ಕಾರವಾರ:ಕಿತ್ತೂರಿನ ವೀರರಾಣಿ ಚೆನ್ನಮ್ಮ ಸದಾ ಸ್ಮರಣೀಯ : ಎ.ಡಿ.ಸಿ ಹೆಚ್. ಪ್ರಸನ್ನ

Source: varthabhavan | By Arshad Koppa | Published on 24th October 2017, 8:55 AM | Coastal News |

ಕಾರವಾರ ಅಕ್ಟೋಬರ 23 :  ಕಿತ್ತೂರು ವೀರರಾಣಿ ಚೆನ್ನಮ್ಮಾಳ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮತ್ತು ಪ್ರಜಾವಾತ್ಸಲ್ಯ ಮನೋಬಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹೆಚ್.ಪ್ರಸನ್ನ ಹೇಳಿದರು.
     ಅವರು ಜಿಲ್ಲಾ ಪಂಚಾಯತ, ಜಿಲ್ಲಾಡಳಿತ, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಗಳ ಕಚೇರಿ ಸಭಾ ಭವನದಲ್ಲಿ ನಡೆದ 193ನೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿ ಬ್ರೀಟಿಷರ ಆಡಳಿತದ ವಿರುದ್ದ ಹೋರಾಡಿದ ರಾಣಿ ಚೆನ್ನಮ್ಮಳು ವೀರ ಯೋಧೆಯಾಗಿ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ  ಸ್ಪೂರ್ತಿದಾಯಕವಾಗುವದರೊಂದಿಗೆ ಸಧಾ ಸ್ಮರಣಿಯವಾಗಿದ್ದಾಳೆ ಎಂದು ಹೇಳಿದರು. 
  ಕಾರವಾರ ಶೈಕ್ಷಣಿಕ ಜಿಲ್ಲೆ ಡಿ.ಡಿ.ಪಿ.ಐ. ಪ್ರಕಾಶ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಸರಕಾರ ಪ್ರಥಮ ಭಾರಿಗೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡುತ್ತಿರುವದು ಸ್ವಾತಂತ್ಯಕ್ಕಾಗಿ ವೀರಮರಣ ಹೊಂದಿದ ಮಹಿಳೆಗೆ ನೀಡಿದ ಗೌರವಾಗಿದೆ. ದೇಶದ ಇತಿಹಾಸದ ವೀರ ಮಹಿಳೆಯರ ಹೆಸರು ಪ್ರಸ್ತಾಪಿಸಿದಾಗ ಝಾನ್ಸಿ ರಾಣಿಯಂತೆ  ರಾಜ್ಯದ ಕಿತ್ತೂರು ರಾಣಿ ಚೆನ್ನಮ್ಮಳ ಹೆಸರು ಕೂಡಾ ಬರುತ್ತದೆ. ಹೋರಾಟಕ್ಕಾಗಿ ದುಡಿಯುತ್ತಿರುವ ಮಹಿಳೆಯರಿಗೆ  ರಾಣಿ ಚೆನ್ನಮ್ಮಳು ಸದಾ ಸ್ಪೂರ್ತಿ ಸೆಲೆಯಾಗಿದ್ದಾಳೆ ಎಂದು ಹೆಳಿದರು. 
ಕಿತ್ತೂರು ರಾಣಿ ಚೆನ್ನಮ್ಮಳ ಜೀವನ ಕುರಿತು ಉಪನ್ಯಾಸ ನೀಡಿದ ಶಿರವಾಡ ಸರಕಾರಿ ಪ್ರೌಡ ಶಾಲೆ ಶಿಕ್ಷಕರಾದ ವಾಸುದೇವ ನಾಯಕ ಮಾತನಾಡಿ  ರಾಣಿ ಚೆನ್ನಮ್ಮಳು ಕನ್ನಡ ನಾಡು ಕಂಡ ಹೆಮ್ಮೆಯ ಹೆಣ್ಣು ಮಗಳು. ಕೆಲವೇ ಕೆಲವು ವರ್ಷಗಳವರೆಗೆ ಬದುಕಿದರೂ ಕೂಡಾ ಸ್ವಾತಂತ್ರ್ಯಕ್ಕಾಗಿ ಹುತ್ಮಾತ್ಮರಾಗೂವ ಮೂಲಕ ಅಜರಾಮರಳಾಗಿ ಇಂದಿಗೂ ಜನಮಾನಸದಲ್ಲಿ ಬದುಕಿರುವ ವೀರ ಮಹಿಳೆ. ಗಂಡ ಮತ್ತು ದತ್ತು ಪುತ್ರ ಅಕಾಲಿಕ ಮರಣಕ್ಕೆ ತುತ್ತಾಧಾಗ ದೃತಿಗೆಡದೇ  ಒಗ್ಗಟ್ಟಾಗಿ ಹೊರಾಡಬೆಕೆಂಬ ಬೀಜವನ್ನು ತನ್ನ ಪ್ರಜೆಗಳಲ್ಲಿ ಬಿತ್ತಿದವಳು ವೀರ ರಾಣಿ ಚೆನ್ನಮ್ಮ.  ತನ್ನಂತೆ ಸ್ವಾತಂತರ್ಯವನ್ನು ಬಯಸಿದ ಸಂಗೋಳ್ಳಿ ರಾಯಣ್ಣನನ್ನು ಬೆಂಬಲಿಸಿ ಮಗನಂತೆ ಕಂಡವರು ಕಿತ್ತೂರು  ರಾಣಿ ಚೆನ್ನಮ್ಮರು. 15ನೇ ಶತಮಾನದ ಮಹಿಳೆಯರಿಗೆ ಸ್ವಾತಂತ್ರ್ಯದ ಕಲ್ಪನೆಯೂ ಇಲ್ಲದಂತಹ ಸಂದರ್ಭದಲ್ಲಿ ಸ್ವಾತಂತ್ರ್ಯದ ಕಹಳೆ ಊದುವ ದೈರ್ಯ ತೋರಿದ ಧೀರ ಮಹಿಳೆಯನ್ನು ನೆನೆಯವದು ಎಲ್ಲರ ಕರ್ತವ್ಯವಾಗಿದೆ  ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ ಸ್ವಾಗತಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...