ಕಾರವಾರ: ಮತೀಯ ಅಲ್ಪಸಂಖ್ಯಾತರ ಸಾಲ ಸೌಲಭ್ಯಕ್ಕೆ  ಅರ್ಜಿ ಅಹ್ವಾನ

Source: varthabhavan | By Arshad Koppa | Published on 12th October 2017, 7:55 AM | State News | Special Report |

ಕಾರವಾರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2017-18 ನೇ ಸಾಲಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಖಾಯಂ ವಾಸಿಸುತ್ತಿರುವ ಮತೀಯ ಅಲ್ಪಸಂಖ್ಯಾತರರ ಅಭಿವೃದ್ದಿಗಾಗಿ ಈ ಕೆಳಕಂಡ ಹೊಸ ಯೋಜನೆಗಳಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿಯನ್ನು  ಅಹ್ವಾನಿಸಲಾಗಿದೆ. ಮತೀಯ ಅಲ್ಪಸಂಖ್ಯಾತರರು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಪಂಗಡಕ್ಕೆ ಸೇರಿದವರು ಅರ್ಹರಾಗಿರುತ್ತಾರೆ. ನಿಗಮದಿಂದ ಅನುಷ್ಠಾನಗೊಳಿಸುವ ಎಲ್ಲಾ ಯೋಜನೆಗಳಲ್ಲಿ ಸೌಲಭ್ಯ ನೀಡುವ ಅನುಪಾತ 80:10:10, ಅಂದರೆ ಮುಸ್ಲಿಂರು ಶೇ 80%, ಕ್ರಿಶ್ಚಿಯನ್ ಶೇ 10%, ಹಾಗೂ ಇತರೆ ಪಂಗಡದವರಿಗೆ ಶೇ 10% ಆಗಿರುತ್ತದೆ. 2017-18 ನೇ ಸಾಲಿನಲ್ಲಿ  ಹೊಸದಾಗಿ ಈ ಕೆಳಕಂಡ ಯೋಜನೆ ಅನುಷ್ಠಾನಗೊಳಿಸುತ್ತಿದ್ದು  ಯೋಜನೆ ವಿವರ ಈ ಕೆಳಕಂಡಂತೆ ಇರುತ್ತದೆ.

1)    ಆಧುನಿಕ ಕೃಷಿ ಸಲಕರಣಿಗಳ ಖರೀದಿ ಸಾಲ ಯೋಜನೆ: ಆಧುನಿಕ ಕೃಷಿ ಸಲಕರಣೆಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಟಿಲ್ಲರ್, ಉಕ್ಕಿನನೇಗಿಲು ಡ್ರಿಲ್ಸ ಕಳೆಕಿಳುವ  ಯಂತ್ರ ಪಂಪಸೆಟ್ ಟ್ಯಾಕ್ಟರ ಮುಂತಾದ  ನೂತನ ಕೃಷಿ ಸಲಕರಣೆಗಳನ್ನು ಶೇ 50% ರಷ್ಟು  ಸಹಾಯಧನ ಸೇರಿ ಗರಿಷ್ಠ 1.00 ಲಕ್ಷ ರೂ ಘಟಕ ವೆಚ್ಚದಲ್ಲಿ ನೀಡಲಾಗುವುದು. 


2)    ಆಟೋಮೊಬೈಲ್ಸ್ ತರಬೇತಿ ಹಾಗೂ ಸಾಲ ಯೋಜನೆ:-ಅಟೋಮೊಬೈಲ ತರಬೇತಿ  ಮತ್ತು ಸಾಲ ಯೋಜನೆಯಲ್ಲಿ ಅಟೋಸರ್ವಿಸ್ ಹಾಗೂ ಅಟೋಮೊಬೈಲ ತರಬೇತಿ (ಪ್ರೋತ್ಸಾಹ ಸಾಲ) ಸೌಲಭ್ಯ ನೀಡಲಾಗುತ್ತದೆ.

3)    ಮನೆ ಮಳಿಗೆ ಸಾಲ ಯೋಜನೆ :- ಮನೆ ಮಳಿಗೆ ಯೋಜನೆಯಲ್ಲಿ ವಿಶೇಷ/ದುರ್ಬಲ ವರ್ಗದವರಿಗೆ ಅಂದರೆ ಪರಿಸರ ವಿಕೋಪಗಳಿಂದ ಮನೆಯ ವ್ಯಾಪಾರ ಕೇಂದ್ರಗಳು ನಾಶವಾದ ಸಂದರ್ಬದಲ್ಲಿ ಹಾಗೂ ಸನ್ನಡತೆ ಆಧಾರದ ಮೇಲೆ ಕಾರ್ಯಗ್ರಹ ವಾಸದಿಂದ ಬಿಡುಗಡೆಯಾದ ಕೈದಿಗಳಿಗೆ ಗುಂಡಾಕಾಯ್ದೆಯಡಿ ಬಂದಿತರಾಗಿ ಪ್ರಕರಣಗಳು ಸಾಬೀತಾಗದೆ ನಿರಪರಾಧಿಗಳಿಗೆ ಮಾತ್ರ ಅನ್ವಯಸುವಂತೆ ವಾಸಿಸಲು ಹಾಗೂ ಜಿವನೋಪಾಯ ಕಲ್ಪಿಸಲು ಈ ಸಾಲ ಸೌಲಭ್ಯದಡಿ ಸಾಲ ನೀಡಲಾಗುವುದು.

4)    ವಿದೇಶಿ ವ್ಯಾಸಂಗ ಸಾಲ ಯೋಜನೆ:- ವಿದೇಶದಲ್ಲಿ ವ್ಯಾಸಂಗ ಯೋಜನೆಯಡಿಯಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವರು ಓಒಆಈಅ ಯೋಜನೆಯಲ್ಲಿ ಅರಿವು ಸಾಲ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:- ನಿಗದಿತ ಅರ್ಜಿ ನಮೂನೆಯನ್ನು ಕಂಪ್ಯೂಟರ್ ನ ಅಂತರ್‍ಜಾಲದಲ್ಲಿ www.kmdc.kar.nic.in ರಲ್ಲಿ ಸಾಲದ ಅರ್ಜಿಗಳಲ್ಲಿ ತಮಗೆ ಬೇಕಾದ ಅರ್ಜಿ ನಮೂನೆ ಪಡೆದುಕೊಂಡು ಅಥವಾ ನಿಗಮ ಜಿಲ್ಲಾ ಕಛೇರಿಗೆ ಬಂದು ಅರ್ಜಿಯನ್ನು ಪಡೆದು ಸಂಬಂಧಪಟ್ಟ  ಅರ್ಜಿಯಲ್ಲಿ ತಿಳಿಸಿರುವ ದಾಖಲಾತಿಗಳೊಂದಿಗೆ ಭರ್ತಿ ಮಾಡಿ  ಮೊಬೈಲ ಸಂಖ್ಯೆ ವಿಧಾನ ಸಭಾ ಕ್ಷೇತ್ರದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಅಂತಿಮ ದಿನಾಂಕ:-31-10-2017 ಇದ್ದು, ಈ ವರ್ಷದಿಂದ ಆನ್‍ಲೈನ್ ಮುಖಾಂತರ ಅರ್ಜಿಗಳ  ಮಾಹಿತಿಯನ್ನು ನಿಗಮದ ಕೇಂದ್ರ ಕಛೇರಿಗೆ ಅಂದೇ ಸಲ್ಲಿಸಬೇಕಾಗಿರುವುದರಿಂದ ಯಾವುದೇ ಕಾರಣಕ್ಕೂ ಅಂತಿಮ ದಿನಾಂಕ ಮುಗಿದ ಮೇಲೆ ಅರ್ಜಿಗಳನ್ನು ಸ್ವೀಕರಿಸಲಾಗಿರುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ 2ನೇ ಮಹಡಿ,ಕುಂದಗೋಳ ಬಿಲ್ಡಿಂಗ,ಹೈ-ಚರ್ಚ ರಸ್ತೆ,ಕಾರವಾರ-581301
ಕಛೇರಿಯಲ್ಲಿ ಸಂಪರ್ಕಿಸಬಹುದಾಗಿದೆ. ದೂರವಾಣಿ  ಸಂ-08382-221180

           ತಮ್ಮ ವಿಶ್ವಾಸಿ, 
             
        (ಆರ್.ಆರ್.ಕುಲಕರ್ಣಿ)                
    ಜಿಲ್ಲಾ ವ್ಯವಸ್ಥಾಪಕರು
              ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ)
   ಉತ್ತರ-ಕನ್ನಡ

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...