡಬೇಕು. ಆಗ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಬೇಸಿಗೆ ದಿನದಲ್ಲಿ ಈ ಅಂತರ್ಜಲವನ್ನು ಬಾವಿ, ಕೊಳವೆ ಬಾವಿ ಮುಖಾಂತರ ನೀರನ್ನು ಪಡೆಯಬಹುದು. “ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ” ಎಂಬ ನಾಡುನುಡಿಯಂತೆ ನಮ್ಮ ದೇಶದಲ್ಲಿ ಇರುವ ಪ್ರತಿಯೊಬ್ಬ ಪ್ರಜೆಯು ತಾನು ದಿನಾಲು ಉಪಯೋಗಿಸುವ ನೀರಿನಲ್ಲಿ ಪ್ರತಿದಿನ ಒಂದು ಹನಿ ನೀರನ್ನು ಉಳಿಸಿದರೂ ಸಹ ಒಂದು ದಿನದಲ್ಲಿ ಒಂದು ಹಳ್ಳದಲ್ಲಿ ಇರುವ ಪ್ರಮಾಣದಷ್ಟು ನೀರನ್ನು ಸಂಗ್ರಹಿಸಬಹುದು.

ನಾವು ಇಂದಿನಿಂದ ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಮಾಡುವುದನ್ನು ನಿಲ್ಲಿಸುತ್ತೇವೆ. ನಮ್ಮ ಹಿಂದಿನ ಪೀಳಿಗೆಯವರು ಕಾಪಾಡಿಕೊಂಡು ನಮಗೆ ಕೊಟ್ಟಿರೋ ಅದೇ ರೀತಿಯಾಗಿ ನಾವು ವಾಸಿಸುವ ಭೂಮಿಯ ಮೇಲೆ ಇರುವ ಜಲವನ್ನು ಚೆನ್ನಾಗಿ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಜಲವನ್ನು ಕೊಡುತ್ತೇವೆ. ಎಂದು ವಿಶ್ವ ಜಲ ಸಂರಕ್ಷಣಾ ದಿನದಂದು ಪ್ರತಿಜ್ಞೆಗೈಯೋಣ ಬನ್ನಿ.

ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ,
ಕಾರವಾರ
ಮೋ : 9632332185

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...