ಕಾರವಾರ: “ಕೂಡಿ ಬಾಳಿದರೆ ಸವರ್ಗ ಸುಖ”-ರಾಷ್ಟ್ರೀಯ ಏಕತೆ ದಿನಾಚರಣೆ – ಅಕ್ಟೋಬರ್ 31 

Source: jagadish | By Arshad Koppa | Published on 28th October 2017, 11:59 PM | Coastal News | Special Report |

ಭಾರತ ಸರಕಾರವು 2014 ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತೆ ದಿನಾಚರಣೆಯನ್ನು’ ಆಚರಿಸಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆಯಿತ್ತರು. ಭಾರತವನ್ನು ಏಕೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಭಾರತೀಯ ಗಣರಾಜ್ಯದ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾದ ಐರನ್‍ಮ್ಯಾನ್ ಆಫ್ ಇಂಡಿಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಹುಟ್ಟು ಹಬ್ಬದ ವಾರ್ಷಿಕ ಸ್ಮರಣಾರ್ಥವಾಗಿ ರಾಷ್ಟ್ರೀಯ ಏಕತೆ ದಿನಾಚರಣೆಯನ್ನು ಆಚರಿಸಲಾಗುತ್ತದೆ.


    ರಾಷ್ಟ್ರೀಯ ಏಕತಾ ದಿನಾಚರಣೆ ಅಧಿಕೃತ ಹೇಳಿಕೆಯ ಪ್ರಕಾರ, ರಾಷ್ಟ್ರೀಯ ಏಕತೆ ದಿನವು ನಮ್ಮ ದೇಶದ ಅಂತರ್ಗತ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಏಕೀಕರಿಸುವುದು, ಏಕತೆ, ಸಮಗ್ರತೆ ಮತ್ತು ಭದ್ರತೆಗೆ ನಿಜವಾದ ಮತ್ತು ಸಂಭವನೀಯ ಬೆದರಿಕೆಗಳನ್ನು ತಡೆದುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ.
    ಸರ್ದಾರ್ ವಲ್ಲಭಬಾಯಿ ಪಟೇಲರು ಭಾರತದ ಗೃಹ ಸಚಿವರಾಗಿ ಅವರು ತಮ್ಮ ಅವಧಿಯಲ್ಲಿ 550 ಸ್ವತಂತ್ರ ರಾಜಪ್ರಭುತ್ವದ ರಾಜ್ಯಗಳನ್ನು 1947 ರಿಂದ 1949 ರಲ್ಲಿ ಸ್ವಾತಂತ್ರ್ಯ ಕಾಯಿದೆ (1947) ಯಿಂದ ಭಾರತದೇಶವನ್ನು ಏಕೀಕರಣಗೊಳಿಸಿದರು. ಅವರನ್ನು ‘ಬಿಸ್ಮಾರ್ಕ ಆಫ್ ಇಂಡಿಯಾ’ ಎಂದು ಕರೆಯುತ್ತಾರೆ. ಭಾರತದ ಪ್ರಧಾನ ಮಂತ್ರಿಗಳು ‘ರನ್ ಫಾರ್ ಯೂನಿಟಿ’ ಎಂದು ಹೇಳಿ ಚಾಲನೆ ನಿಡಿದರು.
    ಭಾರತವು ವಿವಿಧ ಬುಡಕಟ್ಟುಗಳ ಅನೇಕ ಧರ್ಮಗಳ ಜಾತಿಗಳ ಕೋಮುಗಳ ಅನೇಕ ಭಾಷೆಗಳ ನೆಲವಿದು. ಈ ವಿವಿಧತೆ ವರದಾನವೂ ಮತ್ತು ಶಾಪವೂ ಎಂದು ಸಾಬೀತಾಗಿರುತ್ತದೆ. ವೈವಿಧ್ಯತೆಯು ಸ್ವತಂತ್ರ ವಿಚಾರವನ್ನು ಪ್ರೋತ್ಸಾಹಿಸುತ್ತದೆ. ಅದು ವಿವಿಧ ಸಾಮಾಜಿಕ ಭೌಗೋಳಿಕ ದೃಷ್ಟಿಕೋನಗಳಿಂದ ಜನ ಜೀವನವನ್ನು ಅಧ್ಯಯನ ಮಾಡುವುದಕ್ಕೆ ಮತ್ತು ಪ್ರಶಂಸಿಸುವುದಕ್ಕೆ ಸ್ಪೂರ್ತಿದಾಯಕವಾದುದೆಂದು ತಿಳಿದು ವರವಾಗಿ ಪ್ರಸಿದ್ಧ ಪಡೆದಿದೆ. ಜಾತಿ ಮತ ಪಂಥ ವರ್ಣಗಳ ಆಧಾರದಿಂದ ಸ್ಪೋಟಕ ಉದ್ದೇಶವನ್ನು ಸಾಧಿಸುವುದರಿಂದ ಶಾಪವೆಂದು ಪರಿಗಣಿತವಾಗಿದೆ.
    ನಮ್ಮ ದೇಶದಲ್ಲಿರುವ ವೈವಿಧ್ಯತೆಯನ್ನು ಸದುಪಯೋಗಪಡಿಸಿಕೊಂಡು ಬ್ರಿಟಿಷರು ಎರಡೂವರೆ ಶತಮಾನಗಳ ಕಾಲ “ಒಡೆದು ಆಳುವ ನೀತಿ”ಯನ್ನು ತಮ್ಮ ಆಡಳಿತ ಕಾಲಕ್ಕೆ ಯಶಸ್ವಿಗೊಳಿಸಿದರೆಂದು ಹೇಳುವುದರಲ್ಲಿ ಸಂದೇಹವಿಲ್ಲ. ಭಾರತದೇಶವು ಸ್ವಾತಂತ್ರ್ಯ ಪಡೆದು 70 ವರ್ಷದ ನಂತರವು ಸಹ ಭಾರತದ ರಾಷ್ಟ್ರೀಯ ರಾಜಕೀಯ ಪಕ್ಷಗಳು ಸಹ ‘ಒಡೆದು ಆಳುವ ನೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಭಾರತೀಯ ತತ್ವಜ್ಞಾನಿಗಳು ಮತ್ತು ಮಹಾಪುರುಷರೆಲ್ಲರೂ ವೈವಿದ್ಯತೆ ವರದಾನವೆಂಬುದನ್ನು ಗುರುತಿಸಿದರಲ್ಲದೆ ಭಾರತೀಯರಲ್ಲಿ ಐಕ್ಯತೆ ತರಲು ಅವಿರತ ಶ್ರಮ ವಹಿಸಿದರು. ಭಾರತೀಯ ಸಂಸ್ಕøತಿಯ ಸಾದೃಶ್ಯೀಕರಣ ಮತ್ತು ವಿವಿದ ಧರ್ಮ ಸಂಸ್ಕøತಿಗಳ ಬಹುದೀರ್ಘ ಪ್ರಕ್ರಿಯೆಯಾಗಿದೆ. ಸಾಂಸ್ಕøತಿಕ ಪರಂಪರೆಯನ್ನು ರಕ್ಷಿಸಿ ಮತ್ತು ಉಳಿಸಿಕೊಂಡು ಬರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ರಾಷ್ಟ್ರೀಯ ಭಾವೈಕ್ಯತೆ ಎಂದರೆ ಏಕತಾ ಭಾವನೆ.
    ಜವಾಹರಲಾಲ ನೆಹರೂ ಅವರು ಐಕ್ಯತೆಯ ಬಗೆಗೆ ಹೀಗೆ ಹೇಳುತ್ತಾರೆ ‘ವೈವಿಧ್ಯತೆಯಲ್ಲಿ ಏಕತೆ’ಯನ್ನು ಭಾವೈಕ್ಯತೆಯ ಮುಖಾಂತರ ಮಾತ್ರ ಸಾಧಿಸಬಹುದು. ಭಾವೈಕ್ಯತೆಯನ್ನು ನಮ್ಮ ಮನಸ್ಸು-ಹೃದಯಗಳ ಐಕ್ಯತೆ ಪ್ರತ್ಯೇಕತಾ ಭಾವನೆಗಳ ದಮನ ಎಂದು ಅರ್ಥೈಸಿದರೆ, ಡಾ|| ಎಸ್. ರಾಧಾಕೃಷ್ಣನರವರು ಹೇಳಿರುವಂತೆ “ರಾಷ್ಟ್ರೀಯ ಐಕ್ಯತೆಯನ್ನು ಇಟ್ಟಂಗಿ ಸುತ್ತಿಗೆ ಇತ್ಯಾದಿ ಯಾವುದೇ ಸಾಮಗ್ರಿಗಳ ಬಳಕೆಯಿಂದ ಕಟ್ಟಲಾಗಿದೆ, ಅದು ಸಾವಧಾನವಾಗಿ ಜನರ ಮನಸ್ಸು ಮತ್ತು ಹೃದಯಾಂತರಾಳದಲ್ಲಿ ಮೂಡಬೇಕು”.
    ಭಾವೈಕ್ಯತೆ ಎಂದರೆ ಸಂವೇದನೆಗಳನ್ನು ಒಳಗೊಂಡು ವ್ಯಕ್ತಿತ್ವ ಮಾತ್ರವಾಗಿರದೆ ಆಲೋಚನೆ, ಕ್ರಿಯೆ, ಭಾವನೆಗಳು ಮತ್ತು ಆತ್ಮ ವಿಶ್ವಾಸಗಳಿಗೂ ಅನ್ವಯಿಸುತ್ತದೆ. ಭಾವೈಕ್ಯತೆಯನ್ನು ಹೊಂದಿದ ವ್ಯಕ್ತಿಯು ಜೀವನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುತ್ತಾನೆ. ತನ್ನ ವ್ಯಕ್ತಿತ್ವದ ಕೆಲವು ಅಂಶಗಳನ್ನು ಹತ್ತಿಕ್ಕದೆ ಅವನ್ನು ಉದ್ದೀಪನಗೊಳಿಸುತ್ತಾನೆ.
ರಾಷ್ಟ್ರೀಯ ಏಕತೆಯ ಸಮಸ್ಯೆಗಳು :- ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಸಮಸ್ಯೆಯ ಉಲ್ಭಣ ಗೊಳ್ಳುತ್ತಿರುವುದು ದೈಗ್ಗೋಚರವಾಗುತ್ತಿದೆ. ರಾಷ್ಟ್ರೀಯ ಭಾವೈಕ್ಯತೆಗೆ ಎಂದಿಗಿಂತಲೂ ಇಂದು ತೀವ್ರತರವಾದ ಆಘಾತ ಸಂಭವಿಸುತ್ತಿರುವ ಸೂಚನೆಗಳು ಕಾಣಿಸುತ್ತವೆ.
    ಜಾತೀಯತೆ ಸಮಾಜಘಾತಕವೂ, ರಾಷ್ಟ್ರಘಾತಕವೂ ಆದ ದುಷ್ಟ ಶಕ್ತಿ ಎಂದರೆ ಜನಜೀವನದ ಸರ್ವ ಭೂಮಿಕೆಯನ್ನು ಆಧರಿಸಿ ರಾಹುವೋಪಾಯಲ್ಲಿರುವ ಜಾತೀಯತೆ ಭಾರತ ಪ್ರಜಾಸತ್ತೆಯನ್ನು ಸಂವಿಧಾನಾತ್ಮಕವಾಗಿ ಸ್ವೀಕರಿಸಿದೆ. ಅಧಿಕಾರಾಡಳಿತದ ವಿಕೇಂದ್ರಿಕರಣವೇ ಜನಸತ್ತೆಯ ಧರ್ಮ. ನಮ್ಮ ದೇಶದಲ್ಲಿ ರಾಜಕೀಯ, ಕ್ರೀಡೆ, ಶಿಕ್ಷಣ ಹಾಗು ಎಲ್ಲ ಕ್ಷೇತ್ರಗಳಲ್ಲಿ ಜಾತೀಯತೆ ಎದ್ದು ಕಾಣುತ್ತದೆ. ಜನತೆಗೆ ನೌಕರಿಯನ್ನು ಒದಗಿಸುವಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸುವಲ್ಲಿ ಮತ್ತು ವಿದ್ಯಾರ್ಥಿ ವೇತನವನ್ನು ನೀಡುವಲ್ಲಿ ಜಾತಿಯತೆಯ ಪಕ್ಷಪಾತವನ್ನು ವಹಿಸುವುದು ಸಲ್ಲದು.
    ಅನೇಕತೆಯಲ್ಲಿ ಏಕತೆ, ಯಾವ ರಾಷ್ಟ್ರವೇ ಆಗಲಿ ಒಂದೇ ತೆರನಾದ ಸಮೂಹವನ್ನು ಜನಾಂಗವನ್ನು ಹೊಂದಿರುವುದು ಸಾಧ್ಯವಿಲ್ಲ. ಸಣ್ಣ ರಾಷ್ಟ್ರಗಳು ಕೂಡ ಮೇಲುನೋಟಕ್ಕೆ ಸಮರೂಪದ ಗುಂಪನ್ನು ಹೊಂದಿರುವಂತೆ ಭಾಸವಾಗುತ್ತದೆ. ಆದರೆ ಭೇದಿಸಿ ನೋಡಿದಲ್ಲಿ ಅಲ್ಲೂ ಅನೇಕ ತೆರನಾದ ಸಮೂಹಗಳು ಕೋಮುಗಳು ಪ್ರಚಲಿತದಲ್ಲಿರುವುದು ಕಾಣಿಸುತ್ತದೆ. ಧರ್ಮ, ಭಾಷೆ, ಜನಾಂಗ, ಆರ್ಥಿಕ ಮತ್ತು ಸಾಮಾಜಿಕ ಅಸಮತೆಗಳನು.
    ಭಾಷ ಸಮಸ್ಯೆ ನಮ್ಮ ಭಾರತ ದೇಶದಲ್ಲಿ ಭಾಷಾಭಿಮಾನಗಳು ಇನ್ನು ಅಡಗದೆ ವಿಜೃಂಭಿಸುತ್ತಿದೆ. ಭಾಷೆಯ ಜನಜೀವನದಲ್ಲಿ ದರ್ಮದಷ್ಟೇ ಪ್ರಮುಖ ಪಾತ್ರವಹಿಸುತ್ತಿದೆ. ಭಾಷಾ ಮಾಧ್ಯಮದ ಮೂಲಕ ಪ್ರಸ್ತುತ ಅನುಭವವು ಭಾಷೆಯ ಮೂಲಕವೇ ವ್ಯಕ್ತಿಯ ಮತ್ತು ಸಮೂಹದ ಅಭೀಷ್ಟೆಗಳು ರೂಪಗೊಂಡು ಸ್ಥಾಪಿತವಾಗುತ್ತವೆ.
    ಅಲ್ಪಸಂಖ್ಯಾತರ ಸಮಸ್ಯೆ : ಅಲ್ಪ ಸಂಖ್ಯಾತ ಸಮೂಹವು ಬಹುಸಂಖ್ಯಾತ ಸಮೂಹದಲ್ಲಿ ಎಲ್ಲಿ ಸೇರ್ಪಡೆ ಹೊಂದಿ ಇಲ್ಲವಾಗುವುದೋ ಎಂಬ ಭಯದಿಂದಲೇ ತಮ್ಮ ಗುಂಪಿನ ಬಗ್ಗೆ ಅವರಲ್ಲಿ ನಿಷ್ಠೆ ವಿಧೇಯತೆಗಳು ಬಲವತ್ತರವಾಗುತ್ತವೆ. ಈ ಮನೋಭಾವ ಎಲ್ಲ ದೇಶಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಅಲ್ಪ ಸಂಖ್ಯಾತ ಗುಂಪಿನಿಂದ ಅಭಿವ್ಯಕ್ತಗೊಳ್ಳುತ್ತಿರುತ್ತವೆ. ಭಾಷೆ ಕೋಮು ಪ್ರಾದೇಶಿಕತೆ ವಿಷಯದಲ್ಲಿ ಜನತೆಗೆ ಉತ್ಕಟಿತೆ ಉಂಟಾಗುವುದು ಪ್ರಭಾವೀ ಸಮೂಹದ ವಿರುದ್ದ ಹೋರಾಡಿ ತನ್ನ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮೂಹವು ಪ್ರದೇಶ ಮತ್ತು ಭಾಷೆಯ ಆಧಾರವಾಗಿ ನೇಮಕಗಳು ನಡೆಯಬೇಕೆಂದು ಪ್ರತಿವಾದವನ್ನು ಮಾಡುತ್ತವೆ.
    ರಾಷ್ಟ್ರೀಯ ಏಕತೆಗೆ ಮುಖ್ಯವಾಗಿ ತೊಡಕಾಗಿರುವ ಅಂಶಗಳು – ಕೋಮುವಾದ ಭಾವನೆ, ಪ್ರಾಂತೀಯ ಭಾವನೆ, ಧಾರ್ಮಿಕ ಪೂರ್ವಗ್ರಹ ಪೀಡಿತ, ಪ್ರಾದೇಶಿಕತೆ, ಭಾಷಾವಾರು ಪ್ರಾಂತ ರಚನೆ, ಆರ್ಥಿಕ ಸ್ಥಿತಿಗಳು.
    ರಾಷ್ಟ್ರೀಯ ಐಕ್ಯತೆ ಎಂದರೆ ಜನತೆಯಲ್ಲಿ ನಿರ್ಧೀಷ್ಟಗುರಿ, ಉದ್ದೇಶಕ್ಕಾಗಿ ಕೂಡಿ ದುಡಿಯುವ ಭಾವನೆ, ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಮತ್ತು ಸ್ಥಾನಮಾನವನ್ನು ಮರೆತು ನಾವೆಲ್ಲಾ ಒಂದೇ ಎಂದು ತಾತ್ವಿಕವಾಗಿ ಹಾಗೂ ಅನುಷ್ಠಾನದಲ್ಲಿ ಬಂದು ಒಗ್ಗಟ್ಟಿನಿಂದ ವರ್ತಿಸುವುದು. ರಾಷ್ಟ್ರೀಯ ಭಾವನೆ ಪ್ರಜ್ಞೆ ಡಾ || ಎಸ್. ರಾಧಾಕೃಷ್ಣನ್‍ರವರು “ರಾಷ್ಟ್ರೀಯ ಐಕ್ಯತೆಯನ್ನು ಇಟ್ಟಿಗೆಯಿಂದಾಗಲಿ ಅಥವಾ ಮಣ್ಣಿನಿಂದಾಗಲಿ ಕಟ್ಟಲಾಗುವುದಿಲ್ಲ. ಅದು ಜನತೆಯ ಭಾವನೆ ಹೃದಯದಿಂದ ಬರಬೇಕು. ರಾಷ್ಟ್ರೀಯ ಐಕ್ಯವು ಜನತೆಯ ಒಂದು ಪ್ರಬಲ ಶಕ್ತಿ. ಇದಕ್ಕಿಂತ ಪ್ರಬಲವಾದ ಶಕ್ತಿ ಸ್ಪೂರ್ತಿ ದೇಶಕ್ಕೆ ಮತ್ತೊಂದಿಲ್ಲ” ಎಂದಿದ್ದಾರೆ.
    ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವುದು ಆಲೋಚನೆ, ಕಾರ್ಯಶಕ್ತಿ, ಆತ್ಮ ವಿಶ್ವಾಸವನ್ನು ಸಮಾಜದ ದೃಷ್ಠಿಯಿಂದ ಒಳಗೊಂಡ ಮನೋಭಾವವೇ ಏಕತೆಯಭಾವನೆ.


ಜಗದೀಶ ವಡ್ಡಿನ
                                         ಗ್ರಂಥಪಾಲಕರು
                                      ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
                                        ಬಾಡ, ಕಾರವಾರ
                                        ಮೊ: 9632332185

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...