“ಶಿವ ಶಿವ ಎಂದರೆ ಭಯವಿಲ್ಲ”-ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ

Source: jagadish vaddina | By Arshad Koppa | Published on 22nd February 2017, 8:21 AM | Special Report |

ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಪರಿಗಣ ಸಲಾಗುತ್ತದೆ. ಕೈಲಾಸನಾಥ ಶಿವನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಇರುವುದು ಉಪವಾಸದಲ್ಲಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾತ ನೀರು ಮುಟ್ಟದೆ ಉಪವಾಸ ಮಾಡಿದರೆ ನಮ್ಮಲ್ಲಿ ಇರುವ ಕೆಟ್ಟ ಗುಣಗಳನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತವೆ. ದೇಹಕ್ಕೆ ಆರೋಗ್ಯದೊಂದಿಗೆ ನಮ್ಮಲ್ಲಿ ಇರುವ ಗುಣಗಳನ್ನು ನಿಯಂತ್ರಣದಲ್ಲಿಡುವ ವಿಶೇಷ ಸಿದ್ಧಿ ಶಿವರಾತ್ರಿ ವ್ರತಾ ಆಚರಣೆಯಿಂದ ಲಾಭ ನಮ್ಮಲ್ಲಿ ಇರುವ ಕೆಟ್ಟಗುಣಗಳೆಂದರೆ ಸಿಟ್ಟು, ಅಸೂಯೆ, ಅಂಧಕಾರ, ಅಜ್ಞಾನ, ಪ್ರತಿರೋಧ , ಸಾವು ಮತ್ತು ವಿನಾಶ. ಶಿವರಾತ್ರಿಯ ಉಪವಾಸವು ಈ ಎಲ್ಲ ಕೆಟ್ಟ ಗುಣಗಳ ಮೇಲೆ ಹತೋಟಿಯನ್ನಿಡುವ ಶಕ್ತಿಯುನ್ನು ನಮ್ಮಲ್ಲಿ ನೀಡುತ್ತದೆ.

ಶಿವರಾತ್ರಿಯಲ್ಲಿ ನಿತ್ಯ ಶಿವರಾತ್ರಿ, ಪಕ್ಷ ಶಿವರಾತ್ರಿ, ಮಾಸ ಶಿವರಾತ್ರಿ, ಯೋಗ ಶಿವರಾತ್ರಿ, ಮಹಾ ಶಿವರಾತ್ರಿ ಎಂದು ಐದು ಭಾಗಗಳಿವೆ. ಶಿವನ ಎಂಟು ಪವಿತ್ರ ವ್ರತಗಳಲ್ಲಿ ಶಿವರಾತ್ರಿಯೂ ಒಂದು. ಶಿವನು ತ್ರಿಲೋಕ ಸಂಚಾರಿ ಮತ್ತು ಬ್ರಹ್ಮ ಸ್ವರೂಪಿ ಎಂದು ಈ ಜಗತ್ತಿಗೆ ತೋರಿಸಲು ಭೂಮಿಯಿಂದ ಆಕಾಶದವರೆಗೂ ಎತ್ತರವಾಗಿ ಶಿವಲಿಂಗದ ರೂಪದಲ್ಲಿ ಜ್ಯೋತಿಯಾಗಿ ನಿಂತ ದಿನವೇ ಶಿವರಾತ್ರಿ. ಶಿವರಾತ್ರಿಯು ಮಾಘ ಮಾಸದ ಬಹುಳ ಚತುರ್ದಶಿಯಂದು ಬರುವುದು.

ನಮ್ಮ ದೇಶದಲ್ಲಿ ಒಟ್ಟೂ 12 ಜ್ಯೋತಿರ್ಲಿಂಗಗಳಿವೆ. ಅವುಗಳಲ್ಲಿ ಮುಖ್ಯವಾದವು ಸೌರಾಷ್ಟ್ರದ ಸೋಮನಾಥೇಶ್ವರ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲೇಶ್ವರ, ವಾರಣಾಸಿಯ ವಿಶ್ವೇಶ್ವರ, ಹಿಮಾಲಯದ ಕೇದಾರೇಶ್ವರ.

ಶಿವನನ್ನು ನಾವು ಲಿಂಗರೂಪದಲ್ಲಿ ಪೂಜಿಸುತ್ತೇವೆ. ಶಿವಲಿಂಗದಲ್ಲಿ ಎರಡು ವಿಧ. ಸ್ವಯಂಭೂ ಮತ್ತು ಮಾನವ ನಿರ್ಮಿತ ಲಿಂಗಗಳು. ಸ್ವಯಂಭೂ ಲಿಂಗ ಪ್ರಕೃತಿಯ ಸಹಜವಾಗಿ ತನ್ನಿಂತಾನೇ ಕಾಣ ಸಿಕೊಳ್ಳುತ್ತವೆ. ಇದಕ್ಕೆ ಉದಾಹರಣೆಯೆಂದರೆ ಅಮರನಾಥ ಗುಹೆಯಲ್ಲಿರುವ ಶಿವಲಿಂಗ. ಮಾನವ ನಿರ್ಮಿತ ಶಿವಲಿಂಗವೆಂದರೆ ಲೋಹ ಮತ್ತು ಶಿಲೆಗಳಿಂದ ಮತ್ತು ವಿಶೇಷ ಸಂದರ್ಭಗಳಲ್ಲಿ ಗಂಧ, ಬೆಲ್ಲ, ಮರಳು, ಹಿಟ್ಟು ಮತ್ತು ಹೂಗಳಿಂದ ನಿರ್ಮಿಸುವ ಲಿಂಗ. ಲೋಹ ಮತ್ತು ಶಿಲೆಗಳಿಂದ ಮಾಡಿದ ಲಿಂಗಗಳು ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಶಿವಪುರಾಣದಲ್ಲಿ ಶಿವರಾತ್ರಿ ಬಗ್ಗೆ ಒಂದು ಸಣ್ಣ ಕಥೆ ಇದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಠರು ಎಂದು ಜಗಳವಾಯಿತು. ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆ ವಹಿಸಲು ಶಿವನನ್ನು ಕೇಳಿಕೊಂಡರು. ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯ ನಿಂತನು. ಬೆಂಕಿಯ ತೀಕ್ಷ್ಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು. ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣುವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು.

‘ಓಂ ನಮಃ ಶಿವಯ’ ಮಂತ್ರವನ್ನು ಶಿವರಾತ್ರಿಯ ದಿನ ಶ್ರದ್ಧಾ, ಭಕ್ತಿಯಿಂದ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಚಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ.


ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ ಕಾರವಾರ.
ಮೋ ನಂ. 9632332185
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...