ಕಾರವಾರ: ವಿದ್ಯುತ್ ಕಡಿತ ಬುಧವಾರವೇ ಏಕೆ?; ಹೆಸ್ಕಾಂಗೆ ಡಿಸಿ ಪ್ರಶ್ನೆ

Source: varthabhavan | By Arshad Koppa | Published on 19th September 2017, 8:41 AM | Coastal News |

ಕಾರವಾರ ಸೆ.18 : ವಿದ್ಯುತ್ ಕಡಿತ ಪ್ರತಿ ಬುಧವಾರವೇ ಏಕೆ? ನಿರ್ವಹಣೆ ವಿಷಯವಿದ್ದರೆ ನಗರಾದ್ಯಂತ ವಿದ್ಯುತ್ ಕಡಿತ ಬೇಕೆ? ಇದು ಹೆಸ್ಕಾಂಗೆ ಜಿಲ್ಲಾಧಿಕಾರಿಗಳ ನೇರ ಪ್ರಶ್ನೆ.
    ಪ್ರತಿ ಬುಧವಾರ ಕಾರವಾರ ನಗರದಲ್ಲಿ ಹುಬ್ಬಳ್ಳಿ ವಿದ್ಯುತ್ ಪ್ರಸರಣಾ ನಿಗಮ ಹೆಸ್ಕಾಂನಿಂದ ವಿದ್ಯುತ್ ಕಡಿತವಾಗುತ್ತಿದ್ದು ಇದರಿಂದ ಬ್ಯಾಂಕ್, ಕೈಗಾರಿಕೆ, ಗೃಹೋಪಯೋಗ ಸೇರಿದಂತೆ ವಿವಿಧ ವರ್ಗಗಳಿಗೆ ಆಗುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೋಮವಾರ ಹೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಹೀಗೆ ಪ್ರಶ್ನಿಸಿದರು.
    ವಿದ್ಯುತ್ ಕಡಿತ ಪ್ರತಿ ಬುಧವಾರವೇ ಏಕೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನಿಸಿದ ಅವರು, ಬೇರೆ ಯಾವುದೇ ಜಿಲ್ಲೆಯ ನಗರದಲ್ಲಿ ಬುಧವಾರ ವಿದ್ಯುತ್ ಕಡಿತ ಮಾಡುವುದಿದೆಯೇ? ಹೀಗೆ ಪ್ರತಿವಾರವೂ ಇಡೀದಿನ ವಿದ್ಯುತ್ ಕಡಿತ ಮಾಡಿದರೆ ಬ್ಯಾಂಕ್ ವ್ಯವಹಾರಗಳು, ಕೈಗಾರಿಕೆಗಳಿಗೆ ತೊಂದರೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎಸ್.ನರಸಿಂಹಮೂರ್ತಿ ಅವರು, ಜಂಪ್‍ಲೈನ್ ಅಥವಾ ಸಂಪರ್ಕ ಮಾರ್ಗದಲ್ಲಿ ಮರಗಳ ಕೊಂಬೆ ಕಡಿಯುವ ಅಥವಾ ಉಪಕರಣಗಳಿಗೆ ಗ್ರೀಸಿಂಗ್ ಮಾಡುವ ಹಿನ್ನೆಲೆಯಲ್ಲಿ ಒಂದು ದಿನ ನಿರ್ವಹಣೆ ಸಂಬಂಧ ವಿದ್ಯುತ್ ಕಡಿತ ಮಾಡಲಾಗುತ್ತದೆ. ಆದರೆ ಬುಧವಾರವೇ ಮಾಡಬೇಕೆಂದೇನೂ ಇಲ್ಲ. ಅಲ್ಲದೆ ಇಡೀ ನಗರಾದ್ಯಂತ ವಿದ್ಯುತ್ ಕಡಿತ ಮಾಡುವ ಅಗತ್ಯವೂ ಇರುವುದಿಲ್ಲ ಎಂದರು.
    ಶನಿವಾರದಂದು ವಿದ್ಯುತ್ ಸಂಪರ್ಕ ಮಾರ್ಗಗಳಲ್ಲಿನ ಸಮಸ್ಯೆ ಪಟ್ಟಿ ಮಾಡಿಕೊಂಡು ಬುಧವಾರ ಅದರ ನಿರ್ವಹಣೆ ಮಾಡುವ ಪರಿಪಾಠ ಇಂದಿನಿಂದಲೂ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದ್ದು ಬಗೆಹರಿಸಬಹುದಾಗಿದೆ ಎಂದರು.
    ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಕೈಗಾರಿಕೆಗಳು ಹೇಗೆ ಜಿಲ್ಲೆಗೆ ಬರುತ್ತವೆ. ಅಲ್ಲದೆ, ಪ್ರತಿ ಬುಧವಾರ ಕಾರವಾರ ನಗರದ ಬ್ಯಾಂಕ್ ಹಾಗೂ ಕೈಗಾರಿಕೆಗಳಿಂದ ವಿದ್ಯುತ್ ಕಡಿತದ ಬಗ್ಗೆ ಬಹುದಿನಗಳಿಂದ ಆಕ್ಷೇಪವಿದ್ದು ಶೀಘ್ರವೇ ಪರಿಹರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
    ಅಂತಿಮವಾಗಿ ಮುಂದಿನ ಬುಧವಾರ ಒಮ್ಮೆ ನಿರ್ವಹಣಾ ಕಡಿತ ನಂತರ ಮುಂದಿನ ಮೂರು ಬುಧವಾರಗಳು ವಿದ್ಯುತ್ ಕಡಿತ ಇರಬಾರದು. ಅದರ ಫಲಿತಾಂಶ ನೋಡಿಕೊಂಡು ನಾಗರಿಕರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ವಹಿಸುವಂತೆ ಅವರು ಸೂಚಿಸಿದರು.
    ಸಭೆಯಲ್ಲಿ ಹೆಸ್ಕಾಂನ ಶಿರಸಿ ಅಧೀಕ್ಷಕ ಎಂಜಿನಿಯರ್ ನರಸಿಂಹಮೂರ್ತಿ ಎಸ್, ಕಾರವಾರ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್, ಸೆಕ್ಷನ್ ಅಧಿಕಾರಿಗಳಾದ ವಸಂತಲಕ್ಷ್ಮೀ, ರಷ್ಮೀ, ನಂಜಯ್‍ನಾಯ್ಕ್, ಪ್ರಶಾಂತ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ರೇವಣ್ಣಗೌಡ ಉಪಸ್ಥಿತರಿದ್ದರು.
    

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...