ಕಾರವಾರ: ಸೆ ೨೧ ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 22nd September 2017, 3:15 PM | Coastal News |


ಕಾರವಾರ ಸಪ್ಟಂಬರ್ 22 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 227.9 ಮಿ.ಮೀ ಮಳೆಯಾಗಿದ್ದು ಸರಾಸರಿ 20.7 ಮಿ.ಮೀ ಮಳೆ ದಾಖಲಾಗಿದೆ. ಸಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 253.1 ಮಿ.ಮೀ ಇದ್ದು ಇದುವರೆಗೆ ಸರಾಸರಿ 209 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 46 ಮಿ.ಮೀ,  ಭಟ್ಕಳ 25.4 ಮಿ.ಮೀ, ಹಳಿಯಾಳ 3.2 ಮಿ.ಮೀ. ಹೊನ್ನಾವರ 36.6 ಮಿ.ಮೀ, ಕಾರವಾರ 38.6 ಮಿ.ಮೀ, ಕುಮಟಾ 24.4 ಮಿ.ಮೀ, ಮುಂಡಗೋಡ 3 .ಮಿ.ಮೀ, ಸಿದ್ದಾಪುರ 9.2 ಮಿ.ಮೀ, ಶಿರಸಿ 17.5 ಮಿ.ಮೀ., ಜೋಯಡಾ 17.4 ಮಿ.ಮೀ, ಯಲ್ಲಾಪುರ 6.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :. 
ಕದ್ರಾ: 34.50ಮೀ (ಗರಿಷ್ಟ), 31.75 ಮೀ (ಇಂದಿನ ಮಟ್ಟ), 7169 ಕ್ಯೂಸೆಕ್ಸ್ (ಒಳಹರಿವು) 4801 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 70.25 ಮೀ. (ಇಂದಿನ ಮಟ್ಟ), 4460 ಕ್ಯೂಸೆಕ್ಸ್ (ಒಳ ಹರಿವು) 4635 (ಹೊರ ಹರಿವು ) ಸೂಪಾ: 564ಮೀ (ಗ), 547.50 ಮೀ (ಇ.ಮಟ್ಟ), 10876.438 ಕ್ಯೂಸೆಕ್ಸ್  (ಒಳ ಹರಿವು), (ಹೊರ ಹರಿವು ಇರುವದಿಲ್ಲ ) ತಟ್ಟಿಹಳ್ಳ: 468.38ಮೀ (ಗ), 450.96 ಮೀ (ಇ.ಮಟ್ಟ), 57.ಕ್ಯೂಸೆಕ್ಸ (ಒಳ ಹರಿವು ) 57.ಕ್ಯೂಸೆಕ್ಸ (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 436.07 ಮೀ (ಇ.ಮಟ್ಟ), 429 ಕ್ಯೂಸೆಕ್ಸ್ (ಒಳ ಹರಿವು) 1070 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.62 ಮೀ (ಇ.ಮಟ್ಟ) 1728 ಕ್ಯೂಸೆಕ್ಸ್ (ಒಳ ಹರಿವು) 3762 ಕ್ಯೂಸೆಕ್ಸ್  (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1797 ಅ (ಇಂದಿನ ಮಟ್ಟ).  5947 ಕೂಸೆಕ್ಸ (ಒಳ ಹರಿವು) 1332.43 ಕ್ಯೂಸೆಕ್ಸ್(ಹೊರ ಹರಿವು) 
                          
                          ಮತದಾರರಿಗೆ ಮಾಹಿತಿ 
ಕಾರವಾರ ಸೆಪ್ಟಂಬರ್ 21 : ಮತದಾರರ ಪಟ್ಟಿಯಲ್ಲಿ ಹೆಸರು ಸೆರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರ ಹೆಸರನ್ನು ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು,  ಮತದಾರರು ಸೆಪ್ಟಂಬರ 23 ರೊಳಗಾಗಿ ಸಂಬಂಧಿಸಿದ ಮತಗಟ್ಟಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರುಗಳು ನೊಂದಾವಣ ಯಾಗಿರುವ ಬಗ್ಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು/ತಹಶೀಲ್ದಾರರ ಕಛೆರಿಗಳಿಗೆ ಸಂಪರ್ಕಿಸಿ ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಂಡು, ಒಂದಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ  ಹೆಸರುಗಳು ನೋಂದಾವಣೆಯಾಗಿದ್ದಲ್ಲಿ ಅಂತಹ ಹೆಚ್ಚುವರಿ ನೋಂದಾವಣ ಗಳನ್ನು ನಿಗದಿತ ನಮೂನೆ-7 ಭರ್ತಿ ಮಾಡಿಕೊಟ್ಟು ರದ್ದು ಪಡಿಸಿಕೊಳ್ಳಬೇಕು. 
ಮತಗಟ್ಟೆ ಅಧಿಕಾರಿಗಳಿಗೆ ಸೂಚನೆಗಳು : ಮತಗಟ್ಟೆ ಮಟ್ಟದ ಅಧಿಕಾರಿ(ಬಿ.ಎಲ್.ಒ) ಅಂತ ಕಾರ್ಯನಿರ್ವಹಿಸುತ್ತಿರುವರು ಸೆಪ್ಟಂಬರ 28 ರೊಳಗಾಗಿ ತಮ್ಮ  ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಮರಣ ಹೊಂದಿದ, ಮದುವೆ ಇನ್ನಿತರೇ ಕಾರಣಗಳಿಂದ ಬೇರೆ ಕಡೆಗೆ ಹೋಗಿರುವಂತಹ ಮತದಾರರನ್ನು ಗುರುತಿಸಿ, ಇದನ್ನು ಸಮರ್ಥಿಸುವ ಮರಣ ದಾಖಲೆ ಹಾಗೂ ಇತರೆ ದಾಖಲೆಗಳನ್ನು  ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ಸಂಬಂಧಿತರಿಂದ ಪಡೆದು ಅಂತಹ ಮತದಾರರ ಹೆಸರುಗಳನ್ನು  ಮತದಾರರ ಪಟ್ಟಿಯಿಂದ ಕಡಿಮೆ ಮಾಡಲು ಕ್ರಮ ಜರುಗಿಸತಕ್ಕದ್ದು, ಹಾಗೂ ಈ ಬಗ್ಗೆ ಅಕ್ಟೋಬರ 3 ರಂದು ಕಡಿಮೆ ಮಾಡಿದ ಮತದಾರರ ವಿವರಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next