ಕಾರವಾರ: ‘ಸ್ವಚ್ಛತೆಗಾಗಿ ನಾನೇನು ಮಾಡುವೆ?’ಮತ್ತು ಕಿರು ಚಿತ್ರ ಸ್ಪರ್ಧೆ ಪ್ರಬಂಧ ಮತ್ತು ಕಿರು ಚಿತ್ರ ಸ್ಪರ್ಧೆ

Source: varthabhavan | By Arshad Koppa | Published on 31st August 2017, 8:32 AM | Coastal News | Guest Editorial |

ಕಾರವಾರ ಆಗಸ್ಟ 30 : ಹಳಿಯಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು  ಸಪ್ಟೆಂಬರ್ 5 ರಂದು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಕಿರು ಸಿನಿಮಾ ಸ್ಪರ್ಧೆಗಳನ್ನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಪ್ರಬಂಧ ಸ್ಪರ್ಧೆ ವಿಷಯ ‘ಸ್ವಚ್ಛತೆಗಾಗಿ ನಾನೇನು ಮಾಡುವೆ?’ಮತ್ತು ಕಿರು ಚಿತ್ರ ಸ್ಪರ್ಧೆ ವಿಷಯ “ನನ್ನ ದೇಶವನ್ನು ಸ್ವಚ್ಚವಾಗಿಡುವಲ್ಲಿ ನನ್ನ ಪಾತ್ರ” ಎಂದಾಗಿರುತ್ತದೆ.
    ಕಿರು ಚಿತ್ರ ಸ್ಪರ್ಧೆಯನ್ನು 2 ರಿಂದ 03 ನಿಮೀಷದೊಳಗಾಗಿ ತೋರಿಸುವಂತೆ ಚಿತ್ರಿಕರಣ ಮಾಡಬೇಕು.  ಗ್ರಾಮಗಳ ರಸ್ತೆ ಸ್ವಚ್ಚತೆ, ಶೌಚಾಲಯ ಸ್ವಚ್ಚತೆ, ಮಹಾತ್ಮರ ಪುತ್ಥಳಿಗಳ ಸ್ವಚ್ಚತೆ,ಬಸನಿಲ್ದಾಣ ಸ್ವಚ್ಛತೆ,  ಇತ್ಯಾದಿ ವಿಷಗಳ ಕುರಿತು ಕ್ರಿರು ಚಿತ್ರವನ್ನು ತಯಾರಿಸಿ ಅದನ್ನು ಸಿ ಡಿ ಮಾಡಿ, ಸಪ್ಟೆಂಬರ್ 15 ರೊಳಗಾಗಿ ಡಾ.ಮಾಲತಿ ಸಿ.ಹಿರೇಮಠ ಕಾರ್ಯಕ್ರಮ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳಿಯಾಳ, ಉತ್ತರಕನ್ನಡ ಜಿಲ್ಲೆ  ಇವರಿಗೆ ತಲುಪುವಂತೆ ಕಳುಹಿಸಿ ಕೊಡಲು  ಕೋರಲಾಗಿದೆ. 

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ ಆಗಸ್ಟ 30: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸೆಪ್ಟಂಬರ್ 4,5, ಮತ್ತು 6  ರಂದು ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು 
ಸೆಪ್ಟಂಬರ್ 4 ರಂದು ಸಂಜೆ 6.30ಕ್ಕೆ ಹಳಿಯಾಳದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು ಸೆಪ್ಟಂಬರ್ 5 ರಂದು ಬೆಳಗ್ಗೆ 9.30ಕ್ಕೆ ಹಳಿಯಾಳದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮದ್ಯಾಹ್ನ 12 ಗಂಟೆಗೆ ಜೋಯಿಡಾದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮದ್ಯಾಹ್ನ 3.30ಕ್ಕೆ ಹರ್ನೋಡಾದಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ಬಡಾಕಾನಶಿರಡಾದಿಂದ ಸಾಕಸಾಲಿಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವರು.  ಸಂಜೆ 5 ಗಂಟೆಗೆ ಬೀಮನಳ್ಳಿಯಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿಬೀಮನಳ್ಳಿಯಿಂದ ಬಾಗವತಿಯವರೆಗೆ ರಸೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವರು. ಸಂಜೆ  ಸೆಪ್ಟಂಬರ್ 6 ರಂದು ಬೆಳಗ್ಗೆ 9ಕ್ಕೆ ತಟ್ಟಗೇರಾದಲ್ಲಿ ಹೊಸ ಗ್ರಾಮ ಪಂಚಾಯಯತ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವರು.ಬಳಿಕ ನೂತನವಾಗಿ ನಿರ್ಮಿಸಿದ ಪಶುಚಿಕಿತ್ಸಾಲಯ ಮತ್ತು ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿಮ ಭಾಗವಹಿಸುವರು. ಬೆಳಗ್ಗೆ 11 ಗಂಟೆಗೆ ಬಸವಳ್ಳಿ ಉತಾರ ಗ್ರಾಮದ ವಿದ್ಯುತ್ತಿಕರಣಕ್ಕೆ ಚಾಲನೆ ನೀಡುವರು. ಮದ್ಯಾಹ್ನ 12 ಗಂಟೆಗೆ ಅಡಿಕೆಹೊಸುರುನಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ಅಡಿಕೆಹೊಸೂರುದಿಂದ ತಟ್ಟಗೇರಾ ರಸ್ತೆ ನಿರ್ಮಾಣ  ಕಾಮಗಾರಿಗೆ ಚಾಲನೆ ನೀಡುವರು. ಮದ್ಯಾಹ್ನ 1 ಗಂಟೆಗೆ ಸಾಂಬ್ರಾಣ ಯಲ್ಲಿ ನೂತನವಾಗಿ ನಿರ್ಮಿಸಿದ ವಲಯ ಅರಣ್ಯಾಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 2 ಗಂಟೆಗೆ ಕರ್ಲಕಟ್ಟಾದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಶಾಲಾ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 3 ಗಂಟೆಗೆ ಹಳಿಯಾಳದಲ್ಲಿ ಸಾರ್ವಜನಿಕರ ಭೇಟಿ ಮಾಡುವರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...