ಅಂತರಾಷ್ಟ್ರೀಯ ಮಹಿಳಾ ದಿನ 2017 - ಮಹಿಳೆಯರೇ....... “ಧೈರ್ಯದಿಂದ ಬದಲಾವಣೆಗೆ ಸಿದ್ಧರಾಗಿ”.

Source: jagadish vaddina | By Arshad Koppa | Published on 6th March 2017, 12:09 AM | Special Report | Guest Editorial |

ಅಂತರಾಷ್ಟ್ರೀಯ ಮಹಿಳಾ ದಿನ 2017 ರ ವಿಷಯ “Be Bold For Change” ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ ಕಾಲದಿಂದಲೂ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಮಾನಸಿಕ, ದೈಹಿಕ ಹಿಂಸೆಯಂತಹ ದುಷ್ಕೃತ್ಯಗಳು ನಡೆಯುತ್ತಲೇ ಬಂದಿವೆ. ನಮ್ಮ ದೇಶವು ಸ್ವಾತಂತ್ರ್ಯ ಪಡೆದು 69 ವರ್ಷವಾದರೂ ಮಹಿಳೆಯರಿಗಿನ್ನೂ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಗಾಂಧೀಜಿ “ಮಧ್ಯರಾತ್ರಿಯಲ್ಲಿ ಒಂಟಿ ಮಹಿಳೆ ಭಾರತದಲ್ಲಿ ಸಂಚರಿಸುವ ಸಾಮಥ್ರ್ಯ ಬಂದಾಗ ಅದು ನಿಜವಾದ ಸ್ವಾತಂತ್ರ್ಯ” ಅಂದಿದ್ದರು. ಆದರೆ ಈಗ ಒಂದು ಸಾರ್ವಜನಿಕ ಸಭೆ, ಸಮಾರಂಭ, ವಿದ್ಯಾಸಂಸ್ಥೆ, ರೈಲು, ಬಸ್ಸಿನಲ್ಲಿ ಹಗಲಿನಲ್ಲಿ ಸಂಚರಿಸಲಾಗದ ಈ ದೇಶದಲ್ಲಿ ಎಲ್ಲಿ ಮಹಿಳೆ ಮಧ್ಯರಾತ್ರಿ ಒಂಟಿಯಾಗಿ ಸಂಚರಿಸಬಹುದಾ?
ನೂರು ವರ್ಷಗಳ ಹಿಂದೆ 1910 ರಲ್ಲಿ ಕ್ಲಾರಾ ಜಟ್ಕೆನ್ ನಂತ ಕಮ್ಯೂನಿಷ್ಟ್ ಮಹಿಳೆಯು ಶ್ರಮಿಕ ಮಹಿಳೆಯರಿಗೆ, ಚೈತನ್ಯ ಹುಟ್ಟಿಸುವ ಗುರಿಯಿಂದ ಪ್ರಾರಂಭವಾದುದು ‘ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ’ ಮುಂದೆ ಬರಬರುತ್ತ ಶ್ರಮಿಕ ಮಹಿಳೆಯ ಪದವನ್ನು ಬಿಟ್ಟು ಹೋಯಿತು. ‘ಸ್ತ್ರೀಯರೆಲ್ಲರೂ ಒಂದೇ’ ಎಂಬ ಅಭಿಪ್ರಾಯಕ್ಕೆ ಬಂದಿದೆ. 1910 ಮಾ. 8 ರಂದು ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಘೋಷಿಸಿತು.
ಅಂತರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರಲ್ಲಿ ಆತ್ಮ ಗೌರವದಿಂದ ಜೀವಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ಸ್ತ್ರೀಯರನ್ನು ಕಡೆಗಣ ಸುತ್ತಾ ಸಾಗಿರುವುದು ವಿಪರ್ಯಾಸ. ವಿಶ್ವ ಮಹಿಳಾ ದಿನದಂದು ಸಭೆ, ಭಾಷಣ, ಭರವಸೆಗಳು ಜೋರಾಗಿರುತ್ತವೆ. ಇದು ಆದಿನ ಮಾತ್ರ. ಸಮಾಜ ಸುಧಾರಕರಾದ ರಾಜಾರಾಮ್ ಮೋಹನರಾಯರು ಮಹಿಳೆಯರ ಮೇಲೆ ಜರುಗುತ್ತಿರುವ ಅನ್ಯಾಯ, ಅತ್ಯಾಚಾರ, ಅಸಮಾನತೆಗಳನ್ನು ನಿವಾರಿಸಲು ಶ್ರಮಿಸಿದರು. ಅವರ ಶ್ರಮಕ್ಕೆ ಸ್ವಲ್ಪ ಮಟ್ಟಿಗೆ ಫಲ ನೀಡಿದೆ. ಆದರೆ ಪೂರ್ಣವಾಗಿ ನಿವಾರಣೆಯಾಗಿಲ್ಲ.
ಆಧುನಿಕ ಮಹಿಳೆಯರು ಸೈನ್ಯದಲ್ಲಿ ಸೇರುತ್ತಿದ್ದಾರೆ. ಅಂತರಿಕ್ಷಕ್ಕೆ ಹಾರಿದ್ದಾರೆ. ವಿಜ್ಞಾನ ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ವಿಶ್ವಸುಂದರಿ, ಭೂವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಪುರುಷರು ಮಾಡುವ ಎಲ್ಲ ಸಾಧನೆ ಮಾಡಿದರೂ ಸಹ ಇನ್ನು ಮನೆಯ ನಾಲ್ಕು ಗೋಡೆ ಮಧ್ಯ ಹಾಗೂ ಸಮಾಜದಲ್ಲಿ ವಿವಿಧ ಹಿಂಸೆಗೆ ತುತ್ತಾಗಿ ಜೀವನ ಅಂತ್ಯಗೊಳ್ಳುತ್ತದೆ. ಮಹಿಳೆಯರು ಶಾರೀರಿಕವಾಗಿ, ಮಾನಸಿಕವಾಗಿ, ಶೋಷಣೆಗೊಳಗಾಗುವುದು ಮಾನವ ಹಕ್ಕುಗಳ ಉಲ್ಲಂಘನೆಯೆಂದು ಹೇಳಲಾಗುತ್ತದೆ. ನಮ್ಮ ಭಾರತ ದೇಶದ ಕಾನೂನುಗಳಿಗೇನೂ ಕೊರತೆಯಿಲ್ಲ ಆದರೆ ಅದನ್ನು ಜಾರಿಗೊಳಿಸುವ ಆಡಳಿತ ಕಾರ್ಯನಿರ್ವಹಿಸುತ್ತಿಲ್ಲ. ನಮ್ಮ ದೇಶದ ಕಾನೂನಿನ ವ್ಯವಸ್ಥೆಯಲ್ಲಿ ಜಾತಿ, ಹಣ, ರಾಜಕೀಯ ಬಲದಿಂದ ಆರೋಪಿಗಳು ನಿರಪರಾಧಿಗಳಾಗಿ ಹೊರ ಬರುತ್ತಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಂಪೂರ್ಣ ಸಾಕ್ಷಿಗಳ ಮೇಲೆ ನಿಂತಿದೆ. ಸರಿಯಾದ ಸಾಕ್ಷಿ ಇಲ್ಲವೆಂದರೆ ಆರೋಪಿಯು ನಿರಪರಾಧಿಯಾಗುತ್ತಾನೆ. ಇಂತಹ ಸ್ಥಿತಿಯಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ ಪಾಡು ದೇವರಿಗೆ ಗೊತ್ತು. ನಮ್ಮ ದೇಶದಲ್ಲಿ ಜಾತಿ, ಮತಪಂಥ, ಕಂದಾಚಾರ, ಮೂಢನಂಬಿಕೆಗಳಿಂದ ಸಮಾಜ ತತ್ತರಿಸಿದೆ. ಭ್ರೂಣ ಹತ್ಯೆ, ಶಿಶುಹತ್ಯೆ, ಲೈಂಗಿಕ ಕಿರುಕುಳ, ಹಿಂಸೆ ಇವೆಲ್ಲವೂ ಮಹಿಳಾ ಸಮುದಾಯವನ್ನು ಕಾಡುತ್ತಲೇ ಇದೆ. ಹೀಗಾಗಿ ಪುರುಷ - ಸ್ತ್ರೀ ಸಂಖ್ಯೆಯಲ್ಲಿ ಅಸಮತೋಲನ ವ್ಯಾಪಕವಾಗಿದೆ. ಪುರುಷರು ಮಹಿಳೆಯರಿಗೆ ಸರಿಸಮಾನ ಸ್ಥಾನ ಸ್ವಾವಲಂಬನೆಯಿಂದ ಜೀವಿಸಲು ಬಿಡುತ್ತಿಲ್ಲ. ಮಹಿಳೆಯರ ಮೇಲೆ ಶೋಷಣೆ ತಾರತಮ್ಯ ಸಮಾನತೆ ಇಂದಿಗೂ ಮುಂದುವರೆಯುತ್ತಿದೆ. ಭಾರತೀಯರಲ್ಲಿ ಶಾಪವಾಗಿ ಕಾಡುತ್ತಿರುವ ಅಂಶವೆಂದರೆ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳನ್ನು ತಿರಸ್ಕಾರದಿಂದ ನೋಡುವುದು. ತಾಯಿ ಗರ್ಭದಲ್ಲಿಯೇ ಹೆಣ್ಣು ಮಗುವನ್ನು ಹತ್ಯೆ ಮಾಡುವುದು.

ಈ ಸಮಾಜದಲ್ಲಿ ಮಹಿಳೆಯರು ಬೇರೆ ಬೇರೆ ಕಾಯಕಗಳಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳು ಬೇರೆ ಬೇರೆಯಾಗಿವೆ. ಕೆಲವು ಮಹಿಳೆಯರು ಕೊಳೆಯನ್ನು ಶುಭ್ರಮಾಡಿ, ಕೆಲವರು ಕಷ್ಟಪಟ್ಟು ಕೂಲಿ, ಜೀತದಾಳಾಗಿ ಕೆಲಸ ಮಾಡುತ್ತಾ ಬದುಕುವ ಶ್ರಮಿಕ ವರ್ಗ ಬೇರೆ. ಯಾವ ಶ್ರಮವೂ ಇಲ್ಲದೆ ಬಡ್ಡಿ ಲಾಭಗಳನ್ನು ಸ್ವೀಕರಿಸುತ್ತಾ ಶ್ರಮ ಜೀವಿಗಳ ಆದಾಯವನ್ನು ಲೂಟಿ ಮಾಡಿ ತಿಂದು ತೇಗುವ ಮಹಿಳಾ ವರ್ಗ ಬೇರೆ. ಬದುಕಿದಷ್ಟು ದಿನಗಳು ಅಕ್ಷರ ಜ್ಞಾನವಿಲ್ಲದೆ ಪಶುಗಳ ಸ್ಥಿತಿಯಲ್ಲಿ ಬದುಕುವ ಶ್ರಮಿಕ ವರ್ಗದ ಸ್ತ್ರೀಯರ ಸಮಸ್ಯೆಗಳು ಬೇರೆ. ಮಹಿಳೆಯರನ್ನು ಮಂತ್ರಿಗಳನ್ನಾಗಿ, ಮುಖ್ಯಮಂತ್ರಿಗಳನ್ನಾಗಿ, ಪ್ರಧಾನ ಮಂತ್ರಿಗಳನ್ನಾಗಿ ಮಾಡುವುದೇ ಮಹಿಳಾ ಉದ್ಧಾರ ಎಂದು ನಂಬಿದರೆ ಅದು ಸತ್ಯಕ್ಕೆ ದೂರವಾದದ್ದು. ರಾಜಕೀಯದಲ್ಲಿ ಇರುವ ಮಹಿಳೆಯರ ಸಮಸ್ಯೆ, ಧನಿಕ ವರ್ಗ ಮಹಿಳೆಯರಿಗೆ ಇರುವದಿಲ್ಲ. ಬಿನ್ನ ವರ್ಗಗಳಲ್ಲಿ ಬಿನ್ನ ಜೀವನ ಶೈಲಿಯಲ್ಲಿರುವ ಸಮಸ್ತ ಮಹಿಳೆಯರನ್ನೆಲ್ಲರನ್ನೂ ಒಂದೇ ಚೌಕಟ್ಟಿನೊಳಕ್ಕೆ ತಂದು ನಡೆಸುವ ಮಹಿಳಾ ದಿನೋತ್ಸವಗಳು ಶ್ರಮಿಕ ಮಹಿಳೆಯರ ಪಾಲಿನ ಒಂದು ಬ್ರಹ್ಮಾಂಡ.

ಡಾ|| ಎಸ್. ರಾಧಾಕೃಷ್ಣನ್ ರವರು ಹೇಳಿದ ಹಾಗೆ “ಎಲ್ಲಿಯವರೆಗೆ ಮಹಿಳೆಯರನ್ನು ಆಳಿನಂತೆ ನಡೆಸಿಕೊಳ್ಳುತ್ತೇವೋ ಅಲ್ಲಿಯವರೆಗೆ ಸಮಾಜದಲ್ಲಿ ದುಸ್ಥಿತಿ ಮುಂದುವರೆಯುತ್ತದೆ. ಒಂದು ಜನಾಂಗ ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಬೇಕಾದರೆ ಆ ಜನಾಂಗ ಸ್ತ್ರೀಯರನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದಾರೆಂಬುದೆ ಎಂದು ಹೆಳಿದ್ದಾರೆ.” ಸ್ವಾಮಿ ವಿವೇಕಾನಂದರು ಅವರ ಮಾತಿನಂತೆ “ಹೆಣ್ಣು ಮಕ್ಕಳು ಸುಶಿಕ್ಷಿತವಾಗಿ ಸಮಾಜದಲ್ಲಿ ಗೌರವ ಸ್ಥಾನ ಪಡೆಯುವುದರ ಮೂಲಕ ಎತ್ತಿ ಬದುಕುವ ಆತ್ಮಾಭಿಮಾನದಿಂದ ಮುನ್ನಡೆಯುವ ಹಕ್ಕು ಅವರಿಗಿದೆ. ಅದನ್ನು ಕಸಿಯುವ ಹಕ್ಕು, ಕಡೆಗಣ ಸುವ ಹಕ್ಕು ಯಾರಿಗೂ ಇಲ್ಲ.”

ಅತ್ತಿಮಬ್ಬೆ, ಸಂಚಿಯ ಹೊನ್ನಮ್ಮ, ರಾಣ  ಚನ್ನಮ್ಮ, ಒನಕೆ ಓಬವ್ವ ಮೊದಲಾದ ಮಹಿಳೆಯರು ದೈರ್ಯ, ಸಾಹಸ, ತ್ಯಾಗದ ಗುಣಗಳು ಮಹಿಳೆಯರ ಮೇಲೆ ಪರಿಣಾಮ ಬೀರುವವು. ಮಹಿಳೆಯೊಬ್ಬಳು ಒಂದು ಮನೆಯನ್ನು ಬೆಳಗುವ ಮಗಳಾಗಿ, ಧರ್ಮಪತ್ನಿಯಾಗಿ, ತಾಯಿಯಾಗಿ ಕಾಣ ಸಿಕೊಳ್ಳುವಳು. ಈ ಕಾರಣದಿಂದಾಗಿ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.”

“ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಯಂತೇ ದೇವತಾ :” ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೊ, ಅಲ್ಲಿ ದೇವತೆಗಳು ನೆಲೆಸುತ್ತಾರೆ. ಸ್ತ್ರೀಗೌರವಕ್ಕೆ ಅರ್ಹಳಾದವಳು ಆದರೆ ಇಂದು ಮಹಿಳೆಯರು ವಿವಿಧ ಸಮಸ್ಯೆಗಳನ್ನು ದೌರ್ಜನ್ಯಗಳು, ದಬ್ಬಾಳಿಕೆಗಳು, ಅತ್ಯಾಚಾರದಂತಹ ಪ್ರಕರಣಗಳು ಮಹಿಳೆಯರ ಧೈರ್ಯ ಕಡಿಮೆಯಾಗುವಂತೆ ಮಾಡಿವೆ. ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಮ್ಮ ದೇಶದಲ್ಲಿ ಕಾನೂನುಗಳು ಬಿಗಿಯಾಗಿರಬೇಕು. ಆಡಳಿತಗಾರರ ಬದ್ದತೆ ಹಾಗೂ ಪ್ರಾಮಾಣ ಕತೆಯಿಂದ ಕೆಲಸ ಮಾಡಬೇಕು. ತಪ್ಪು ಮಾಡಿದವರು ಯಾರೇ ಇರಲಿ, ಅವರನ್ನು ರಕ್ಷಿಸಬಾರದು. ಮನುಷ್ಯರು ಮಾನವೀಯತೆ ಮೈಗೂಡಿಸಿಕೊಳ್ಳಬೇಕು. ಪುರುಷನಾದವನು ಸ್ತ್ರೀಯರಲ್ಲಿ ತಾಯಿ, ಅಕ್ಕ, ತಂಗಿಯನ್ನು ಕಾಣಬೇಕು. ಅಂತಹ ಮನೋಧರ್ಮ ಮನದಲ್ಲಿ ಮಾಡಿಕೊಳ್ಳಬೇಕು.

ಮಹಿಳಾ ದಿನೋತ್ಸವ ಆಚರಣೆಗಳೆನ್ನುವುದು, ಶ್ರಮ ಜೀವನದ ಮಹಿಳೆಯರು, ಅತ್ಯಾಚಾರಕ್ಕೊಳಗಾದ, ಲೈಂಗಿಕ ಕಿರುಕುಳಕ್ಕೆ ಹಾಗೂ ಹಿಂಸೆಗೆ ಒಳಗಾದ ಮಹಿಳೆಯರಲ್ಲಿ ಚೈತನ್ಯವನ್ನುಂಟು ಮಾಡುವ ಪ್ರಯತ್ನಗಳನ್ನೇದಾದರೂ ಮಾಡಿದ್ದಾದರೆ ಮಹಿಳಾ ದಿನೋತ್ಸವ ಆಚರಣೆಗಳು ಉಪಯುಕ್ತ ಆಚರಣೆಗಳಾಗುತ್ತವೆ.

ವಿಶೇಷ ಲೇಖನ: ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಞಣ ಮಹಾವಿದ್ಯಾಲಯ ಬಾಡ ಕಾರವಾರ
ಮೋ ನಂ. : 9632332185
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...