ಕಾರವಾರ:ರೋಟರಿ ಸಂಸ್ಥೆಯಿಂದ ಸಹಜ ಯೋಗ ಶಿಬಿರ

Source: rotary; club | By Arshad Koppa | Published on 18th March 2017, 11:26 AM | Coastal News |

ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಇವರು ದಿನಾಂಕ: 11-03-2017ರಂದು ಸಾಯಂಕಾಲ 6.00 ಘಂಟೆಗೆ ರೋಟರಿ ಶತಾಬ್ದಿ ಭವನದಲ್ಲಿ ಮಾತಾ ನಿರ್ಮಲಾದೇವಿ ಚಾರಿಟೆಬಲ್ ಟ್ರಸ್ಟ್ ರವರ ಸಹಯೋಗದೊಂದಿಗೆ “ಸಹಜ ಯೋಗ ಶಿಬಿರವನ್ನು” ಪ್ರಾರಂಭಿಸಲಾಯಿತು.  ಈ ಶಿಬಿರವು ಪ್ರತೀ ಶನಿವಾರ ನಡೆಯಲಿದೆ ಎಂದು ತಿಳಿಸಿದ್ದಾರೆ.  ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ. ಅಮರನಾಥ ಶೇಟ್ಟಿ ಎಲ್ಲರನ್ನು ಸ್ವಾಗತಿಸುತ್ತ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತೀ ಅವಶ್ಯಕ.  ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ವಿನಂತಿಸಿಕೊಂಡರು.  ನಂತರ ನಿರ್ಮಲಾದೇವಿ ಟ್ರಸ್ಟಿನ ಶ್ರೀಮತಿ ನೇಹಾಲ್ ವರ್ಮಾ ಹಾಗು ಇತರರು ಯೋಗದ ಮಹತ್ವ, ಸಹಜ ಯೋಗದಿಂದಾಗುವ ಲಾಭಗಳು ಹಾಗೂ ಸಹಜ ಯೋಗವನ್ನು ಮಾಡುವ ವಿಧಾನಗಳನ್ನು ವಿವರಿಸಿ ಹೇಳಿದರು.  ಈ ಶಿಬಿರದಲ್ಲಿ 100ಕ್ಕಿಂತ ಹೆಚ್ಚಿನ ಸಾರ್ವಜನಿಕರು ಭಾಗವಹಿಸಿದ್ದರು.  ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ರೋ. ಪ್ರಸನ್ನ ತೆಂಡೂಲ್ಕರ, ರೋ. ರಾಜು ಪಾಟೀಲ, ರೋ. ಎಲ್.ಎಸ್. ಫರ್ನಾಂಡಿಸ್, ರೋ.ಸುನೀಲ ಸೋನಿ, ರೋ. ಜಿತೇಂದ್ರ ಥನ್ನಾ, ರೋ. ರಾಜೇಶ ವೆರ್ಣೇಕರ, ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅರ್ಚನಾ ಶೆಟ್ಟಿ, ಸದಸ್ಯರಾದ ಶ್ರೀಮತಿ  ಜ್ಯೋತಿ ಶೆಟ್ಟಿಗಾರ, ಶ್ರೀಮತಿ ಪ್ರಜ್ಞಾ ಪಾಟೀಲ್, ಶ್ರೀಮತಿ ಸುಶಿಲಾ ಗಾಂವಕರ, ಶ್ರೀಮತಿ ಯಾಮಿನಿ ಥನ್ನಾ, ರೋಟರ್ಯಾಕ್ಟ್ ಸಂಸ್ಥೆಯ ಸಚೀನ್ ನಾಯ್ಕ, ಜುಮೇದ ಸೈಯದ್ ಉಪಸ್ಥಿತರಿದ್ದರು.   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...