ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕೃತ ಪ್ರವಾಸ

Source: varthabhavan | By Arshad Koppa | Published on 28th May 2017, 3:45 PM | Coastal News |

ಕಾರವಾರ ಮೇ 27 : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮೇ 29 ರಂದು ಸಂಜೆ ಗಂ ಹಳಿಯಾಳ ಆಗಮಿಸಿ ನಾಗದೇವತಾ ಮೂರ್ತಿ ಪ್ರತಿಷ್ಟಾಪನಾ ಸಮಾರಂಭದಲ್ಲಿ ಭಾಗವಹಿಸುವದು. ಸಂಜೆ 6ಗಂ.ಪಿ.ಎಮ್.ಜಿ.ಎಸ್.ಯ್, ಪಿ..ಡೆಬ್ಲೂ.ಡಿ. ಆರ.ಡಿ.ಪಿ,ಆರ್ ಮತ್ತು ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸುವರು. ನಂತರ ಹಳಿಯಾಳದಲ್ಲಿ ವಾಸ್ತವ್ಯ ಹೂಡುವರು.
ಮೇ 30 ರಂದು ಬೆ.7ಗಂಟೆಗೆ ಕ್ಯಾತನಗೇರಾ ಗ್ರಾಮದ ಕೆರೆಗೆ ಭೇಟಿ ನೀಡುವರು. ಬೆ.7.30ಗಂ ಯಲ್ಲಾಪುರಕ್ಕೆ ಪ್ರಯಾಣ ಬೆಳಸುವರು. ಬೆ.8ರಿಂದ 9ಗಂಟೆವರೆಗೆ ಯಲ್ಲಾಪುರದಲ್ಲಿ ಸಾರ್ವಜನಿಕರ ಭೇಟಿ ಮಾಡುವರು. ಬೆ.9 ರಿಂದ 10.30ಗಂವರೆಗೆ ಯಲ್ಲಾಪುರ ಅರಣ್ಯ ಇಲಾಖೆಯ ಸಸ್ಯೋದ್ಯಾನವನ ಮತ್ತು ವಲಯ ಅರಣ್ಯ ಅಧಿಕಾರಿಗಳ ಕಛೇರಿ ಕಟ್ಟಡ ಹಾಗೂ ಕಿರವತ್ತಿ ಅರಣ್ಯ ಇಲಾಖೆಯ ಸಸ್ಯೋದ್ಯಾನವನ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.ಬೆ.10.30ಗಂ,ಯಲ್ಲಾಪುರದಿಂದ ನಿರ್ಗಮಿಸುವರು. ಬೆ.11.45ಗಂ ಮುರ್ಕವಾಡ ಆಗಮಿಸಿ ರಾಮ ಜಪ ಯಜ್ಷದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.12.30ಗಂ ಮುರ್ಕವಾಡದಿಂದ ನಿರ್ಗಮಿಸುವರು.ಮ.1ಗಂ.ಹಳಿಯಾಳ ಆಗಮಿಸಿ ನೂತನವಾಗಿ ನಿರ್ಮಾಣ ಮಾಡುವ ಸಬ್ ಜೈಲ್ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ನಂತರ .ಹಳಿಯಾಳ ತಹಶೀಲದಾರ ಕಛೇರಿಯಲ್ಲಿ ಕಡತಗಳ ಗಣಕೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ಸಮೃದ್ಧಿ ಯೋಜನೆಯ ಮತ್ತು ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡುವರು. ಮ.3 ಗಂಟೆಗೆ  ಹಳಿಯಾಳ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಶಾಲಾ ಪ್ರಾರಂಭೋತ್ಸವ ನಿಮಿತ್ತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು..  ಮ.3.30ಗಂಟೆಗೆ ಹಳಿಯಾಳದಿಂದ ನಿರ್ಗಮಿಸಿ ಹುಬ್ಬಳ್ಳಿಗೆ ಹೊರಡುವರು. 

 
 
ಕಾರವಾರ: ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ 
ಕಾರವಾರ ಮೇ 27 : ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ ಪ್ಲಾಸ್ಟಿಕ್ ಇಂಜನಿಯರಿಂಗ್ ಟೆಕ್ನಾಲಜಿ ಮೈಸೂರು ರವರ ಮೂಲಕ ಪರಿಶಿಷ್ಟ ಜಾತಿ ನಿರುದ್ಯೋಗಿ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
   ಆಸಕ್ತ ಪರಿಶಿಷ್ಟ ಜಾತಿ ನಿರುದ್ಯೋಗಿ ಅಭ್ಯರ್ಥಿಗಳು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಗ್ರೇಡ್-1/2, ಸಮಾಜ ಕಲ್ಯಾಣ ಇಲಾಖೆ ರವರಿಂದ ಅರ್ಜಿ ನಮೂನೆ ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ನಿರ್ದೇಶಕರು ಮತ್ತು ಮುಖ್ಯಸ್ಥರು, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜನಿಯರಿಂಗ್ ಟೆಕ್ನಾಲಜಿ ನಂ437/ಎ ಹೆಬ್ಬಾರ ಇಂಡಸ್ಟ್ರೀಯಲ್ ಏರಿಯಾ ಮೈಸೂರು ರವರಿಗೆ ಅರ್ಜಿ ಸಲ್ಲಿಸುವಂತೆ ಉ.ಕ.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...