ಕಾರವಾರ : ಉಸ್ತುವಾರಿ ಸಚಿವರ ಪ್ರವಾಸ

Source: varthabhavan | By Arshad Koppa | Published on 20th July 2017, 8:39 AM | Coastal News |

ಕಾರವಾರ ಜುಲೈ 19 : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಜುಲೈ 22 ರಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
    ಜುಲೈ 22 ರಂದು ಬೆಳಗ್ಗೆ 9.30 ಗಂಟೆಗೆ ಜೋಯಿಡಾ ತಾಲೂಕ ಅನಮೊಡದಲ್ಲಿ ಅಬಕಾರಿ ಚೆಕ್ ಪೋಸ್ಟ್ ಸಂಕಿರ್ಣ ಅಡಿಗಲ್ಲು ಸಮಾರಂಬದಲ್ಲಿ ಭಾಗವಹಿಸುವರು. ಬೆಳಗ್ಗೆ 10.15ಕ್ಕೆ ವಟಲಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ ಮಾಡುವರು. ಬೆ.11 ಗಂಟೆಗೆ ಕೊನಏತ್ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಮದ್ಯಾಹ್ನ 12 ಗಂಟೆಗೆ ಜಗಲಬೇಟ ಸರಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಕೊಠಡಿಗಳ ಉದ್ಘಾಟನೆ ಸಮಾರಂಭ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 1.30 ರಾಮಗರದಲ್ಲಿ ಸಾರ್ವಜನಿಕ ಭೇಟಿ ಮಾಡುವರು. ಮ.2.30 ಗಂಟೆಗೆ ರಾಮನಗರ ಸರಕಾರಿ ಐ.ಟಿ.ಐ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಸರಕಾರಿ ಪ್ರಾಢಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.ಸಂಜೆ 4.30 ಗಂಟೆಗೆ ಹಳಿಯಾದಲ್ಲಿ ಸಾರ್ವಜನಿಕರ ಭೇಟಿ ಮಾಡುವರು.
ಜು. 23 ರಂದು ಬೆಳಗ್ಗೆ 10 ಗಂಟೆಗೆ ಹಳಿಯಾಳದಲ್ಲಿ ಸಿದ್ಧಿ ಬುಡಕಟ್ಟು ಜನರಿಗೆ 2017-18ನೇ ಸಾಲಿನ ಪೌಷ್ಠಿಕ ಆಹಾರ ವಿತರಣೆಗೆ ಚಾಲನೆ ನೀಡುವರು. ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೋಲಾರ ಲ್ಯಾಂಟರ್ನ ವಿತರಣೆ ಮಾಡುವರು. ನಂತರ ಸರಕಾರಿ ಬಾಲಕಿಯರ ಮೆಡ್ರಿಕ್ ನಂತರದ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿವಸತಿ ನಿಲಯ ಉದ್ಘಾಟನೆ ಮಾಡುವರು. ಮದ್ಯಾಹ್ನ 3 ಗಂಟೆಗೆ ಪತ್ರಿಕಾ ಗೋಷ್ಠಿ ನಡೆಸುವರು. ಸಂಜೆ 4 ಗಂಟೆಗೆ ಹಳಿಯಾಳದಲ್ಲಿ ನೂತನವಾಗಿ ಮಂಜೂರಾದ ಪರಿಶಿಷ್ಟ ವರ್ಗದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಭೇಟಿ ನೀಡುವದು. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಡಾ.ಬಿ.ಆರ್.ಅಂಬೆಡ್ಕರ ವಸತಿ ಶಾಲೆಗೆ ಭೇಟಿ ನೀಡುವರು. 
ಜು. 24 ರಂದು ಬೆಳಗ್ಗೆ 8.30 ಗಂಟೆಗೆ ಹಳಿಯಾಳದಲ್ಲಿ ಸಾರ್ವಜನಿಕರ ಭೇಟಿ ಮಾಡುವರು. ಬೆಳಗ್ಗೆ 10 ಗಂಟೆಗೆ ಮುರ್ಕವಾಡದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 12 ಗಂಟೆಗೆ ಕೆ.ಕೆ.ಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಯಾತ್ರಿನಿವಾಸ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 2 ಗಂಟೆಗೆ ಜನಗಾದಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕಟ್ಟಡ ಉದಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಜತಗಾ ಗೌಳಿವಾಡದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಫಲಾನುಭವಿಗಳಿಗೆ ಮಂಜೂರಾದ ಆದೇಶ ಪತ್ರ ವಿತರಣೆ ಮಾಡುವರು. ಸಂಜೆ 5.30 ಗಂಟೆಗೆ ಬೆಳವಟಗಿಯಲ್ಲಿ ದುರ್ಗದ ಹಳ್ಳದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವರು.  
ಜು 25 ರಂದು ಬೆಳಗ್ಗೆ 9.30 ಗಂಟೆಗೆ ಹಳಿಯಾಳ ತಾಲೂಕಿನ ಗುತ್ತಿಗೇರಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಥಮಿಕ ಶಾಲೆ ನೂತನ ಕೊಠಡಿಯ ಉದ್ಘಾಟನಾ ಸಮಾರಂಭ ಹಾಗೂ ಸರಕಾರಿ ಹಿರಿಯ ಪ್ರಥಮಿಕ ಶಾಲೆ ನಂ.3ರಲ್ಲಿ ನೂತನವಾಗಿ ನಿರ್ಮಿಸಿದ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬೆಳಗ್ಗೆ 11 ಗಂಟೆಗೆ ಸಾಂಬ್ರಾಣ ಯಲ್ಲಿ ನೂತನವಾಗಿ ಮಂಜೂರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಬಳಿಕ ನೂತನವಾಗಿ ನಿರ್ಮಿಸಲಿರುವ ಪಶುಚಿಕಿತ್ಸಾಲಯ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 12.30 ಗಂಟೆಗೆ ಗುಂಡೊಳ್ಳಿ ಗ್ರಾಮಕ್ಕೆ ಭೇಟಿ ನೀಡುವರು. ಮದ್ಯಾಹ್ನ 2 ಗಂಟೆಗೆ ಹಳಿಯಾಳ ಸಾರ್ವಜನಿಕರ ಭೇಟಿ ಮಾಡುವರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...