ಕಾರವಾರ : ಶೇ ೧೭ ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: so english | By Arshad Koppa | Published on 18th September 2017, 8:22 AM | Coastal News |

ಕಾರವಾರ ಸಪ್ಟಂಬರ್ 16 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 205.8 ಮಿ.ಮೀ ಮಳೆಯಾಗಿದ್ದು ಸರಾಸರಿ 18.7 ಮಿ.ಮೀ ಮಳೆ ದಾಖಲಾಗಿದೆ. ಸಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 253.1 ಮಿ.ಮೀ ಇದ್ದು ಇದುವರೆಗೆ ಸರಾಸರಿ 102.2 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 8.4 ಮಿ.ಮೀ,  ಭಟ್ಕಳ 18 ಮಿ.ಮೀ, ಹಳಿಯಾಳ 0ಮಿ.ಮೀ. ಹೊನ್ನಾವರ 46.8 ಮಿ.ಮೀ, ಕಾರವಾರ 7.6 ಮಿ.ಮೀ, ಕುಮಟಾ 90.6 ಮಿ.ಮೀ, ಮುಂಡಗೋಡ 6..ಮಿ.ಮೀ, ಸಿದ್ದಾಪುರ 9.4 ಮಿ.ಮೀ, ಶಿರಸಿ 17 ಮಿ.ಮೀ., ಜೋಯಡಾ 1 ಮಿ.ಮೀ, ಯಲ್ಲಾಪುರ 1 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :. 
ಕದ್ರಾ: 34.50ಮೀ (ಗರಿಷ್ಟ), 31.05 ಮೀ (ಇಂದಿನ ಮಟ್ಟ), 2868 ಕ್ಯೂಸೆಕ್ಸ್ (ಒಳಹರಿವು) 2508 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69.50 ಮೀ. (ಇಂದಿನ ಮಟ್ಟ), 923 ಕ್ಯೂಸೆಕ್ಸ್ (ಒಳ ಹರಿವು) 2076 (ಹೊರ ಹರಿವು ) ಸೂಪಾ: 564ಮೀ (ಗ), 546.55 ಮೀ (ಇ.ಮಟ್ಟ), 2531.244 ಕ್ಯೂಸೆಕ್ಸ್  (ಒಳ ಹರಿವು), 755.29 ಕ್ಯೂಸೆಕ್ಸ್  (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 450.94 ಮೀ (ಇ.ಮಟ್ಟ),  (ಒಳ ಹರಿವು ಇರುವುದಿಲ್ಲ ) 69.0 (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 435.98 ಮೀ (ಇ.ಮಟ್ಟ), 41246 ಕ್ಯೂಸೆಕ್ಸ್ (ಒಳ ಹರಿವು) 91 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.47 ಮೀ (ಇ.ಮಟ್ಟ) 2093ಕ್ಯೂಸೆಕ್ಸ್ (ಒಳ ಹರಿವು) 1539 ಕ್ಯೂಸೆಕ್ಸ್  (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1795.35 ಅ (ಇಂದಿನ ಮಟ್ಟ).  4946 ಕೂಸೆಕ್ಸ (ಒಳ ಹರಿವು) 2118.69ಕ್ಯೂಸೆಕ್ಸ್(ಹೊರ ಹರಿವು) 

ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ  (CMEGP) ಯಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ
  
 
 ಕಾರವಾರ ಸಪ್ಟೆಂಬರ್-16 ಪ್ರಸಕ್ತ ಸಾಲಿನಲ್ಲಿ “ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ  (CMEGP) ಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕಾರವಾರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಸದ್ರ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಸೇವಾ ಘಟಕಗಳನ್ನು ಪ್ರಾರಂಭಿಸುವ ಕುರಿತು ಸಾಲ ಪಡೆಯಲು ಇಚ್ಛಿಸುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಮತ್ತೊಮ್ಮೆ ಅರ್ಜಿಯನ್ನು ಆಹ್ವಾನಿಸಲಾಗಿದೆ.  ಘಟಕದ ಗರಿಷ್ಠ ಯೋಜನಾ ವೆಚ್ಚ ರೂ.10.00 ಲಕ್ಷ ಆಗಿರುತ್ತದೆ. ಸಾಮಾನ್ಯ  ಅಭ್ಯರ್ಥಿಗಳಿಗೆ  21 ರಿಂದ 35 ವರ್ಷ ವಯೋಮಿತಿ, ಪ.ಜಾತಿ/ಪ.ಪಂ. ಮಹಿಳೆ, ಓ.ಬಿ.ಸಿ., ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು ಗರಿಷ್ಠ 45 ವರ್ಷ ವಯೋಮಿತಿ. ಅಭ್ಯರ್ಥಿಗಳು 8 ನೇ ತರಗತಿ ಪಾಸಾಗಿರಬೇಕು.  ಅರ್ಜಿಯನ್ನು www.cmegp.kar.nic.in  ನಲ್ಲಿ ಆನ್‍ಲೈನ್ ಮೂಲಕ ಭರ್ತಿ ಮಾಡಲು ಕೊನೆಯ ದಿನಾಂಕ ಅಕ್ಟೋಬರ್ 2 ಆಗಿರುತ್ತದೆ.  ಆನ್‍ಲೈನ್ ಮೂಲಕ ಭರ್ತಿ ಮಾಡಿ ಪಡೆದ ಅರ್ಜಿಯ ಪ್ರತಿಯನ್ನು ದ್ವಿ-ಪ್ರತಿಯಲ್ಲಿ ವೆಬ್‍ಸೈಟ್‍ನಲ್ಲಿ ಸೂಚಿಸಿದ ಎಲ್ಲಾ ದಾಖಲೆಗಳನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ ಅಥವಾ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಡಾ|| ಪಿಕಳೆ ರಸ್ತೆ, ಕಾರವಾರ ರವರಿಗೆ ದಿನಾಂಕ: 07-10-2017 ರೊಳಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ  ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ ಕಛೇರಿಯ  ದೂರವಾಣ  ಸಂಖ್ಯೆ: (08382) 282302, 282367, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರವಾರ ಕಛೇರಿಯ  ದೂರವಾಣ  ಸಂಖ್ಯೆ: (08382) 226506 ಅಥವಾ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು  ಸಂಪರ್ಕಿಸಬಹುದಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...