ಕಾರವಾರ: ಉ.ಕ ಜಿಲ್ಲೆಯ ಹತ್ತುಕಡೆ ಉಚಿತ ವೈ ಫೈ ಸೇವೆ ಸಲ್ಲಿಸಲು ಬಿಎಸ್ಸೆನ್ನೆಲ್ ಸಿದ್ದತೆ

Source: so english | By Arshad Koppa | Published on 29th August 2016, 8:09 AM | Coastal News | Don't Miss |

ಕಾರವಾರ, ಆ ೨೮: ಕಾರವಾರ ಮತ್ತು ಉ.ಕ ಜಿಲ್ಲೆಯ ಒಟ್ಟು ಹತ್ತು ಜನನಿಬಿಡ ಸ್ಥಳಗಳಲ್ಲಿ ಉಚಿತ ವೈ ಫೈ ಸೇವೆಯನ್ನು ಒದಗಿಸಲು ಬಿಎಸ್ಸೆನ್ನೆಲ್ ಸಿದ್ದತೆ ನಡೆಸುತ್ತಿದೆ ಎಂದು ಮುಖ್ಯ ನಿರ್ದೇಶಕರಾದ ಜಿ.ಆರ್. ರವಿಯವರು ತಿಳಿಸಿದ್ದಾರೆ. 

ರಬೀಂದ್ರನಾಥ ಟಾಗೋರ್ ಬೀಚ್, ಕಾರವಾರ ಮೆಡಿಕಲ್ ಕಾಲೇಜು, ಗ್ರೀನ್ ಸ್ಟ್ರೀಟ್, ಭಟ್ಕಳ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್, ಮುರ್ಡೇಶ್ವರ ಬೀಚ್, ಸಿದ್ದಾಪುರರ ಕಾನಗೋಡು, ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್, ಶಿರಸಿಯ ಎಪಿಎಂಸಿ ಯಾರ್ಡ್, ದಾಂಡೇಲಿಯ ಗಣೇಶಗುಡಿಯಲ್ಲಿರುವ ವುಡ್ ರಿಸಾರ್ಟ್ ಈ ಹತ್ತು ಸ್ಥಳಗಳಾಗಿವೆ. ಈ ಸೇವೆಯನ್ನು ಸೆಪ್ಟೆಂಬರ್ ನಿಂದ ಪ್ರಾರಂಭಿಸಲಾಗುವುದು. 

ಹೊಸ ಯೋಜನೆಯೊಂದು ಆಗಸ್ಟ್ ಹದಿನೈದರಂದು ಚಾಲನೆ ಪಡೆದಿದ್ದು ಈ ಪ್ರಕಾರ ಪ್ರತಿ ಭಾನುವಾರ ಬಿಎಸ್ಸೆನ್ನೆಲ್ ನ ಸ್ಥಿರ ದೂರವಾಣಿಯಿಂದ ದೇಶದಾದ್ಯಂತ ಎಲ್ಲೆಡೆ ಮತ್ತು ಇತರ ದಿನಗಳಲ್ಲಿ ರಾತ್ರಿ ಒಂಭತ್ತರಿಂದ ಬೆಳಿಗ್ಗೆ ಏಳರವರೆಗೆ ಉಚಿತ ಕರೆಗಳನ್ನು ಯಾವುದೇ ಮೊಬೈಲ್ ಅಥವಾ ಸ್ಥಿರ ದೂರವಾಣಿಗೆ ಕರೆ ಮಾಡಬಹುದು. ಇದಕ್ಕೆ ಮೊದಲ ಆರು ತಿಂಗಳುಗಳಿಗೆ ಮಾಸಿಕ ಕೇವಲ 49 ಪಾವತಿಸಿದರೆ ಸಾಕು. ಬಳಿಕ ಸಾಮಾನ್ಯ ದರಗಳು ಮುಂದುವರೆಯುತ್ತವೆ. 

ಹೊಸ ವೈ ಫೈ ಸೇವೆಗಾಗಿ ಒಟ್ಟು 226 ಕಡೆ ಟವರ್ ಗಳನ್ನು ನಿರ್ಮಿಸಲಾಗುತ್ತಿದ್ದು  ಕೆಲವೆಡೆ ಮಾನವ ಸಂಪನ್ಮೂಲ ಕೊರತೆಯಿಂದ ಕೆಲಸದ ಪ್ರಗತಿ ನಿಧಾನವಾಗಿದೆ ಎಂದು ತಿಳಿಸಿದರು. 

ಉಪನಿರ್ದೇಶಕ ವಿ ಎನ್ ಭಟ್, ಉಪ ಜನರಲ್ ಮ್ಯಾನೇಜರ್ ನಜೀರ್ ಶೇಖ್, ಜಿಜಿ ಭಟ್ ಸಹಿತ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...