ಕಾರವಾರ: ಅ.3ರಿಂದ ಸೇನಾ ಭರ್ತಿ ಅಭಿಯಾನ

Source: varthabhavan | By Arshad Koppa | Published on 25th September 2016, 9:06 PM | Coastal News |

ಕಾರವಾರ ಸೆಪ್ಟಂಬರ 24 : ಅರ್ಟಲರಿ ಸೆಂಟರ್ ನಾಸಿಕ್‍ನಲ್ಲಿ ಸೇವಾನಿರತ ಸೈನಿಕರ ಮಕ್ಕಳು, ಒಬ್ಬ ಸಹೋದರ, ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಮಕ್ಕಳು, ಮಾಜಿ ಸೈನಿಕರ ಮಕ್ಕಳು ಹಾಗೂ ಅವರ ಅವಲಂಬಿತರ ಮಕ್ಕಳಿಗಾಗಿ ಸೇನಾ ಭರ್ತಿ  ರ್ಯಾಲಿಯನ್ನು ಅಕ್ಟೋಬರ 3 ರಿಂದ 5 ರವರೆಗೆ ಆಯೋಜಿಸಲಾಗಿದೆ. 
ಸಿಪಾಯಿ ಜನರಲ್ ಡ್ಯೂಟಿಗೆ  17 ರಿಂದ 21 ವರ್ಷ ವಯೋಮಿತಿಯೊಳಗಿದ್ದು 10ನೇ ತರಗತಿಯಲ್ಲಿ ಶೇ.45 ಅಂಕ ಪಡೆದಿರಬೇಕು. ಹೌಸ್‍ಕೀಪರ್ ಹಾಗೂ ಮೆಸ್ ಕೀಪರ್ ಹುದ್ದೆಗಳಿಗೆ 8ನೇ ತರಗತಿಯಲ್ಲಿ ಉತ್ತಿರ್ಣತೆ ಮತ್ತು 17 ರಿಂದ 23 ವರ್ಷ ವಯೋಮಿತಿಯೊಳಗಿರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ಹಾಗೂ ಮಾಜಿ ಸೈನಿಕರ ಮಕ್ಕಳ ದೃಡೀಕರಣ ಪತ್ರವನ್ನು ತಮ್ಮ ತಮ್ಮ ಅಭಿಲೇಖಾ ಕಾರ್ಯಾಲಯದಿಂದ ಪಡೆದು, ರಾಜ್ಯದ ಅಭ್ಯರ್ಥಿಗಳು ಅರ್ಟಲರಿ ಸೆಂಟರ್, ನಾಸಿಕನಲ್ಲಿ ಅ.3 ರಂದು ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಬಹುದು. 
  ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಎಂ.ಜಿ. ರಸ್ತೆ ಕಾರವಾರ ದೂರವಾಣಿ ಸಂಖ್ಯೆ 08382-226538 ನ್ನು ಸಂಪರ್ಕಿಸಬಹುದು. 

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...