ಕಾರವಾರ: ದೇವರಾಜ ಅರಸು ಹಿಂದುಳಿದವರನ್ನು ಬೆಳಕಿನಡೆಗೆ ತಂದವರು : ಲಿಲಾಬಾಯಿ ಠಾಣೆಕರ

Source: varthabhavan | By Arshad Koppa | Published on 21st August 2017, 8:09 AM | Coastal News | Special Report |

ಕಾರವಾರ ಆಗಸ್ಟ್ 20 : ಮಾಜಿ ಮುಖ್ಯಮಂತ್ರಿ ದಿವಂಗತ್ ಡಿ.ದೇವರಾಜ ಅರಸು ಅವರು ಬಡವರಿಗೆ ವಿದ್ಯುತ್ ಸಂಪರ್ಕ,  ಜೀತ ವಿಮುಕ್ತಿಗಳಂತಹ ಸಮಾಜಮುಖಿ ಯೋಜನೆಗಳ ಮೂಲಕ ಹಿಂದುಳಿದವರನ್ನು ಕತ್ತಲೆಯಿಂದ ಬೆಳಕಿನಡೆಗೆ ತಂದವರು ಎಂದು ನಗರಸಭೆ ಉಪಾಧ್ಯಕೆ ಲಿಲಾಬಾಯಿ ರಾಣೆಕರ ಅವರು ತಿಳಿಸಿದರು.
ಅವರು ಭಾನುವಾರ ದೇವರಾಜ ಅರಸು 102ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣ ಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಹರಿಕಾರರಾಗಿದ್ದ ಅರಸು ಅವರು ತಳೆದ ದಿಟ್ಟ ನಿಲುವುಗಳು ಭವಿಷ್ಯದ ಜನಾಂಗವನ್ನೇ ಬದಲಾಯಿಸಿದವು.  ದುರ್ಬಲ ವರ್ಗದವರಲ್ಲಿ ಸ್ವಾವಲಂಬನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಅರಸು ಅವರು ಮಹಾನ್ ಪುರುಷರು.  ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಿ ಸಾಮಾಜಿಕ ಸಮಾನತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. ಇಂತಹ ದೀಮಂತ ನಾಯಕನ್ನು ನೆನೆಸಿ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆಯುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.


ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ. ಮನೋಜ ವಿಶೇಷ ಉಪನ್ಯಾಸ ನೀಡಿ ಅರಸು ಅವರು ಎಲ್ಲಿಯವರೆಗೆ ಸಮಾನತೆ ಸಾಧಿಸುವದಿಲ್ಲವೋ ಅಲ್ಲಿಯವರೆಗೆ ಸುಧಾರಣೆ ಸಾದ್ಯವಿಲ್ಲ ಎಂದು ತಿಳಿದವರಾಗಿದ್ದರು, ಅಧಿಕಾರದೊಂದಿಗೆ ಮಾನವಿಯತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಮೈಗೂಡಿಸಿಕೊಂಡವರಾಗಿದ್ದರು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ನೀಡಿ ಜೀತ ವಿಮುಕ್ತಿಯನ್ನು ಜಾರಿಗೆ ತಂದರು. ಶೋಷಿತ ಜನಾಂಗದಲ್ಲಿ ಸ್ವಾಭಿಮಾನ ಮೂಡಿಸಿದರು. ಕೃಷಿ ಕಾರ್ಮಿಕರಿಗೆ ಕನಿಷ್ಟ ಕೂಲಿಯನ್ನು ನಿಗದಿಪಡಿಸಿ ಅವರಲ್ಲಿ ಆರ್ಥಿಕ ಚೈತನ್ಯ ತುಂಬಿದರು. ಭೂಸುಧಾರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ದುರ್ಬಲ ವರ್ಗದವರಲ್ಲಿ ಆತ್ಮಾಭಿಮಾನ ಮೂಡಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಮಾಡಿದ ಕಾರ್ಯಗಳು ತಳಮಟ್ಟದವರು ಮೇಲೆಳಲು ಸಹಕಾರಿಯಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಎಸ್.ಎಸ್.ನಕುಲ್ ಅವರು ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ನಿರ್ಮಾಣ ಅರಸು ಅವರ ಕೊಡುಗೆ. ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ ಮತ್ತು  ವಸತಿನಿಲಯಗಳ ಸೌಲಭ್ಯಗಳನ್ನು ಪಡೆದುಕೊಂಡು ನಿಷ್ಠೆಯಿಂದ ಓದಿ ಸಮಗ್ರ ವ್ಯಕ್ತಿತ್ವವನ್ನು ಬೆಳಸಿಕೊಂಡು ಒಳ್ಳೆಯ ಉದ್ಯೋಗಗಳನ್ನು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. 
 ಪ್ರತಿಭಾ ಪುರಸ್ಕಾರ : 2016-17ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ರ್ಯಾರ್ಥಿನಿಲಯಗಳಲ್ಲಿದ್ದು ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಯಿತು. ಎಸ್.ಎಸ್.ಎಲ್.ಸಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಶಿರಸಿ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯದ ಪ್ರಸನ್ನ ಗಣಪತಿ ನಾಯ್ಕ, ದ್ವೀತಿಯ: ಯಲ್ಲಾಪುರ ಮಂಚಿಕೇರಿ ಮೆ.ಪೂ.ಬಾಲಕರ ನಿಲಯದ ಅರುಣಕುಮಾರ ವಾಲಿಕರ, ತೃತಿಯ: ಶಿರಸಿ ಸಾಲ್ಕಣ  ಮೆ.ಪೂ.ಬಾಲಕರ ವಸತಿ ನಿಲಯದ ಚಂದ್ರಶೇಖರ ಗೌಡ, ಬಾಲಕಿಯರ ವಿಭಾಗದಲ್ಲಿ ಪ್ರಥಮ : ಸುಶೀಲಾ ಆರ್. ಪಟಗಾರ ಕುಮಟಾ, ದ್ವೀತಿಯ ಗೀತಾಂಜಲಿ ಎಸ್.ಪೂಜಾರಿ ಮುಂಡಗೋಡ, ತೃತಿಯ: ಸಹನಾ ಪಾಟೀಲ ಮುಂಡಗೋಡ, ಪಿ.ಯು.ಸಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಸಂತೋಷ ಎಸ್.ಲಮಬೋರೆ ಕಾರವಾರ, ದ್ವೀತಿಯ ಚಿದಾನಂದ ಭಿಡಕರ ದಾಂಡೇಲಿ, ತೃತಿಯ ಗಂಗಾರಾಮ ಕರಾರೆ ಕಾರವಾರ, ಬಾಲಕಿಯರ ವಿಭಾಗದಲ್ಲಿ, ಪ್ರಥಮ ಸ್ಥಾನ ರನ್ಯಾ ರಾಮಚಂದ್ರ ನಾಯ್ಕ ಹೊನ್ನಾವರ, ದ್ವೀತಿಯ ಪವಿತ್ರಾ ಎಂ.ನಾಯ್ಕ ಶಿರಸಿ, ತೃತಿಯ ಯಶೋದ ಆರ್. ಮೋಗೇರ ಕುಮಟಾ   
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಪೋಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ, ಪ್ರೋಬೇಶನರಿ ಐ.ಎ.ಎಸ್. ಅಧಿಕಾರಿ ಡಾ.ಕೆ. ಆನಂದ, ಎ.ಸಿ. ಶಿವಾನಂದ ಕರಾಳೆ,ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ ಬಡಿಗೇರ ವೇಧಿಕೆ ಮೇಲೆ ಉಪಸ್ಥಿತರಿದ್ದರು. 
 
ಸೆ.1 ರೊಳಗೆ ಸಹಕಾರ ಸಂಘಗಳ ಲೆಕ್ಕಪರಿಶೋದನೆ 
ಕಾರವಾರ ಆಗಸ್ಟ 20 : ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು 2016-17ನೇ ಸಾಲಿನ ಲೆಕ್ಕಪರಿಶೋದನೆಯನ್ನು ಕಡ್ಡಾಯವಾಗಿ ಲೆಕ್ಕಪರಿಶೋಧಕರಿಂದ ನಿರ್ವಹಿಸಿಕೊಂಡು ಲೆಕ್ಕಪರಿಶೋದನಾ ವರದಿಯನ್ನು ಸೆಪ್ಟಂಬರ 1 ರೊಳಗಾಗಿ ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋದನಾ ಇಲಾಖೆ, ದತ್ತಾತ್ರೇಯ ಕಾಂಪ್ಲೆಕ್ಸ, ಸಾಯಿಮಂದಿರ ರಸ್ತೆ ಕಾರವಾರ ಇವರಿಗೆ ಸಲ್ಲಿಸುವದರ ಜೋತೆಗೆ ಸಕ್ಷಮ ಪ್ರಾಧಿಕಾರಕ್ಕೂ  ಸಲ್ಲಿಸಬೇಕೆಂದು ಉ.ಕ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋದನೆ ಉಪನಿರ್ದೇಶಕರು ತಿಳಿಸಿದ್ದಾರೆ. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...