ಕಾರವಾರ: ತಂಬಾಕು ನಿಯಂತ್ರಣ ಕಾಯ್ದೆ  ನಿಯಮ ಪಾಲಿಸದ ಅಂಗಡಿ ಮಾಲೀಕರಿಗೆ ದಂಡ

Source: varthabhavan | By Arshad Koppa | Published on 29th June 2017, 8:03 AM | Coastal News | Special Report |

ಕಾರವಾರ ಜೂನ 27 : ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ) 2003 ಪರಿಣಾಮಕಾರಿ ಜಾರಿಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ಸಹಯೋಹದೊಂದಿಗೆ ನಗರದ ಬಸ್ ನಿಲ್ದಾಣ, ಕೋಡಿಬಾಗ್, ನ್ಯೂನರ್ಸಿಂಗ್ ಹೋಮ್ ರಸ್ತೆ, ಕಾಜುಬಾಗ ರಸ್ತೆ, ಸಂಡೇ ಮಾರ್ಕೇಟ್, ಕೆ.ಇ.ಬಿ. ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ  ಅಪರ ಜಿಲ್ಲಾಧಿಕಾರಿ ಹೆಚ್. ಪ್ರಸನ್ನ ಕುಮಾರ ನೆತೃತ್ವದಲ್ಲಿ  ವಿಶೇಷ ಕಾರ್ಯಾಚರಣೆ ನಡೆಸಲಾಯಿತು 
ಕೋಟ್ಪಾ ಕಾಯಿದೆಯ ಸೆಕ್ಷನ್ 4,5,6 ಹಾಗು 7 ಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಸಾರ್ವಜನಿಕ  ಆರೋಗ್ಯ ರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲಾಗಿದ್ದು ಇದರಲಿ ್ಲಸಾರ್ವಜನಿಕರ ಸಹಭಾಗಿತ್ವವೂ ಆಗತ್ಯವಿದೆ ಅಪರ ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ  ಹೇಳಿದರು.
ಎಲ್ಲಾ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷಿಧ್ದ ಹಾಗು ಶಾಲಾಕಾಲೇಜುಗಳು ಇದನ್ನು ಸೂಚಿಸುವ ಫಲಕಗಳನ್ನು ವಿದ್ಯಾಸಂಸ್ಥೆಗಳ ಆವರಣದ ಹೊರಗಡೆ ಅಳವಡಿಸುವುದು ಕಡ್ಡಾಯವಾಗಿದ್ದು. ಉಲ್ಲಂಘನೆಯಾಗಿದ್ದಲ್ಲಿ ಅಂತಹ ಮಾರಾಟ ಮಳಿಗೆಗಳ ಹಾಗು ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು. ಪಾರ್ಕ್‍ಗಳು, ಹೊಟೇಲ್ ಹಾಗು ರೆಸ್ಟೊರೆಂಟ್‍ಗಳು, ಬೇಕರಿಗಳು, ಎಲ್ಲಾ ಅಂಗಡಿಮುಂಗಟ್ಟುಗಳು, ಸಿನಿಮಾ ಥಿಯೇಟರ್‍ಗಳು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಯ ಆವರಣಗಳು ಸೇರಿದಂತೆಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದು, ಇದಕ್ಕೆ ಸಂಬಂಧಪಟ್ಟ ಫಲಕಗಳನ್ನು ಕೂಡಲೇ ಅಳವಡಿಸಿಕೊಳ್ಳಬೇಕು. ಕಾನೂನಿನ ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿಕೊಳ್ಳಬೇಕು.  ಕಾನೂನಿನನ್ವಯ ಸೂಚನಾ ಫಲಕಗಳನ್ನು ಪ್ರದರ್ಶಿಸುವುದು ಅಂಗಡಿ ಮುಂಗಟ್ಟುಗಳ ಮಾಲೀಕರಜಾವಾಬ್ದಾರಿಯಾಗಿದ್ದು ಕೂಡಲೇ ಸೂಕ್ತ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಕೂಡಲೇ ತೆರವುಗೊಳಿಸುವುದು.18 ವರ್ಷಕ್ಕಿಂತಕಡಿಮೆ ವಯೋಮಾದವರಿಗೆ ತಂಬಾಕು ಮಾರಾಟ ನಿಷಿಧ್ದವಾಗಿದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ವಿಶೇಷ ಕಾರ್ಯಾಚರಣೆಯಲ್ಲಿ ಕೋಟ್ಪಾ ಕಾಯಿದೆಯಂತೆ ಸೂಕ್ತ ಸೂಚನಾ ಫಲಕಗಳನ್ನು ಪ್ರದರ್ಶಿಸದ ಮಳಿಗೆಗಳಿಂದ ಒಟ್ಟು 4000/- ದಂಡ ವಸೂಲಿ ಮಾಡಿ 40 ಪ್ರಕರಣಗಳನ್ನು ದಾಖಸಲಾಯಿತು. 
ಕಾರವಾರ ತಹಸಿಲ್ದಾರ ಜಿ ಎನ್ ನಾಯಕ್, ವೃತ್ತ ನಿರೀಕ್ಷಕ ಶರಣಗೌಡ ಪಾಟೀಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೂರಜ್ ನಾಯಕ್, ಪಿಎಸ್‍ಐಜಕ್ಕಣ್ಣವರ್, ಇನ್ಸ್ಟಿಟ್ಯೂಟ್‍ಆಫ್ ಪಬ್ಲಿಕ್ ಹೆಲ್ತ್, ಬೆಂಗಳೂರಿನ ಡಾಚಂದ್ರಶೇಖರ್‍ಕೊಟಗಿ, ಸೇರಿದಂತೆವಿವಿಧಇಲಾಖೆಯಅಧಿಕಾರಿಗಳು ಸಕ್ರೀಯವಾಗಿ ಪಾಲ್ಗೊಂಡು ಜಿಲ್ಲೆಯಲ್ಲಿತಂಬಾಕು ನಿಯಂತ್ರಣಕಾಯ್ದೆಯ ಸಮರ್ಪಕ ಅನುಷ್ಠಾನಕುರಿತು ್ಲಅರಿವು ಮೂಡಿಸಿದರು. 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...