ಕಾರವಾರ :  ಚಥುಷ್ಟತ ಭೂಸ್ವಾದೀನ ವಿಭಾಗ-ಕಂದಾಯ ನಿರೀಕ್ಷಕರ 3 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ 

Source: varthabhavan | By Arshad Koppa | Published on 13th October 2017, 9:12 AM | Coastal News |

ಕಾರವಾರ ಅಕ್ಟೋಬರ 12 : ಕುಮಟಾ ಉಪ ವಿಭಾಗದ ರಾಷ್ಟ್ರೀಯ ಹೆದ್ದಾರಿ-66(17) ರ ಚಥುಷ್ಟತ ಭೂಸ್ವಾದೀನ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಪ್ರ.ದ.ಸ/ಕಂದಾಯ ನಿರೀಕ್ಷಕರ 3 ಹುದ್ದೆಗಳು ಹಾಗೂ ಭೂ ಮಾಪಕರ 2 ಹುದ್ದೆಗಳಿಗೆ ವಯೋ ನಿವೃತ್ತಿ ಹೊಂದಿದ ದೈಹಿಕ ಹಾಗೂ ಮಾನಸಿಕ ಸಾಮರ್ಥವುಳ್ಳ ಸ್ವ-ಇಚ್ಚೆಯಿಂದ ಕಾರ್ಯ ನಿರ್ವಹಿಸಲು ಒಪ್ಪಿಗೆ ಇರುವ ಕಂದಾಯ ಇಲಾಖೆಯ ನಿವೃತ್ತ ಪ್ರ.ದ.ಸ/ಕಂದಾಯ ನಿರೀಕ್ಷಕ/ಭೂ ಮಾಪಕರನ್ನು ಸಂಚಿತ ವೇತನದ ಅನ್ವಯ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು ಅಕ್ಟೋಬರ 24 ಕೊನೆಯ ದಿನವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಪೂರ್ತಿ ಹೆಸರು, ವಿಳಾಸ, ನಿವೃತ್ತಿ ಹೊಂದಿದ ದಿನಾಂಕ, ನಿವೃತ್ತಿ ಪೂರ್ವ ಹೊಂದಿರುವ ಸೇವಾ ಮಾಹಿತಿ, ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಒಪ್ಪಿಗೆ ಪತ್ರ, ಹಾಗೂ ಸರ್ಕಾರಿ ಸೇವೆ(ಪ್ರ.ದ.ಸ/ಕಂದಾಯ ನಿರೀಕ್ಷಕರ/ಭೂ ಮಾಪಕ)ಯಿಂದ ನಿವೃತ್ತಿ ಹೊಂದಿರುವ ಕುರಿತು ಅಧಿಕೃತ ದಾಖಲೆ ಸಹಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯು ಕೇವಲ ತಾತ್ಕಾಲಿಕವಾಗಿದ್ದು, ಅಭ್ಯರ್ಥಿಯ ಆಯ್ಕೆ ಅಧಿಕಾರವು ಸಕ್ಷಮ ಪ್ರಾಧಿಕಾರಿಗಳು ರಾ.ಹೆ.66(17) ಹಾಗೂ ಕುಮಟಾ ಉಪ ವಿಭಾಗದ ಸಹಾಯಕ ಆಯುಕ್ತರ ವಿವೇಚನಾ ವ್ಯಾಪ್ತಿಗೆ ಒಳಪಟ್ಟಿರುತ್ತದೆ..

ಗ್ರಾಮ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ ಅಕ್ಟೋಬರ  12:  ನಂದೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರವಸೂಲಿಗಾರ ಮತ್ತು ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ನಂದೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕರವಸೂಲಿಗಾರ ಹುದ್ದೆಗೆ ಪಿಯುಸಿ ತೇರ್ಗಡೆಯೊಂದಿಗೆ ಗಣಕಯಂತ್ರದಲ್ಲಿ ಪರಿಣಿತಿ ಪಡೆದಿರಬೇಕು. ಹಾಗೂ ಜವಾನ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. 18 ರಿಂದ 35 ವರ್ಷ ವಯೊಮೀತಿಯೊಳಗಿರಬೇಕು.. ಅರ್ಜಿ ಸಲ್ಲಿಸಲು ಅಕ್ಟೋಬರ 27 ಕೊನೆಯ ದಿನವಾಗಿರುತ್ತದೆ. ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ನಂದೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next

ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕು-ಜಯಶ್ರೀ ಮೊಗೇರ್

ಭಟ್ಕಳ: ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ...