ಭೂಮಿ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ-(ಅರ್ಥ ಡೇ - ಎಪ್ರಿಲ್ -22 )

Source: jagadish | By Arshad Koppa | Published on 20th April 2017, 8:34 AM | Guest Editorial |

ವಾಸಕ್ಕಿರುವದೊಂದೇ ಭೂಮಿ, ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ನಮ್ಮ ವಾಸಕ್ಕೆ ಸುಂದರವಾದ ಭೂಮಿ ಇದೆ. ಆದರೆ ಅದನ್ನು ನಾವು ಎಷ್ಟರ ಮಟ್ಟಿಗೆ ಇಟ್ಟುಕೊಂಡಿದ್ದೇವೆ?


ಹಸಿರು-ನೀಲ ಮಿತ್ರಿತ ಗೋಲ, ಹೊಳೆಯುವ ಧವಳ ವರ್ಣದ ಧ್ರುವಟೊಪ್ಪಿಗೆಗಳು, ಇದು ವ್ಯೂಮಯಾತ್ರಿಗೆ ಕಾಣುವ ಭೂಮಿಯ ನೋಟ. 
    
    ಸೌರವ್ಯೂಹದಲ್ಲಿ ಭೂಮಿ ಒಂದು ಸುಂದರ ಅಸದೃಶ ಅಪ್ರತಿಮ ಗ್ರಹ. ಸಸ್ಯಗಳು, ಪ್ರಾಣ ಗಳು ಮತ್ತು ಮಾನವ ಬೀಡು ಎಂಬ ಹೆಗ್ಗಳಿಕೆ ಇದಕ್ಕೆ ಭೂಮಿಯು ಸೂರ್ಯನಿಂದ 15 ಕೋಟಿ ಕಿಲೋಮೀಟರ್ ದೂರವಿರುವುದು ಭೂಮಿಯ ವಾತಾವರಣ, ಉಷ್ಣತೆಗಳು ಜೀವ ಸಮೃದ್ಧಿಗೆ ಅನುಕೂಲವಾಗಿದೆ. ಭೂಮಿ ಸುಮಾರು 500 ಕೋಟಿ ವರ್ಷಗಳಷ್ಟು ಹಳೆಯದೆಂದು ಅಂದಾಜು ಮಾಡಲಾಗಿದೆ. ಭೂಮಿಯ ಒಟ್ಟು ವಿಸ್ತೀರ್ಣ 51 ಕೋಟಿ ಚ.ಕಿ.ಮೀಗಳು ಭೂಮಿಯಲ್ಲಿರುವ ಜಲಭಾಗ 36 ಕೋಟಿ ಚ.ಕಿ.ಮೀಗಳು ಭೂಮಿಯ ಸಮಾಭಾಜಕ ವೃತ್ತದ ವ್ಯಾಸ 12,757 ಕಿ. ಮೀಗಳು. ಭೂಮಿ ಸೌರವ್ಯೂಹದಲ್ಲಿ 5 ನೇ ದೊಡ್ಡ ಗ್ರಹ ಹಾಗೂ ಸೂರ್ಯನಿಂದ 3ನೇ ಸ್ಥಾನದಲ್ಲಿರುವ ಗ್ರಹವಾಗಿದೆ. ಭೂಮಿಯ ತನ್ನ ಮೈ ಸುತ್ತಲು ತಿರುವಾಗ ಹಗಲು ರಾತ್ರಿಗಳಾಗುತ್ತವೆ ಭೂಮಿಯು ಸೂರ್ಯನ ಸುತ್ತಲು ಅಂಡಾಕಾರದ ಪಥದ ವಿವಿಧ ಸ್ಥಾನಗಳಲ್ಲಿರುವಾಗ ಉಂಟಾಗುವ ಉಷ್ಣಾಂಶದ ಬದಲಾವಣೆಯನ್ನು ಋತುಗಳು ಎಂದು ಕರೆಯುವರು.

    ಅರಿಸ್ಟಾಟಲನು ಭೂಮಿಯು ಗೋಲಾಕಾರದಲ್ಲಿದೆ ಎಂಬ ಕಲ್ಪನೆಯನ್ನು ಮುಂದಿಟ್ಟಿದ್ದ ಕ್ರಿ ಪೂ 3ನೇ ಶತಮಾನದಲ್ಲಿ ಅಲೆಗ್ಸಾಂಡ್ರಿಯಾದ ಎರಟಾಸ್ತನೀಸ್ ಭೂಮಿಯು ಪೂರ್ಣ ಗೋಲಾಕಾರವಾಗಿಲ್ಲ ಪೇರಲ ಹಣ ್ಣನ ಆಕಾರದಲ್ಲಿದೆ. ಎಂದು ಹೇಳಿದ. 

    ಭೂಗೋಲದಲ್ಲಿ ಸುತ್ತುವರಿದಿರುವುದು ವಾಯುಮಂಡಲ ಸಾಗರ, ಸರೋವರ, ನದಿ, ಕೊಳ, ತೊರೆ, ಚಿಲುಮೆಗಳೆಲ್ಲ ಕೂಡಿ ಆದುದು ಜಲಮಂಡಲ. ಉಳಿದ ಘನ ಭಾಗವೇ ಶಿಲಾಮಂಡಲ. ಭೂಮಿಯ ಮೇಲ್ಮೈ ಶೇಕಡಾ 70 ಭಾಗ ಜಲಬಾಗ ಹಾಗೂ 30 ಭಾಗ ನೆಲಭಾಗ. ಭೂಮಿಯ ಮೇಲೆ ಇರುವ ಎಲ್ಲ ಪರಿಸರದಲ್ಲಿಯೂ ಸಹ ಸಸ್ಯ ಜೀವಿಗಳು ಮತ್ತು ಪ್ರಾಣ ಜೀವಿಗಳು ಜೀವಿಸುತ್ತವೆ.

    ಸುಮಾರು 60 ಕೋಟಿ ವರ್ಷಗಳ ಹಿಂದೆ ಶೈಪಲ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಆಗ ಭೂಮಿಯಲ್ಲಿ ನೆಲಸಿದ ಜೀವಿಗಳು. ಸೌರವ್ಯೂಹದಲ್ಲಿರುವ 8 ಗೃಹಗಳಲ್ಲಿ ಭೂಗ್ರಹದಲ್ಲಿ ಮಾತ್ರ ಸಸ್ಯಜೀವಿಗಳು ಮತ್ತು ಪ್ರಾಣ ೀಜೀವಿಗಳನ್ನು ಕಾಣುತ್ತೇವೆ.

    ಇದು ಕೇವಲ ‘ನಮ್ಮ ಭೂಮಿ” ಅಷ್ಟೇ ಅಲ್ಲ. ನಮಗಿಂತಲೂ ಹಿಂದೆ ಕೋಟ್ಯಾಂತರ ವರ್ಷಗಳಷ್ಟು ಕಾಲ ಜೀವಿಸಿದ ಎಲ್ಲ ಜೀವಿಗಳಿಗೂ ಈ ಭೂಮಿ ಸೇರಿತ್ತು ಹಾಗೆಯೇ ಮುಂದೆಯೂ ಕೋಟ್ಯಾಂತರ ವರ್ಷಗಳ ಕಾಲ ಜೀವಿಗಳು ನಮ್ಮ ಮುಂದಿನ ಪೀಳಿಗೆಗಳು ಇಲ್ಲಿ ನೆಮ್ಮದಿಯಾಗಿ ವಾಸಿಸಬೇಕು. ಈ ಭೂಮಿಯು ಅವುಗಳಿಗೂ ಸೇರಿದ್ದು. 

    ಮಾನವನು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಈಗಾಗಲೇ ಭೂಮಿಯ ವಾತಾವರಣ ಪರಿಸರವನ್ನೆಲ ಹಾಳು ಮಾಡಿಬಿಟ್ಟರೆ, ಮುಂದಿನವರು ಜೀವಿಸುವುದು ಹೇಗೆ? ಇಲ್ಲಿ ನಾವು ಯೋಚಿಸಬೇಕಾದ ವಿಷಯವಿದೆ. ಅಲ್ಲವೇ? ನಮ್ಮ ಭೂಮಿ ಎಲ್ಲ ಕಾಲಕ್ಕೂ ವಾಸಕ್ಕೆ ಯೋಗ್ಯ ಆಗಿರಬೇಕು. ಇದನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕು. ನಮ್ಮ ಹಿಂದಿನವರು ಇದನ್ನು ಕಾಪಾಡಿಕೊಂಡು ನಮಗೆ ಕೊಟ್ಟ ಹಾಗೆ ನಾವು ಮುಂದಿನವರೆಗೆ ಕೊಡಬೇಕು.

    ನಮ್ಮ ಪಾಲಿಗೆ ಇರುವುದು ಒಂದೇ ಭೂಮಿ ಒಂದು ವೇಳೆ ವಾಸಕ್ಕೆ ಯೋಗ್ಯವಾದ ಇನ್ನೂಂದು ಗ್ರಹ ಸಿಕ್ಕಿತು. ಎಂದುಕೊಳ್ಳಿ ಅಲ್ಲಿಗೆ ಮನುಷ್ಯರು ಹೋಗಿ ನೆಲೆಸುವ ತಂತ್ರಜ್ಞಾನ ಸಕಲ ಸಾಧ್ಯತೆಗಳು ಇವೆ ಎಂದು ಉಹಿಸಿಕೊಳ್ಳಿ. ಆದರೂ ನಾವು ಹುಟ್ಟಿದ ಗ್ರಹವನ್ನು ಹಾಳು ಮಾಡಿ ಇನ್ನೂಂದು ಗ್ರಹಕ್ಕೆ ಹಾರಿಹೋಗುವುದು. ಸರಿಯೇ? ಆ ಗ್ರಹವನ್ನಾದರೂ ಮನುಷ್ಯರು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ ಎನ್ನಲಾದಿತೇ?  

    ಇಂತಹ ವಿಷಯಗಳ ಬಗ್ಗೆ ಎಲ್ಲರಲ್ಲಿಯೂ ಅರಿವು ಮೂಡಿಸುವ ಉದ್ಧೇಶದಿಂದ “United States Wisconsin Senatro ಸಂಸ್ಥೆಯ Gaylord Nelson  ರು 1970 ರಿಂದ ಪ್ರತಿ ವರ್ಷ ಏಪ್ರಿಲ್ 22 ರಂದು “ಭೂ ದಿವಸ” (ಅರ್ಥ ಡೇ) ಆಚರಿಸಲು ನಿರ್ಧರಿಸಿದರು. ಒಟ್ಟು 192 ದೇಶಗಳು ಭೂ ದಿನಾಚರಣೆಯನ್ನು ಆಚರಿಸುತ್ತವೆ. 2017 ವರ್ಷದ ಭೂ ದಿನದ ಉದ್ದೇಶ “ “ Environmental and Climate Literacy” ಈ ವರ್ಷ ಭೂ ದಿನಾಚರಣೆಯ ಉದ್ದೇಶ “ಪರಿಸರ ಮತ್ತು ಹವಾಮಾನ ಸಾಕ್ಷರತಾ” ಆಗಿದೆ. 
    ಮಾನವನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. “We have met the enemy and he is us”.  ಇದರಿಂದಾಗಿ ಅತಿಯಾದ ಮಳೆ ಅತಿಯಾದ ಬರ, ಸಮುದ್ರ ಮಟ್ಟದಲ್ಲಿ ಏರಿಕೆ, ನದಿ ಪ್ರವಾಹಗಳು, ಒಣಗಿದ ನದಿಗಳು, ಬರಿದಾಗುವ ಕಾಡುಗಳು, ಭೂತಾಪ ಏರಿಕೆ, ಅತಿಯಾದ ಚಳಿ, ಅತಿಯಾದ ಶಾಖ, ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೊಸುವಿಕೆ ಹೆಚ್ಚಳದಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದಾಗಿ ಶಹರಗಳಲ್ಲಿ ಉಸಿರಾಡಲು ಶುದ್ಧವಾದ ಗಾಳಿ ಸಿಗುವುದೇ ಕಷ್ಟವಾಗಿದೆ. “There’s SO much pollution in the air now that if it weren’t for our lungs there’d be no place to put it all”    
ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶ ಮಾಡುತ್ತ ಹೋದರೆ ಒಂದು ದಿನ ಭೂಮಿಯು ಮಂಗಳಗ್ರಹದಂತೆ ಬರಡಾಗಿ ಬಿಡುತ್ತದೆ. 

ಭೂಮಿಯನ್ನು ಸಂರಕ್ಷಣೆ ಮಾಡುವ ವಿಧಾನಗಳು ವಿದ್ಯುತ ಬಳಕೆ ಕಡಿಮೆ ಮಾಡುವುದು, ನೀರು ಪೋಲಾಗದಂತೆ ಮಿತವಾಗಿ ಬಳಸುವುದು, ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಿದೆ. ಅರಣ್ಯ ನಾಶ ಮಾಡಬಾರದು. ಹಸಿರು ಸಸ್ಯ ಬೆಳೆಸುವುದು, ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ವಾಡಬೇಕು. We do not inherit the earth from our ancestors,we borrow it from our children”

“ಭೂ ದಿವಸ” ದಂದು ನಾವು ಪ್ರತಿಜ್ಞೆಗೈಯೋಣ : “ನಾವು ಇಂದಿನಿಂದ ಭೂ ಮಾಲಿನ್ಯ ಮಾಡುವುದನ್ನು ನಿಲ್ಲಿಸುತ್ತೇವೆ. ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟರೋ ಹಾಗೇ ನಾವು ಮುಂದಿನ ಪೀಳಿಗೆಗ ಭೂಮಿಯನ್ನು ಕೊಡುತ್ತೇವೆ”.


ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊಬೈಲ್ ನಂ: 9632332185


    

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...