ಕಾರವಾರ:ಅ. 21 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Source: azad youth club | By Arshad Koppa | Published on 20th October 2017, 12:29 PM | Coastal News |

ಕಾರವಾರ: ದಿನಾಂಕ: 21-10-2017 ರಂದು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಸಾರ್ವಜನಿಕ ಶ್ರೀ ಮಹಾ ಕಾಳಿಮಾತಾ ಪೂಜಾ ಕಮಿಟಿ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕಾರವಾರ, ಡೆಪ್ಕೋ ಘಟಕ ಉತ್ತರ ಕನ್ನಡ, ಕಾರವಾರ ಜಿಲ್ಲಾ ಆಸ್ಪತ್ರೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ಬೆಳಿಗ್ಗೆ 9.30 ಕ್ಕೆ ಕಾರವಾರದ ಕೆ.ಹೆಚ್.ಬಿ.ಕಾಲೋನಿಯ ಹರಿಓಮ್ ಸರ್ಕಲ್ ಹತ್ತಿರ ಹಮ್ಮಿಕೊಳ್ಳಲಾಗಿದೆ. ರಕ್ತದಾನಿಗಳಿಗೆ ರಕ್ತದಾನದ ಸಂದೇಶ ಸಾರುವ ಟಿ-ಶರ್ಟಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರಪ್ರಶಸ್ತಿ ವಿಜೇತರು ಮತ್ತು ರಕ್ತದಾನಿಗಳು ಆಗಿರುವ ನಜೀರ್ ಅಹಮ್ಮದ್ ಯು ಶೇಖ್ (9448787765) ಗೆ ಸಂಪರ್ಕಿಸಬೇಕಾಗಿ ವಿನಂತಿ. ಎಂದು ಆಝಾದ್ ಯುಥ್ ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್‍ರವರು ತಿಳಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...