ಕಾರವಾರ: ಗಣಿತ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರ

Source: varthabhavan | By Arshad Koppa | Published on 24th June 2017, 8:28 AM | Coastal News | Guest Editorial |

ಕಾರವಾರ, ಜೂನ್ ೨೩: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿ, ಬೆಂಗಳೂರು,     ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ ಮತ್ತು ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ದಿನಾಂಕ 22 ಜೂನ್ 2017ರಂದು ಗಣಿತ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರವನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರದಲ್ಲಿ ಹಮ್ಮಿಕೊಳ್ಳಲಾಯಿತು.


    
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಶ್ರೀ. ಪಿ.ಕೆ.ಪ್ರಕಾಶರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೊಸ ಪಠ್ಯ ಪುಸ್ತಕದ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಶಿವಾನಂದ ನಾಯಕ ರವರು ಮಾತನಾಡಿ ನಮ್ಮ ಕಾಲೇಜ್ ಶಿಕ್ಷಕರಿಗೆ ತರಬೇತಿ ನೀಡಲು ಯಾವಾಗಲೂ ತೆರೆದಿರುತ್ತದೆ ಎಂಬ ಮಾತನ್ನು ಹೇಳಿದರು. ತದನಂತರ ಜಿಲ್ಲಾವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಯಾದ ಶ್ರೀ. ಗಂಗಪ್ಪ  ಮಾತನಾಡಿ ಅಂಗವಿಕಲರಿಗೆ ಶಿಕ್ಷಣ ನೀಡುವುದು ಒಂದು ಭಾಗ ಎಂದು ಹೇಳಿದರು.

ತದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾದ ಉಪನ್ಯಾಸಕರಾದ ಶುಭಾ ನಾಯಕ ರವರು ಪಠ್ಯ ಕ್ರಮದ ಕುರಿತು ಮಾತನಾಡಿದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಸಂದೀಪ ನಾಯ್ಕ ರಾಣೆ ರವರು ತ್ರಿಭುಜ ವಿಸ್ತೀರ್ಣ ಮತ್ತು ಸೊನ್ನೆಯ ಕುರಿತು ಮಾತನಾಡಿದರು.
ವಿಷಯ ಪರಿವೀಕ್ಷಕರಾದ ಶ್ರೀ. ಪ್ರಭಾಕರ ಚಿಕ್ಮನೆ ರವರು ಪ್ರಾಸ್ತಾವಿಕವಾಗಿ ಹೊಸ ಪಠ್ಯಕ್ರಮ ಮಕ್ಕಳಿಗೆ ಗೊಂದಲ ಮಾಡದಂತೆ ಕಲಿಸುವ ಕೆಲಸ ಶಿಕ್ಷಕರು ನಿರ್ವಹಿಸಬೇಕು ಎಂದು ಹೇಳಿದರು.

ತದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಜಯಂತ ನಾಯಕ ರವರು ಹೊಸ ಪಠ್ಯಕ್ರಮದ ಬಗ್ಗೆ ಮಾತನಾಡಿದರು.
ಊಟದ ವಿರಾಮದ ನಂತರ ಕಾರವಾರ ಕ್ಷೇತ್ರ ಶಿಕ್ಷಣಾಧುಕಾರಿಯಾದ ಶ್ರೀ. ಶ್ರೀಕಾಂತ ಹೆಗಡೆ ಯವರು ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಾಗಾರಕ್ಕೆ ಊಟದ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ. ವಿ.ಪಿ.ಶಾನಭಾಗ ಗಣಿತ ಶಿಕ್ಷಕರು, ಜನತಾ ವಿದ್ಯಾಲಯ ಕುಮಟಾ ಹಾಗೂ ಶ್ರೀ. ರಾಜೇಂದ್ರನ್ ನಾಯಕ್ ಮುಖ್ಯಾಧ್ಯಾಪಕರು, ಪಿ.ಎನ್.ಇ. ಹೈಸ್ಕೂಲ್ ಚೆಂಡಿಯಾ ಇವರು ಪಠ್ಯಕ್ರಮದ ಬಗ್ಗೆ ಉಪನ್ಯಾಸ ನೀಡಿದರು
ರಾಜೇಂದ್ರನ್ ನಾಯಕ, ಮುಖ್ಯಾಧ್ಯಾಪಕರು, ಪಿ.ಎನ್.ಇ. ಪ್ರೌಢಶಾಲೆ, ಚೆಂಡಿಯಾ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು..
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...