“ಜೈ ಜವಾನ್, ಜೈ ಕಿಸಾನ್” - ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ ದಿ : 11-01-2017

Source: jagadish vaddina | By Arshad Koppa | Published on 8th January 2017, 9:01 PM | Special Report | Guest Editorial |

ಕಾರವಾರ, ಜ ೮: ಘೋಷಣೆಯ ಮಹಾನ್ ಚೇತನ ಶಾಸ್ತ್ರೀಜಿ ಜೀವವನ್ನು ಮುಡಿಪಾಗಿಟ್ಟು ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋಧನ ಮತ್ತು ನಮ್ಮ ದೇಶದ ಬೆನ್ನೆಲುಬಾಗಿ ಅನ್ನದಾತನ ಗೌರವ ಪ್ರತಿಷ್ಟೆಗಳನ್ನು “ ಜೈ ಜವಾನ್, ಜೈ ಕಿಸಾನ್” ಘೋಷಣೆಯ ಮೂಲಕ ಅವರಲ್ಲಿ ಆತ್ಮ ಗೌರವವನ್ನು ಹೆಚ್ಚಿಸಿದರು. “ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು” ಎಂಬ ನಾಡನುಡಿ ಲಾಲ್ ಬಹದ್ದೂರ ಶಾಸ್ತ್ರೀಜಿಯವರಿಗೆ ಸರಿಯಾಗಿ ಹೋಲುತ್ತದೆ. ಶಾಸ್ತ್ರೀಜಿಯವರು ತಮ್ಮ ಜೀವನದಲ್ಲಿ ಗಳಿಸಿದ ಆಸ್ತಿ, ಸತ್ಯ , ಸರಳತೆ, ಮತ್ತು ಪ್ರಾಮಾಣ ಕತೆ, ಇಂದು ಈ ಮಹಾನ್ ವ್ಯಕ್ತಿಯ ಪುಣ್ಯತಿಥಿ.

ತಮ್ಮ ಬಾಲ್ಯ ಜೀವನದಲ್ಲಿ ಗಾಂಧೀಜಿಯವರ ಮಾತುಗಳನ್ನು ಕೇಳಿ ರಾಷ್ಟ್ರ ಹೋರಾಟಕ್ಕೆ ಅಂದೇ ಮನಸ್ಸು ಮಾಡಿದರು. ನಂತರ ದೇಶದಾದ್ಯಂತ ಅಸಹಕಾರ ಚಳುವಳಿ ನಡೆಯುತ್ತಿರಬೇಕಾದರೆ ಶಾಲೆಯಲ್ಲಿ ಓದುತ್ತಿದ್ದ ಶಾಸ್ತ್ರೀಜಿ 1921 ರಲ್ಲಿ ಓದಿಗೆ ತಿಲಾಂಜಲಿಯನ್ನಿಟ್ಟು ಚಳುವಳಿಕಾರರೊಂದಿಗೆ ಸೇರಿಬಿಟ್ಟರು. ಆ ಹೋರಾಟ ಸಮಯದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಇನ್ನೂ ಬಾಲಕನೆಂಬ ಏಕೈಕ ಕಾರಣಕ್ಕೆ ಬುದ್ದಿ ಹೇಳಿ ಮನೆಗೆ ಕಳಿಸಿದರು. ಅದೇ ಬಾಲಕ ಮುಂದೊಂದು ದಿನ ಭಾರತದ ಪ್ರಧಾನಿಯಾದರು.

ಬದುಕಿನುದ್ದಕ್ಕೂ ದೇಶಕ್ಕಾಗಿಯೇ ಬದುಕಿ, ದೇಶಕ್ಕಾಗಿಯೇ ಪ್ರಾಣ ತೆತ್ತವರು ಶಾಸ್ತ್ರೀಜಿ 1965 ಅಗಷ್ಟ್ 31 ರಂದು ಪಾಕಿಸ್ತಾನ ಯುದ್ದ ಘೋಷಿಸಿತು. ಯುದ್ದದಲ್ಲಿ ಭಾರತ ಗೆದ್ದಿತಾದರು ಆಹಾರ ಸಮಸ್ಯೆಯಿಂದ ಬಳಲಿ ಬೆಂಡಾಯಿತು. ವಿಧಿಯಿಲ್ಲದೆ ಎಲ್ಲರೂ ದೇಶಕ್ಕಾಗಿ ವಾರದ ಒಂದು ದಿನ (ಸೋಮವಾರ) ಉಪವಾಸ ಮಾಡುವಂತೆ ಕರೆ ಕೊಟ್ಟಿದ್ದರು. ಶಾಸ್ತ್ರೀಜಿ ಉಪವಾಸವಿದ್ದಾದರೂ ಸರಿ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಪ್ರಯತ್ನ ಅವರದ್ದಾಗಿತ್ತು.

ಶಾಸ್ತ್ರೀಜಿಯವರು ಹುಟ್ಟಿದ್ದು 1904 ಅಕ್ಟೋಬರ್ 02 ರಂದು ಉತ್ತರ ಪ್ರದೇಶದ ಮೊಘಲ್ ಸರಾಯಲ್ ಎಂಬಲ್ಲಿ. ಇವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀ ವಾಸ್ತವ್. ಕಾಶಿ ವಿದ್ಯಾಪೀಠದಲ್ಲಿ ಓದುವ ಸಂದರ್ಭದಲ್ಲಿ ಅವರ ಗುರುಗಳಿಂದ ಶಾಸ್ತ್ರೀ ಎಂಬ ಹೆಸರು ಪಡೆದು ಲಾಲ್ ಬಹದ್ದೂರ್ ಶಾಸ್ತ್ರಿ ಆದರು.

1942 ರಲ್ಲಿ ಬ್ರಿಟಿಷರ ವಿರುದ್ದ ಕೊನೆಯ ಅಸ್ತ್ರವಾಗಿ “ ಮಾಡು ಇಲ್ಲವೇ ಮಡಿ” ಎಂದು ಗಾಂಧೀ ಕ್ವೀಟ್ ಇಂಡಿಯಾ ಚಳವಳಿ ಆರಂಭಿಸಿದ್ದರು. ಅದರಲ್ಲಿ ಭಾಗವಹಿಸಿದ ಶಾಸ್ತ್ರೀಜಿಯವರ ಬಂಧನಕ್ಕೊಳಗಾಗಿ ಜೈಲು ಸೇರಿದರು. ಇತ್ತ ಮನೆಯಲ್ಲಿ ಮಗಳು ಕಾಯಿಲೆಯಿಂದ ಹಾಸಿಗೆ ಹಿಡಿದಳು. ಔಷಧ ತರಲು ಬಿಡಿಗಾಸು ಕೂಡ ಇರಲಿಲ್ಲ. ಆದರಿಂದ ಅವಳು ಸಾವನ್ನಪ್ಪಿದಳು. ಶಾಸ್ತ್ರೀಜಿಯವರು ವಿಷಯ ಮುಟ್ಟಿಸಲಾಯಿತು. ಪೆರೋಲ್ ಮೇಲೆ ಬಿಡುಗಡೆ ಹೊಂದಿದ ನಂತರ ಅವರು ಬಂದು ಕರ್ಮಗಳನ್ನು ಮುಗಿಸಿದ ಶಾಸ್ತೀಜಿ ಪೆರೋಲ್‍ನ ಅವಧಿ ಇನ್ನೂ ಉಳಿದಿದ್ದರೂ ಜೈಲಿಗೆ ತೆರಳಿದ್ದರು.

ಶಾಸ್ತೀಜಿಯವರು ನೆಹರೂ ಸಂಪುಟದಲ್ಲಿ ಗೃಹ ಸಚಿವರಾಗಿದ್ದರೂ ಆದರು ಸ್ವಂತ ಮನೆ ಹೊಂದಿರಲಿಲ್ಲ, ಕೇಂದ್ರ ರೇಲ್ವೆ ಸಚಿವರಾಗಿದ್ದರು. 1964 ರಲ್ಲಿ ಸ್ವತಂತ್ರ ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನಿÀಯಾಗಿದ್ದಾಗ ಪಾಕಿಸ್ತಾನದ ಸಮಸ್ಯೆಯಾಗಿತ್ತು. ಕಚ್ ಬಳಿ ನಡೆದ ಯುದ್ದದ ವಿಶ್ವಸಂಸ್ಥೆಯ ಮಧ್ಯಸ್ತಿಕೆಯಿಂದ ನಿಂತು ಜಮ್ಮು ಕಾಶ್ಮೀರದಲ್ಲಿ ಮತ್ತೆ ಪ್ರಾರಂಭವಾಯಿತು 1966 ಜನವರಿಯಲ್ಲಿ ಮಹಮ್ಮದ್ ಅಯೂಬ್ ಖಾನ್ ಅಲೆಕ್ಸ್ ನಿಕೋಯೆವಿಟ್ ಕೊಸಿಜಿನ್ ಅವರಿಂದ ಆಯೋಜಿಸಲಾದ ತಾಷ್ಲೆಂಟ್ ಒಪ್ಪಂದದಲ್ಲಿ ಭಾಗವಹಿಸಿದರು. ಜನೆವರಿ 10, 1966 ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು ಮರುದಿನವೇ ಹೃದಯಘಾತದಿಂದ ಸಾವನ್ನಪ್ಪಿದರು. ಭಾರತ ಕಂಡ ಅತ್ಯಂತ ಪ್ರಾಮಾಣ ಕ ಪ್ರಧಾನಿ ಎಂಬ ಖ್ಯಾತಿಗಳಿಸಿದ್ದರು. ಇವರ ಸ್ವಾಭಿಮಾನ ದೇಶಾಭಿಮಾನ ಕೂಡ ತಲೆದೂಗುವಂಥದ್ದು. ಮರಣೋತ್ತರ ಲಾಲ್ ಬಹದ್ದೂರ್ ಶಾಸ್ರ್ತೀಜಿಯವರಿಗೆ “ ಭಾರತ ರತ್ನ “ ಪ್ರಶಸ್ತಿಯನ್ನು ನೀಡಲಾಯಿತು. ತಿಲಕರಿಂದ  ಹೋರಾಟದ ಪಾಠ ಮತ್ತು ಗಾಂಧೀಜಿಯವರಿಂದ ಸತ್ಯ, ಸರಳತೆ, ಹಾಗೂ ಪ್ರಾಮಾಣ ಕತೆಗಳ ಪಾಠವನ್ನು ಮೈಗೂಡಿಕೊಂಡಿದ್ದವರು ಶಾಸ್ತ್ರೀಜಿ. ಬಡತನದಲ್ಲಿಯೇ ಹುಟ್ಟಿ ಬಡತನವನ್ನು ಹಾಸಿಹೊದ್ದು ಬಡತನದಲ್ಲಿಯೇ ಬÀದುಕಿನ ಯಾತ್ರೆ ಮುಗಿಸಿದರು ಶಾಸ್ತ್ರೀಜಿ ಪ್ರಧಾನಿಯಾದರು ತನ್ನ ಬ್ಯಾಂಕಿನ ಖಾತೆಯಲ್ಲಿ ಕೇವಲ ಒಂದು ಸಾವಿರ ರೂ.ಗಳನ್ನು ಹೊಂದಿದ್ದ ಪ್ರಾಮಾಣ ಕ ವ್ಯಕ್ತಿಯಾಗಿದ್ದರು.

ಸತ್ಯ ಸರಳತೆ, ಹಗೂ ಪ್ರಾಮಾಣ ಕತೆಗಳ ಪಾಠವನ್ನು ಮೈಗೂಡಿಸಿಕೊಂಡಿದ್ದರು ಶಾಸ್ತ್ರೀಜಿ. ಅವರ ಸರಳ ಮತ್ತು ಪ್ರಾಮಾಣ ಕ ಜೀವನ ಇಂದಿನ ರಾಜಕೀಯ ನಾಯಕರಿಗೆ ದಾರಿ ದೀಪವಾಗಲಿ.ನಾವು ಸಹಿತ ಇವರು ನಡೆದ ದಾರಿಯಲ್ಲಿ ನಡೆದು ಅವರ ಆತ್ಮಕ್ಕೆ ಶಾಂತಿಕೊರೋಣ.

                                

ಜಗದೀಶ ವಡ್ಡಿನ
 ಗ್ರಂಥಪಾಲಕರು,
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
 ಬಾಡ, ಕಾರವಾರ
ಮೋ: 9632332185
 
 
 
 

Read These Next

ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಇದ್ದು ಇಲ್ಲದಂತಾಗಿರುವ 108 ತುರ್ತು ಆರೋಗ್ಯ ಕವಚ (ಆಂಬ್ಯುಲೆನ್ಸ್)

ಭಟ್ಕಳ:ವಿಶ್ವ ಪ್ರಸಿದ್ದವಾದ ಮುರ್ಡೇಶ್ವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆಕಸ್ಮಿಕವಾಗಿ ...

ಭಟ್ಕಳ ಶಿರಾಲಿ,ಬೆಂಗ್ರೆ ಭಾಗಗಳಲ್ಲಿ ಗದ್ದೆ ನಾಟಿ ಕಾರ್ಯ ಆರಂಭ:ಪೇಟೆಗೆ ಮುಖ ಮಾಡಿ ನಾಟಿಗೆ ನೋ ಎನ್ನುತ್ತಿರುವ ನಾರಿಯರು

ಭಟ್ಕಳ: ಮುಂಗಾರು ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಭೂಮಿ ತಂಪಾಗಿದೆ. ಇದ್ದ ತುಂಡು ಭೂಮಿಯಲ್ಲಿಯೇ ಅನ್ನ ಹುಡುಕಾಡುವ ಇಲ್ಲಿನ ರೈತನಿಗೆ ...

ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಕುಮಟಾದ ಯುವಕ

ಹೊಸದಿಲ್ಲಿ: ಪರೀಕ್ಷೆ ಹಾಲ್‌ಗೆ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ 28 ಹರೆಯದ ಯುಪಿಎಸ್‌ಸಿ ಆಕಾಂಕ್ಷಿ ಯುವಕ ರವಿವಾರ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...