ಕಾರವಾರ: ಅರಣ್ಯ ಅಧಿಕಾರಿ ಕೆ. ಗಣಪತಿ ಅವರಿಗೆ ಮ್ಯಾಂಗ್ರೊವ್ (ಕಾಂಡ್ಲಾ) ಸೊಸೈಟಿ ಆಫ್ ಇಂಡಿಯಾ ದಿಂದ ಸನ್ಮಾನ

Source: varthabhavan | By Arshad Koppa | Published on 29th July 2017, 9:13 PM | State News | Special Report | Guest Editorial |

ವಿಶ್ವ ಕಾಂಡ್ಲಾ ದಿನಾಚರಣೆಗೆ ಹಾಗೂ ಮೆಂಗ್ರೋರೊವ್ (ಕಾಂಡ್ಲಾ) ಸೊಸೈಟಿ ಆಫ್ ಇಂಡಿಯಾ ರಜತ ಮಹತ್ವದ ಅಂಗವಾಗಿ ದಿನಾಂಕ 26, 27 ರಂದು ನೆಶನಲ್ ಇನಸ್ಟಿಟ್ಯೂಟ್ ಆಪ್ ಓಸಿಯಾನೋಗ್ರಫಿ (ಎನ್. ಐ. ಓ) ಗೋವಾದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕೀರ್ಣದ ಸಮಯದಲ್ಲಿ ಕಾಂಡ್ಲಾ ಸಂರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಅವರು ನೀಡಿದ ಗಣನೀಯ ಸೇವೆಯನ್ನು ಗುರುತಿಸಿ ಕಾರವಾರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಕೆ. ಗಣಪತಿ ಅವರನ್ನು ಅನ್‍ಸಂಗ್ ಹಿರೋ ಎಂದು ಸನ್ಮಾನಿಸಲಾಯಿತು.


    ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ವಿಭಾಗ ಕಳೆದ 15 ವರ್ಷಗಳಿಂದ ಕಾಂಡ್ಲಾ ಅಭಿವೃದ್ಧಿಗೆ ಸಕ್ರೀಯವಾಗಿ ಶ್ರಮಿಸುತ್ತಿದ್ದು. ಕಾಂಡ್ಲಾ ಪ್ರದೇಶವನ್ನು ಪ್ರತಿಶತ 100ಕ್ಕಿಂತ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದು. ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಸಾರ್ವಜನಿಕರ ಸಹಯೋಗದಲ್ಲಿ ಸಾಕಷ್ಟು ಚಟುವಟಿಕೆಗಳನ್ನು ಸಡೆಸುತ್ತಿದೆ. ಅವುಗಳಲ್ಲಿ ವಿಶಿಷ್ಠವಾದ ಕ್ರಮವೆಂದರೆ ಕಾಳಿ ನದಿಯ ನಡುವಿರುವ ಪುಟ್ಟ ನಡುಗಡ್ಡೆಯನ್ನು ಕಾಳಿಮಾತಾ ಪವಿತ್ರ ಕಾಂಡ್ಲಾವನ ಎಂದು ರಕ್ಷಣೆ ಮಾಡಿರುವುದು ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಕಾಂಡ್ಲಾ ಪರಿಚಯ ಮಾಡಿಸುತ್ತಿರುವುದು. ಅವರ ಈ ಚಟುವಟಿಕೆ ಅವರನ್ನು ಇಡೀ ದೇಶದ ಕಾಂಡ್ಲಾಪ್ರೇಮಿಗಳು ಸ್ಲಾಘಿಸುವಂತಾಗಿದೆ. ಶ್ರೀ ಗಣಪತಿಯವರು ಇನ್ನೂ ಅನೇಕ ಹೊಸ ಯೋಜನೆಗಳನ್ನು ಸಿದ್ಧಪಡಿಸಿದ್ದು ಕಾಂಡ್ಲಾ ಅರಣ್ಯವನ್ನು ಸಂರಕ್ಷಿತ ಅರಣ್ಯವೆಂದು ಘೋಷಿಸುವುದು, ಪ್ರವಾಸಿಗರಿಗೆ ಕಾಳಿ ನದಿಯಲ್ಲಿ ದೋಣ ಯ ಮೂಲಕ ಕಾಂಡ್ಲಾ ಪರಿಚಯ ಮಾಡಿಸುವುದು, ಕಾಂಡ್ಲಾ ಮಾಹಿತಿ ಕೇಂದ್ರ ಸ್ಫಾಪಿಸುವುದು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿರುತ್ತಾರೆ.


ಈ ವಿಚಾರ ಸಂಕೀರ್ಣದಲ್ಲಿ ಡಾ. ವಿ. ಎನ್. ನಾಯಕ ಕರ್ನಾಟಕದ ಕಾಂಡ್ಲಾ ಅರಣ್ಯದ  ವಸ್ತುಸ್ಥಿತಿ, ಸಂರಕ್ಷಣೆ, ಜೀವನೋಪಾಯದಲ್ಲಿ ಕಾಂಡ್ಲಾ ಬಳಕೆ ಮತ್ತು ಮೀನುಗಾರಿಕೆಯ ಬಗ್ಗೆ ಉಪನ್ಯಾಸ ನೀಡಿದರು. ಕರ್ನಾಟಕದಿಂದ ಈ ಸಮಾವೇಶದಲ್ಲಿ ವಿಜ್ಞಾನಿಗಳಾದ ಡಾ. ಮೆಸ್ತಾ, ಡಾ. ರೋಶಮೊನ್, ಡಾ. ಮಹಿಮಾ ಮತ್ತು ಜಿ.ಸಿ.ಕಾಲೇಜಿನ ಪ್ರಾದ್ಯಾಪಕರಾದ ಡಾ. ಶಿರೋಡಕರ, ಬಾಪೂಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಳಿಕಟ್ಟೆ ಮತ್ತು ದಿವೇಕರ ಕಾಲೇಜಿನ ಪ್ರದ್ಯಾಪಕ ಡಾ. ಕೇಶವ ಭಟ್ ಭಾಗವಹಿಸಿದ್ದರು. 
    
ಕಳೆದ 15 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯರು ನೀಡಿದ ವೈಜ್ಞಾನಿಕ ಸಲಹೆ ಸೂಚನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದರಿದ ವಿಜ್ಞಾನ ಕೇಂದ್ರದ ಯಾವತ್ತು ಸದಸ್ಯರ ವತಿಯಿಂದ ಡಾ. ವಿ. ಎನ್. ನಾಯಕ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದಾದ್ಯಂತ ಇದೇ ರೀತಿ ಇನ್ನೂ ಹೆಚ್ಚಿನ ಕಾಂಡ್ಲಾ ಸಂರಕ್ಷಣೆ ನಡೆಯುತ್ತಿರಲಿ ಎಂದು ಹಾರೈಸಿದ್ದಾರೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...