“ತಿರುಕನೋರ್ವ ನೂರ ಮುಂದೆ” (ಕನಕ ಜಯಂತಿ - ನವೆಂಬರ್ 6)

Source: jagadish | By Arshad Koppa | Published on 6th November 2017, 8:24 AM | State News | Special Report |

ಮುರುಕ ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ.” ಕನ್ನಡಿಗರಿಗೆ ಚಿರಪರಿಚಿತವಾದ ತಿರುಕನ ಕನಸು ಎಂಬ ಸಣ್ಣ ಕೃತಿ ಕನಕದಾಸನಂದು ಎಂದು ಕೆಲವರೂ, ಮುಪ್ಪಿನ ಷಡಕ್ಷರಿಯದೆಂದು ಇತರರೂ ಹೇಳುವುದುಂಟು. ಹಳೆಯ ಹಸ್ತಪ್ರತಿಗಳು ದೊರೆತಲ್ಲಿ ಈ ಅಂಕಿತಪಲ್ಲಟ ಹೇಗಾಯಿತೆಂಬುದನ್ನು ನಿರ್ಣಹಿಸಬಹುದು. ತಿರುಕನ ಕನಸಿನ ಕಥೆ ಸರ್ವರಿಗೂ ತಿಳಿದುದೇ ಆಗಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡು ಎಂಬ ಗಾದೆಯಂತೆ, ಈ ಕೃತಿಯಲ್ಲಿ ಬಡವನ ವಿಡಂಬನೆಯಿದೆ. ಈ ರಚನೆಯ ಕರ್ತೃವಿನ ವಿಚಾರದಲ್ಲಿ ಸಂದೇಹ ತಲೆದೋರಿರುವುದರಿಂದ ಇದನ್ನು ಪ್ರತ್ಯೇಕವಾಗಿಯೇ ಪರಿಶೀಲಿಸುವುದು ಸೂಕ್ತವೆನಿಸುತ್ತದೆÉ.
    ಉಡುಪಿಯ ದೇವಸ್ಥಾನದಲ್ಲಿ ಶೋಧ್ರರಿಗೆ ದೇಗುಲದ ಒಳಗೆ ಪ್ರವೇಶವಿರಲಿಲ್ಲ. ಆಗ ಕನಕದಾಸರು ತಮ್ಮ ಇಷ್ಟದೇವದ ಮೇಲೆ ಭರವಸೆ ಇಟ್ಟು ದೇವಸ್ಥಾನದ ಹಿಂದೆ ನಿಂತು ತಮ್ಮ ಮನದಾಳದಿಂದ ನಿÀವೇದಿಸಿಕೊಂಡರು. “ಬಾಗಿಲನು ತೆರೆದು ಸೇವೆಯನ್ನು ಕೊಡು ಹರಿಯೆ ಕೂಗಿದರು ದನಿ ಕೇಳದೆ ನರಹರಿಯೆ?” ಎಂದು ಬೇಡಿ ಕೊಂಡಾಗ ಪರವಶನಾದ ಶ್ರೀಕೃಷ್ಣನು ಹಿಂಭಾಗದ ಗೋಡೆಯನ್ನು ಒಡೆದು ಹಿಮ್ಮುಖವಾಗಿ ದರ್ಶನ ಭಾಗ್ಯವನ್ನು ಕರುಣಿಸಿದರಂತೆ.
    “ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ....... ಬಲ್ಲಿರಾ..... ಎಂದು ಜನ ಸಾಮಾನ್ಯರ ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದವರು ದಾಸ ಶ್ರೇಷ್ಠರಾದ ಕನಕದಾಸರು.
    ಕನ್ನಡ ಹರಿದಾಸ ಪರಂಪರೆಯಲ್ಲಿ ಕನಕದಾಸರ ಹೆಸರು ಬಹುವಿಶಿಷ್ಟವಾದದು. ಕನಕ ಎಂಬ ಪದವನ್ನು ಯಾವಕಡೆಯಿಂದ ಓದಿದರೂ ಅದು ಕನಕ ಎಂದೇ ಅರ್ಥವನ್ನು ಕೊಡುತ್ತದೆ. ಹಾಗೇ ಕನಕದಾಸರು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಿರತೆಯನ್ನು ಹೊಂದಿದವರು. ಅದು ಅವರ ಸಾಹಿತ್ಯದಲ್ಲಿರುವ ಸತ್ವವನ್ನು ಎತ್ತಿತೋರಿಸುತ್ತದೆ.
    ಅವರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಅಧ್ಯಾತ್ಮ ವೈಚಾರಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರುವಂತವು. ಕನಕದಾಸರು ಯಾವುದೇ ಒಂದು ಜಾತಿ, ಮತ, ಪಂಥ ಪ್ರದೇಶಕ್ಕೆ ಸೀಮಿತವಾದವರಲ್ಲ. ಅವರು  ವಿಶ್ವದ ಒಳಿತನ್ನು ಬಯಸಿ ಜೀವಪರ ನಿಲುವು ತಾಳಿ ದಾರ್ಶನಿಕರೆನಿಸಿಕೊಂಡಿದ್ದಾರೆ. ಆದ್ದರಿಂದ ಜಾಗತಿಕ ಮಟ್ಟಕ್ಕೆ ಅವರ ವಿಚಾರಧಾರೆಗಳನ್ನು ಹೊತ್ತೊಯ್ಯಬೇಕಾದ ಅನಿವಾರ್ಯತೆ ಇದೆ.
    ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಈಗಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 17 ನವೆಂಬರ್ 1487 ರಂದು ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪ ನಾಯಕ ದಂಪತಿಗಳ ಮಗನಾಗಿ ಜನಿಸಿದರು. ವ್ಯಾಸರಾಯರ ಶಿಷ್ಯರಾಗಿ ಅಗಾಧ ವಿಧ್ವತ್ತಿನಿಂದ ಪ್ರಭಾವಿತರಾದರು. ಉಡುಪಿಯ ಶ್ರೀಕೃಷ್ಣನ ಪರಮ ಭಕ್ತರಾದರು. ಕಾಗಿನೆಲೆಯ ಆದಿಕೇಶವನ ಆರಾಧಕರಾಗಿದ್ದ ಕನಕದಾಸರು ತಮ್ಮ ಅಂಕಿತನಾಮವನ್ನಾಗಿ ಅಳವಡಿಸಿಕೊಂಡರು.
    ಕನಕದಾಸರು ಆರಂಭದಲ್ಲಿ ದಂಡ ನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತನಂತರ ಅವರಿಗೆ ವೈರಾಗ್ಯ ಉಂಟಾಗಿ ತಮ್ಮ ಪದವಿ, ವೈಯಕ್ತಿಕ ಭೋಗಾಭಿಲಾಷೆಗಳನ್ನು ತ್ಯಜಿಸಿ ಸದಾ ಸಂಕೀರ್ತನೆಗಳನ್ನು ಹಾಡುತ್ತಾ ಹರಿ ಭಕ್ತರಾಗಿ ಭಗವನ್ನಾಮಸ್ತುತಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಸಿದರು.
    ಒಂದು ದಿನ ವ್ಯಾಸರಾಯ ಸ್ವಾಮಿಗಳು ತಮ್ಮ ಪೋಜೆಯಾದ ಬಳಿಕ ತಮ್ಮ ಶಿಷ್ಯರೆಲ್ಲರಿಗೂ ಒಂದೊಂದು ಬಾಳೆಯ ಹಣ್ಣಿನ ಪ್ರಸಾದ ಕೊಟ್ಟು ಯಾರು ಇಲ್ಲದ ಕಡೆಯಲ್ಲಿ ಇದನ್ನು ತಿಂದು ಬನ್ನಿ ಎಂದು ಆಜ್ಞೆ ಮಾಡಿದರು. ಒಬ್ಬೊಬ್ಬರು ಒಂದೊಂದು ಏಕಾಂತ ಸ್ಥಳ ಹುಡುಕಿ ತಿಂದು ಬಂದರು. ಆದರೆ ಕನಕದಾಸರು ಮಾತ್ರ ಹಣ್ಣನ್ನು ತಿನ್ನದೆ ಅದನ್ನು ಹಿಂದಕ್ಕೆ ತಂದರು ಇದಕ್ಕೆ ಕಾರಣ ಕೇಳಿದಾಗ ಅದಕ್ಕೆ ಅವರು, ಯಾರು ಇಲ್ಲದ ಸ್ಥಳ ಯಾವುದುಂಟು? ದೇವರಿಲ್ಲದ ಸ್ಥಳವೇ ಇಲ್ಲವಲ್ಲ ಆದ್ದರಿಂದ ಹಣ್ಣು ತಿನ್ನಲಾಗಲಿಲ್ಲ ಎಂದು ಗುರುಗಳಲ್ಲಿ ಬಿನ್ನವಿಸಿಕೊಂಡರು.
    ಕನಕದಾಸರು ಕೀರ್ತನೆಗಳಲ್ಲದೆ ಹಲವು ಕಾವ್ಯಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಕಾವ್ಯಗುಣವಿದೆ. ಜೀವನ ದರ್ಶನ, ಹರಿಭಕ್ತಿಸಾರ, ನೈಸಿಂಹಸ್ತದ ತತ್ವ ಜ್ಞಾನಗಳ ನಿರೂಪಣೆಯಿಂದ , ನಳ ಚರಿತ್ರೆ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ ಅವರ ಕಾವ್ಯಗಳು, ಗುಣದ ದೃಷ್ಟಿಯಿಂದ ಗಣನೀಯವಾದವು. ಕನಕದಾಸ ಎನ್ನುವುದು ಒಂದು ವ್ಯಕ್ತಿಯಲ್ಲ, ಅದು ಆ ವ್ಯಕ್ತಿಯ ಹೆಸರೂ ಅಲ್ಲ. ಅದೊಂದು ತತ್ವ ಅದೊಂದು ಸಿದ್ಧಾಂತ ಅದೊಂದು ಬಹುಸಂಖ್ಯಾತ ಕನ್ನಡಿಗರ ಸ್ವಾಭಿಮಾನದ ಸಂಕೇತ.
    ಕನಕದಾಸರು ಕಲಿಯೂ, ಕವಿಯೂ ಆಗಿದ್ದವರು. ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರಾಗಿ ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಸೀಮಿತಗೊಳ್ಳದ ಇವರು ದಾಸ, ಭಕ್ತ, ದಾಸ ಶ್ರೇಷ್ಠ, ಸಂತ, ಮಹಾತ್ಮಾ, ಮಹಾಮಾನವತಾವಾದಿ, ಸಮಾಜಿಕ ಚಿಂತಕ, ವೈಚಾರಿಕತೆಯ ಹರಿಕಾರ, ದಾರ್ಶನಿಕ ಕನಕದಾಸರೆಂದು ಜನಮನದಲ್ಲಿ ನೆಲೆನಿಂತಿದ್ದಾರೆ. ಹೋರಾಟದಿಂದ ಕೂಡಿದ ಅವರ ಆದರ್ಶ ಬದುಕು ಹಾಗೂ ಸಾಮಾಜಿಕ, ಧಾರ್ಮಿಕ, ವೈಚಾರಿಕ ಚಿಂತನೆಗಳಿಂದ ಕೂಡಿದ ಅವರ ಸಾಹಿತ್ಯ, ವರ್ಗ ಬೇಧಗಳಿಲ್ಲದ ಅವರ ಹೊಸ ಸಮಾಜ ಪರಿಕಲ್ಪನೆಯ ಚಿಂತನೆಗಳು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಿವೆ.
    ಕನಕದಾಸರ ಮೊದಲಿನ ಹೆಸರು ತಿಮ್ಮಪ್. ತಿಮ್ಮಪ್ಪನಿಗೆ ಭೂಮಿಯಲ್ಲಿ ‘ಧನ-ಕನಕ’ ದೊರೆತ ನಂತರ ಅವನು ಕನಕನಾದ ಎಂಬ ಪ್ರತೀತಿ ಇದೆ. ಆದರೆ ಇಲ್ಲಿ ನಾವೂ ಇನ್ನೂ ಒಂದು ವಿಚಾರವನ್ನು ಗಮನಿಸಿಬೇಕಿದೆ. ಅದೇನೆಂದರೆ, ತಿಮ್ಮಪ್ಪನು ದಂಡನಾಯಕ ಪದವಿಯನ್ನು ತೊರೆದು ಅಧ್ಯಾತ್ಮದತ್ತ ಮುಖಮಾಡಿದಾಗ, ಅವನು ಆಶ್ರಯಿಸಿದ್ದು ಮನೆ ದೇವರಾದ ತಿರುಪತಿ ತಿಮ್ಮಪ್ಪನನ್ನು. ತಿರುಪತಿ ತಿಮ್ಮಪ್ಪನಿಗೆ ‘ಕನಕಗಿರಿ ವಾಸ’ ಎಂಬ ಪರ್ಯಾಯ ನಾಮವೂ ಇದೆ. ಆದ್ದರಿಂದ ತಿಮ್ಮಪ್ಪ ಸಂಸ್ಕøತೀಕರಣದ ಪ್ರಭಾವದಿಂದ ಕನಕನಾದ ನಂತರ ಕನಕದಾಸನಾದ ಎಂದೂ ಊಹಿಸಬಹುದು.
    “ಜಲವೆ ಸಕಲ ಕುಲಕ್ಕೆ ತಾಯಲ್ಲವೆ” ಈ ಸಾಲು ಸಹ ಬಹು ದೊಡ್ಡ ಅನ್ವೇಷಣೆಯ ಗುರುತಾಗಿದೆ. ಜಲ-ನೀರು ಎಲ್ಲ ಜೀವಿಗಳಿಗೂ ಬೇಕು ಎನ್ನುವುದು ಸರಳ ಅರ್ಥ. ಆದರೆ ಈ ಪೃಥ್ವಿಯ ಮೇಲೆ ಹುಟ್ಟಿದ ಮೊದಲ ಮತ್ತು ಎಲ್ಲ ಜೀವಿಗಳು ನೀರಿನಲ್ಲಿಯೇ ಹುಟ್ಟಿವೆ. ಭೂಮಿ ಮೇಲಿನ ಸಕಲ ಜೀವಿಗಳಿಗೆ ಜಲವೇ ಆಧಾರ. ಜೀವ ಪ್ರಪಂಚದಲ್ಲಿ ಮೊಟ್ಟ ಮೊದಲು ಹುಟ್ಟಿದ ಏಕಾಣು ಜೀವಿ ಅಮೀಬಾ. ಅದು ಹುಟ್ಟಿದ್ದು ನೀರಿನಲ್ಲಿ ಇದು ಇತ್ತೀಚಿನ ಸಂಶೋಧನೆ. “ಅಟ್ಟು ಉಣ್ಣದ ವಸ್ತುಗಳಿಲ್ಲ” ಎಂಬ ಸಾಲು ಬಹಳ ಗಂಭೀರವಾದ ಚಿಂತನೆಗೆ ಹಚ್ಚುತ್ತದೆ.  ಆಧುನಿಕ ವಿಜ್ಞಾನದಲ್ಲಿ ಒಂದು ಸೂತ್ರ ಇದೆ. ಅದನ್ನು ‘Law of Conservation of energy’  ಎಂದು ಕರೆಯುತ್ತೇವೆ. ಯಾವುದೇ ಒಂದು ವಸ್ತು ಮತ್ತು ಶಕ್ತಿ ನಾಶವಾಗುವುದಿಲ್ಲ. ಅದು ಒಂದು ರೂಪದಿಂದ ಇನ್ನೊಂದು ರೂಪವನ್ನು ತಾಳುತ್ತದೆ. “Energy can neither be created nor destroyed But it can be Converted from one form to another.”  “ಅಟ್ಟು ಉಣ್ಣದ ವಸ್ತುಗಳಿಲ್ಲ” ಎಂಬ ಸಾಲು ಈ ಸಿದ್ಧಾಂತವನ್ನು ಹೇಳುತ್ತದೆ. ಇವುಗಳನ್ನು ಕನಕದಾಸರು 500 ವರ್ಷಗಳ ಹಿಂದೆ ಅರಿತಿದ್ದರು.
    “ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವವಸುದೆಯೊಳಗೆ ಭೂಸುರರುಣಲಿಲ್ಲವೆ” ಎಂಬ ಸಾಲು ಶರೀರ ಶಾಸ್ತ್ರಜ್ಞನ ಸಂಶೋಧನೆಯಂತೆ ತೋರುತ್ತದೆ. ಇತ್ತೀಚಿಗೆ ವಿಜ್ಞಾನವು ‘ಹಾಲ’ನ್ನು “ಅರೆಮಾಂಸಾಹಾರಿ (Lactovegitarian)”  ಎಂದು ತೀರ್ಮಾನಿಸಿದೆ. ಇದನ್ನು ಕನಕದಾಸರು ಹಿಂದೆ ಹೇಳಿದ್ದಾರೆ.
    ಕನಕದಾಸರೂ ತಮ್ಮ ಕೀರ್ತನೆಗಳಲ್ಲಿ ರಾಗಗಳ ಸೂಚನೆ ಮಾಡಿದ್ದಾರೆ. ಅವರಿಗೆ ಸಂಗೀತದ ಪರಿಚಯ ಚೆನ್ನಾಗಿದ್ದೆತೆಂದು ಇದರಿಂದ ಸ್ಪಷ್ಟವಾಗಿದೆ. ಪ್ರಪಂಚಾನುಭವ ಅವರ ರಚನೆಗಳಲ್ಲಿ ಪರ್ವವಾಗಿ ಮೂಡಿದೆ. ಕೆಲವೆಡೆಗಳಲ್ಲಂತೂ ಅವರ ಕಲ್ಪನಾ ಶಕ್ತಿ ಅದ್ಭುತವಾಗಿದೆ. ಸಹಜ ಪ್ರತಿಭೆ, ಭವ್ಯ ಕಲ್ಪನೆ, ಬಾಷಾ ಪ್ರಭುತ್ವಗಳಿಂದ ಕನಕದಾಸರು ಶ್ರೇಷ್ಠಕವಿಯಾಗಿ ಬೆಳಗಿದ್ದಾರೆ. ಅವರು ಕೃತಿಗಳು ಉದಾತ್ವಾದುವು. ಸತ್ವ ಹಾಗೂ ರಚನೆಯ ದೃಷ್ಟಿಯಿಂದ ಅವು ಕನ್ನಡ ಸಾರಸ್ವತ ಸಂಪತ್ತನ್ನು ಹೆಚ್ಚಿಸಿದೆ.
    ಒಟ್ಟಿನಲ್ಲಿ ಕನಕದಾಸರು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿರುವ ರಾಮಾಯಣ, ಮಹಾಭಾರತ ಮತ್ತು ಭಾಗವತಗಳ ಜ್ಞಾನ ಕೀರ್ತನಗಳಲ್ಲಿ ನಿರೂಪಿಸಿರುವ ಭಕ್ತಿ, ಜ್ಞಾನ, ವೈರಾಗ್ಯಗಳ, ಪ್ರಜ್ಞೆ ತಿಳಗನ್ನಡದ ಒಲವು ಇವೇ, ಮೊದಲಾದವೂ ಹರಿದಾಸ ಪ್ರಪಂಚದಲ್ಲಿ ಮತ್ತು ಕಾವ್ಯಕ್ಷೇತ್ರದಲ್ಲಿ ಅವರ ಸಾದನೆ ಹಿರಿದಾದುದು ಎಂಬುದನ್ನು ದೃಡಪಡಿಸುತ್ತದೆ.
    ಕನಕದಾಸರು ದಾಸ ಶ್ರೇಷ್ಠರು, ಹರಿದಾಸ ಶ್ರೇಷ್ಠರು, ಕಾವ್ಯ ಶ್ರೇಷ್ಠರು, ಕೀರ್ತನಾ ಶ್ರೇಷ್ಠರು ಹಾಗೆ ವಿಜ್ಞಾನ ವಿಚಾರಕ್ಕೆ ಬಂದಾಗ ವಿಜ್ಞಾನ ಶ್ರೇಷ್ಠರು ಎಂದು ಹೇಳಬಹುದು.


ಜಗದೀಶ ವಡ್ಡಿನ
                                  

 ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
 ಬಾಡ, ಕಾರವಾರ
ಮೋ: 9632332185

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...