ಕಾರವಾರ: ರೋಟರಿ v/s ರೋಟರ್ಯಾಕ್ಟ್ ಕ್ರಿಕೆಟ್ ಪಂದ್ಯ

Source: rotary club | By Arshad Koppa | Published on 22nd March 2017, 8:08 AM | Sports News |

ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಹಾಗೂ ರೋಟರ್ಯಾಕ್ಟ್ ಕ್ಲಬ್ ಕಾರವಾರ ರವರ ಮಧ್ಯೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು.  ಪ್ರಾರಂಭದಲ್ಲಿ ರಾಮಕೃಷ್ಣಾಶ್ರಮದ  ಶ್ರೀ ಭಾವೇಶನಂದ ಸ್ವಾಮಿಜಿಯವರು ಪಂದ್ಯವನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಆಶಿರ್ವಧಿಸಿದರು.  ರೋಟರಿ ಸಂಸ್ಥೆಯವರು ಟಾಸ್ ವಿನ್ ಆಗಿ ಪ್ರಥಮ ಬ್ಯಾಟಿಂಗ್ ಆಯ್ದುಕೊಂಡು, 20 ಓವರ್‍ಗಳಲ್ಲಿ 142 ರನ್‍ಗಳನ್ನು ಮಾಡಿದರು. ನಂತರ ಬ್ಯಾಟ್ ಮಾಡಿದ ರೋಟರ್ಯಾಕ್ಟ್ ಕ್ಲಬ್‍ನವರು ಪಂದ್ಯವನ್ನು 5 ವಿಕೆಟ್‍ನಿಂದ ಜಯಗಳಿಸಿದರು.  ಪಂದ್ಯದಲ್ಲಿ 42 ಹೆಚ್ಚಿನ ರನ್ನಗಳನ್ನು ಗಳಿಸಿದ ರೋಟರ್ಯಾಕ್ಟ್ ಕ್ಲಬ್ಬಿನ ಪ್ರಸಾದ ಹರಿಕಂತ್ರ ರವರಿಗೆ ‘ಮ್ಯಾನ್ ಆಫ್ ದಿ ಮ್ಯಾಚ್’ ಘೋಶಿಸಿ ನಗದು ಬಹುಮಾನ ನೀಡಲಾಯಿತು ಹಾಗು ಜುನೇದ್ ಸೈಯದ್ ರವರು 30 ರನ್ ಮಾಡಿದರು.  ಹಾಗೂ ರೋಟರಿ ಕ್ಲಬ್ ಪರವಾಗಿ 29 ರನ್ ಗಳಿಸಿ 3 ವಿಕೆಟ್ ಪಡೆದ ರೋ. ರಾಘವೇಂದ್ರ ಪ್ರಭುರವರನ್ನು ಆಲ್‍ರೌಂಡರ್ ಎಂದು ಘೋಷಿಸಿ ನಗದು ಬಹುಮಾನ ನೀಡಲಾಯಿತು.  ರೋಟರಿ ಕ್ಲಬ್ ಪರವಾಗಿ ಅಧ್ಯಕ್ಷರಾದ ರೋ. ಅಮರನಾಥ ಶೆಟ್ಟಿ ಹಾಗೂ ರೋಟರ್ಯಾಕ್ಟ್ ಪರವಾಗಿ ಕು. ಸಚಿನ್ ನಾಯ್ಕ ಸಾರಥ್ಯ ವಹಿಸಿದ್ದರು.   ರೋ. ಕೇಶವ ಕಾಮತರವರು  ‘ಮ್ಯಾನ್ ಆಫ್ ದಿ ಮ್ಯಾಚ್’ ಪಡೆದವರಿಗೆ ನಗದು ಬಹುಮಾನ ಹಾಗೂ ಟ್ರಾಫಿಯನ್ನು ಪ್ರಾಯೋಜಿಸಿದ್ದರು. ರೋ. ಕೆ.ಡಿ.ಪೆಡ್ನೇಕರ, ರೋ. ಸುನೀಲ ಸೋನಿ, ರೋ. ವಿನೋದ ಪಾವಸ್ಕರ ರವರು ವಿವಿಧ ಪಂದ್ಯಾಳುಗಳಿಗೆ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಿದರು. ರೋ. ಅಮರನಾಥ ಶೆಟ್ಟಿ, ರೋ. ಎಲ್. ಎಸ್.ಫರ್ನಾಂಡಿಸ್, ರೋ. ರಾಘವೇಂದ್ರ ಪ್ರಭು, ರೋ. ನಾಗರಾಜ ಜೋಶಿ, ರೋ. ಸುರಜ ಗಾಂವಕರ, ರೋ. ರಾಜು ಪಾಟೀಲ್ ಹಾಗು ರೋ. ರಾಜೇಶ ವೆರ್ಣೆಕರ ಸಹಕರಿಸಿದರು.   
 

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...