ಕಾರವಾರ: ರಾಷ್ಟ್ರೀಯ ಮ್ಯಾರಥಾನ್‍ನಲ್ಲಿ ಮಿಂಚಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Source: varthabhavan | By Arshad Koppa | Published on 22nd March 2017, 8:02 AM | Sports News |

ಕಾರವಾರ ಮಾರ್ಚ 21 : ಮಹಾರಾಷ್ಟ್ರದ ಥಾಣೆಯಲ್ಲಿ ಮಾರ್ಚ್ 19ರಂದು ನಡೆದ ರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಕಾರವಾರದ ಕ್ರೀಡಾಶಾಲೆಯ ವಿದ್ಯಾರ್ಥಿಗಳನ್ನು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರು ಮಂಗಳವಾರ ಅಭಿನಂದಿಸಿದರು.


ಆರ್ಕಿಡ್ ನ್ಯಾಷನಲ್ ಸ್ಕೂಲ್ ಮತ್ತು ಇತಿಹಾ ಸಂಸ್ಥೆ ಆಯೋಜಿಸಿದ್ದ ಮುಕ್ತ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪದಕ ಗಳಿಸಿದ್ದು, ಹುಡುಗಿಯರ ವಿಭಾಗದಲ್ಲಿ 10ಕಿಮಿ ಸ್ಪರ್ಧೆಯಲ್ಲಿ ಮೇಘಾ ಸಂಜು ಪರಗೋಜಿ 41.28 ನಿಮಿಷಗಳಲ್ಲಿ ಕ್ರಮಿಸಿ 3ನೇ ಸ್ಥಾನ ಗಳಿಸಿದ್ದಾಳೆ. ಇದೇ ವಿಭಾಗದಲ್ಲಿ ಗಾಯತ್ರಿ ಎಚ್.ಕೆಸುಲ್‍ಕರ್ 43.36ನಿಮಿಷಗಳಲ್ಲಿ ಕ್ರಮಿಸಿ 5ನೇ ಸ್ಥಾನ ಪಡೆದಿದ್ದಾಳೆ. 5ಕಿಮಿ ಸ್ಪರ್ಧೆಯಲ್ಲಿ ಫೈರೋಜಾ ಜಿ. ಅಂಗಡಿಕರ್ 20.16ನಿಮಿಷದಲ್ಲಿ ಕ್ರಮಿಸಿ 2ನೇ ಸ್ಥಾನ ಹಾಗೂ 3ಕಿಮಿ ಸ್ಪರ್ಧೆಯಲ್ಲಿ ರುಚಿತಾ ಜಿ. ನೇಸರ್ಗಿ 13.45ನಿಮಿಷದಲ್ಲಿ ಪೂರೈಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಹುಡುಗರ ವಿಭಾಗದಲ್ಲಿ 10ಕಿಮಿ ವಿಭಾಗದಲ್ಲಿ ಆದಂ ಎ. ನಾಯ್ಕ 38.18ನಿಮಿಷದಲ್ಲಿ ಕ್ರಮಿಸಿ 5ನೇ ಸ್ಥಾನ ಪಡೆದರೆ, 3ಕಿಮಿ ವಿಭಾಗದಲ್ಲಿ ಕಿರಣ್ ಎ ವಾಸನ್ 12.13ನಿಮಿಷದಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಮ್ಯಾರಥಾನ್ ಸ್ಪರ್ಧೆಯದಲ್ಲಿ ಭಾಗವಹಿಸಿ ಮಿಂಚಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಪರ ಜಿಲ್ಲಾಧಿಕಾರಿ ಅವರು ಶುಭ ಹಾರೈಸಿ, ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಎಲ್ಲಾ ರೀತಿಯ ನೆರವು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಹೇಳಿದರು.
ಕೋಚ್ ಪ್ರಕಾಶ ರೇವಣಕರ್, ರುಡ್‍ಸೆಟ್ ಹಳಿಯಾಳದ ಆಡಳಿತಾಧಿಕಾರಿ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್