ಕಾರವಾರ: ಕಡಲತೀರದಲ್ಲಿ ಡಾಲ್ಫಿನ್ ಬೋಟಿಂಗ್ ರೈಡಿಂಗ್ ಆರಂಭ

Source: varthabhavan | By Arshad Koppa | Published on 28th December 2016, 8:52 PM | Coastal News | Tour |

ಕಾರವಾರ ಡಿಸೆಂಬರ್ 20 : ಕಾರವಾರದ ಕೂರ್ಮಗಢ ದ್ವೀಪದ ಸುತ್ತಲೂ ಅಪಾರ ಸಂಖ್ಯೆಯಲ್ಲಿರುವ ಅಪರೂಪದ ಡಾಲ್ಫಿನ್‍ಗಳನ್ನು ಅತ್ಯಂತ ಸಮೀಪದಿಂದ ನೋಡುವ ಅವಕಾಶ ಇದೀಗ ಪ್ರವಾಸಿಗರಿಗೆ ಲಭಿಸಿದೆ.


ಕಾರವಾರ ಕಡಲತೀರದಿಂದ ಡಾಲ್ಫಿನ್ ರೈಡ್ ಬೋಟಿಂಗ್ ಸೌಲಭ್ಯವನ್ನು ಬುಧವಾರ ಆರಂಭಿಸಲಾಗಿದ್ದು, ಆರಂಭಿಕ ಹಂತದಲ್ಲಿ ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಬೋಟಿಂಗ್ ಸಮಯ ನಿಗಧಿಪಡಿಸಲಾಗಿದೆ.


`ಗೋವಾ ಕಡಲ ತೀರದಲ್ಲಿ ಡಾಲ್ಫಿನ್ ವೀಕ್ಷಣೆ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಗೋವಾದ ಕಣಕೊಣ ಕಡಲತೀರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡಾಲ್ಫಿನ್‍ಗಳು ಕಾರವಾರ ಕೂರ್ಮಗಢ ಸುತ್ತಮುತ್ತ ಕಾಣಸಿಗುತ್ತವೆ. ಡಾಲ್ಫಿನ್ ವೀಕ್ಷಣೆ ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರಚಲಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕಾರವಾರದಲ್ಲಿ ಡಾಲ್ಫಿನ್ ವೀಕ್ಷಣೆಗೆ ಬೋಟಿಂಗ್ ಆರಂಭಿಸಲಾಗಿದೆ’ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದ್ದಾರೆ.

 


ಸುಮಾರು ಒಂದು ತಾಸುಗಳ ಕಾಲದ ಬೋಟ್ ಯಾನ ಇದಾಗಿದೆ. ಕೂರ್ಮಗಢ ದ್ವೀಪ, ಕಾಳಿ ಸೇತುವೆಯ ಮನಮೋಹಕ ದೃಶ್ಯ, ದೂರದಿಂದ ಕಾಣುವ ಲೈಟ್‍ಹೌಸ್, ಕಾರವಾರ ನಗರವನ್ನು ಆವರಿಸಿರುವ ಗುಡ್ಡ ಬೆಟ್ಟಗಳು, ವಿಶಾಲ ನೀಲ ಸಮುದ್ರ, ಕೆಲವೆಡೆ ಅಪ್ಪಳಿಸುವ ಅಲೆಗಳು, ನೀರಿನ ಮೇಲೆ ಫಳಫಳನೇ ಹೊಳೆಯುವ ಸೂರ್ಯ ಕಿರಣಗಳು, ನೀರಿನಲ್ಲಿ ಆಗಿಂದಾಗ್ಗೆ ಹಾರುವ ಸಣ್ಣಪುಟ್ಟ ಮೀನುಗಳು, ಮೀನುಗಳನ್ನು ಬೇಟೆಯಾಡುವ ಕಡಲಹಕ್ಕಿಗಳು ಬೋಟ್‍ಯಾನಿಗಳನ್ನು ಮುದಗೊಳಿಸುತ್ತವೆ. 
ಎಲ್ಲಕ್ಕಿಂತ ಹೆಚ್ಚಾಗಿ ಕ್ಷಣಾರ್ಧದಲ್ಲಿ ನೀರಿನಿಂದ ಮೇಲೆದ್ದು ಹಾರಿ ಕಣ್ಣುಮುಚ್ಚಾಲೆಯಾಡುವ ಮುದ್ದುಮೊಗದ ಡಾಲ್ಫಿನ್‍ಗಳು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತವೆ. ಈ ಭಾಗದಲ್ಲಿ ಹಲವಾರು ಡಾಲ್ಫಿನ್‍ಗಳಿದ್ದು ಕನಿಷ್ಟ ಐದಾರು ಡಾಲ್ಫಿನ್‍ಗಳು ಪ್ರವಾಸಿಗರ ನೋಟಕ್ಕೆ ಲಭಿಸುತ್ತವೆ.


`ಪ್ರಸ್ತುತ ಬೆಳಿಗ್ಗೆ 7ಗಂಟೆಗೆ ಮಾತ್ರ ಡಾಲ್ಫಿನ್ ವೀಕ್ಷಣೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಬೇಡಿಕೆಯನ್ನು ಗಮನಿಸಿ ಬೋಟಿಂಗ್ ಹೆಚ್ಚಳ ಮಾಡಲಾಗುವುದು. ಪ್ರವಾಸಿಗರಿಗಾಗಿ ಈಗಾಗಲೇ ಕಡಲತೀರದಲ್ಲಿ ವಿವಿಧ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಕಾರವಾರ ಕಡಲತಡಿಯ ಸುತ್ತಮುತ್ತಲಿನ ದ್ವೀಪಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ವೀಕ್ಷಣೆಗೆ ಸಹ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು’ ಎಂದು ಜಲಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿರುವ ಗಣಪತಿ ಉಳ್ವೇಕರ್ ಹೇಳಿದ್ದಾರೆ.
`ಪ್ರವಾಸಿಗರನ್ನು ಆಕರ್ಷಿಸಲು ಹಲವಾರು ಜಲಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಠಾಗೋರ್ ಕಡಲತೀರದಲ್ಲಿ ವಿವಿಧ ರೀತಿಯ ಬೋಟಿಂಗ್ ಚಟುವಟಿಕೆ ಆರಂಭಿಸಲಾಗಿದೆ. ವ್ಯವಸ್ಥಿತವಾದ ಫುಡ್‍ಕೋರ್ಟ್ ನಿರ್ಮಿಸಲಾಗಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ. ಕೋಡಿಭಾಗ್ ಕಾಳಿ ತೀರದಲ್ಲಿ ಸಹ ಪ್ರವಾಸಿಗರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲು ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ಪ್ರಮುಖ ಆಕರ್ಷಣೆ ಕೇಂದ್ರವಾಗಲಿದೆ’ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಎಂ.ಎಲ್.ದೊಡ್ಮನಿ ಅವರು ಡಾಲ್ಫಿನ್ ರೈಡ್ ಬೋಟಿಂಗ್‍ಗೆ ಚಾಲನೆ ನೀಡಿ ಶುಭ ಹಾರೈಸಿದರು.

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...

ಕೋಲಾರ:ವಿವಿಧ ಸಂಘಟನೆಗಳ ವತಿಯಿಂದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ

 ಪ್ರತಿ ಹಳ್ಳಿಗಳಲ್ಲಿರುವ ಕಲಾವಿದರುಗಳನ್ನು ಇಲಾಖೆ ಮತ್ತು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ - ಜಿ. ಮುನಿಕೃಷ್ಣ