ಕಾರವಾರ:ರಕ್ತದಾನ ಶಿಬಿರಗಳಿಂದ ವ್ಯಕ್ತಿಗೆ ಮರುಜೀವ ಸಿಗುತ್ತದೆ-ವೈ.ಸದಾಶಿವ

Source: so english | By Arshad Koppa | Published on 10th October 2017, 8:34 AM | Coastal News | Special Report |

ಕಾರವಾರ: ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನಕ್ಕೆ ಮುಂದೆ ಬರಬೇಕು. ಇದರಿಂದ ಅನೇಕ ಜೀವಗಳು ಉಳಿಯುತ್ತವೆ. ನಿಯಮಾನುಸಾರ ರಕ್ತದಾನ ಮಾಡುವುದರಿಂದ ರಕ್ತದಾನಿಗಳು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಹಾಗೂ ಯುವಕ-ಯುವತಿಯರು ಸ್ವಯಂ ಪ್ರೇರಿತವಾಗಿ ಇಂತಹ ಶಿಬಿರಗಳಲ್ಲಿ ರಕ್ತದಾನಕ್ಕೆ ಮುಂದೆ ಬರಬೇಕು. ರಕ್ತದಾನ ಶಿಬಿರಗಳಿಂದ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗೆ ಮರುಜೀವ ಸಿಗುತ್ತದೆ. ಎಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಾದ ವೈ.ಸದಾಶಿವರವರು ಹೇಳಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ, ಶ್ರೀ ವಿಷ್ಣು ಸಮಾಜ ಸೇವಾ ಸಂಘ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರರವರು ‘ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ’ಯ ನಿಮಿತ್ತ ಜಿಲ್ಲಾ ಆಸ್ಪತ್ರೆ ಯವರ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಉದ್ಘಾಟಕರಾಗಿ ಆಗಮಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  


  ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಡಿ.ಎ.ದ ಮಾಜಿ ಚೇರ್‍ಮೆನ್ ಹಾಗೂ ರೆಡ್‍ಕ್ರಾಸ್‍ನ ಮಾಜಿ ಕಾರ್ಯದರ್ಶಿಗಳಾದ ಕೆ.ಶಂಬು ಶೆಟ್ಟಿರವರು ಮಾತನಾಡಿ ರಕ್ತದಾನ ಮಾಡುವುದು ಒಂದು ಉತ್ತಮವಾದ ಕಾರ್ಯ. ಇಂತಹ ಕಾರ್ಯಕ್ಕೆ ಜನರು ಸದಾ ಮುಂದೆ ಬರಬೇಕಾಗಿದೆ. ಶಿಬಿರದಲ್ಲಿ ಸಂಗ್ರಹಿಸಿಟ್ಟ ರಕ್ತವು ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ನೀಡಲು ಸಹಾಯಕವಾಗುತ್ತದೆ. ಆದ್ದರಿಂದ ರಕ್ತದಾನ ಮಾಡಿ ಜೀವದಾನ ನೀಡಿ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಕ್ತದಾನಿಗಳೂ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರೂ ಆದ ನಜೀರ್ ಅಹಮದ್ ಯು.ಶೇಖ್‍ರವರು ಈ ವರ್ಷದ ಘೋಷವಾಕ್ಯದಂತೆ ರಕ್ತದಾನ ಮಾಡಿ ನೋಡಿ ಖುಷಿಯ ಅನುಭವ ಪಡೆಯಿರಿ ಎಂಬುದು ನಿಜವಾಗಿಯೂ ಸತ್ಯವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿ ಉಪಸ್ಥಿತರಿದ್ದ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ವಿಶ್ವನಾಥ ರೆಡ್ಡಿ ಯವರು ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು. ಪ್ರಾರಂಭದಲ್ಲಿ ರೆಡ್‍ಕ್ರಾಸ್‍ನ ಸದಸ್ಯೆ ಫೈರೋಜಾ ಬೇಗಂ ಶೇಖ್ ರವರು ಪ್ರಾಸ್ಥವಿಕಮಾತನಾಡಿ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.  
  ಇದೇ ಸಂದರ್ಭದಲ್ಲಿ ರಮೇಶ್ ಎಲ್.ಹುಲಸ್ವಾರ್, ಮುಖೇಶ್ ಭಾಟಿ, ಪ್ರತೀಕಾ ಪಾಂಡುರಂಗ ಹರಿಕಂತ್ರ, ಭಾವೇಶ ಪಟೇಲ್, ಹರೀಶ್ ಕುಮಾರ್ ಸೇನ್, ಸಾವಂತ ಪಟೇಲ್, ರಮೇಶ್ ಪಟೇಲ್, ಜೈಸಾರಾಮ್ ಕಂಗಾರ್‍ಜಿ, ಪ್ರದೀಪ್ ಯಾದವ್ ರವರು ಕ್ರಮವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ರಕ್ತದಾನದ ಸಂದೇಶವನ್ನು ಸಾರುವ ಟಿ-ಶರ್ಟಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಝಾದ್ ಯುಥ್ ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್, ಕೋಶಾಧ್ಯಕ್ಷ ಕರಣ ಸಿಂಘ್, ಸದಸ್ಯರಾದ ದೇಬಾಶಿಸ್ ಮೊಹಂತಿ, ವಿಷ್ಣು ಸಮಾಜ ಸೇವಾಸಂಘದ ಅಧ್ಯಕ್ಷರಾದ ಖೀಮಾರಾಮ್ ಭಾಟಿಯಾ, ನರಸಿಂಘ್ ಪಟೇಲ್, ಸುರೇಶ ಪಟೇಲ್, ಮಂಗೇಶ ಪಟೇಲ್, ವೈದ್ಯಾಧಿಕಾರಿ ಡಾ|| ರಿಝ್ವಾನಾ ತಬಸ್ಸುಮ್ ಮತ್ತು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...