ಕಾರವಾರ:ನೀರು ಸರಬರಾಜಿನಲ್ಲಿ ವ್ಯತ್ಯಯ 

Source: varthabhavan | By Arshad Koppa | Published on 25th April 2017, 7:55 AM | Coastal News |

ಕಾರವಾರ ಏ.24 : ಅಂಕೋಲಾ –ಕಾರವಾರ ಅವಳಿ ಪಟ್ಟಣ ಹಾಗೂ ಇತರೆ ಗ್ರಾಮ ಪಂಚಾಯತಳಿಗೆ ನೀರು ಸರಬರಾಜು ಕಲ್ಪಿಸುವ ನದಿ ಮೂಲವಾದ ಗಂಗಾವಳಿ ನದಿಯ ನೀರಿನ ಮಟ್ಟ ತೀವ್ರಗತಿಯಲ್ಲಿ ಕಡಿಮೆ ಆಗುತ್ತಿರುವದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.


 ಗಂಗಾವಳಿ ನದಿಗೆ ಉಸುಕಿನ ಚೀಲದ ತಾತ್ಕಾಲಿಕ ಒಡ್ಡನ್ನು ಕಟ್ಟಲಾಗಿದ್ದು ಸಂಗ್ರಹಿಸಿದ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಲಿದೆ. ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ವೃದ್ದಿಸುವ ತನಕ ಕಾರವಾರ ನಗರ, ಅಂಕೋಲಾ ಪಟ್ಟಣ ಮಾರ್ಗದ ಹಳ್ಳಿಗಳು ಆದಿತ್ಯಾ ಬಿರ್ಲಾ ಕೆಮಿಕಲ್ಸ್, ಸಿಬರ್ಡ ನೈಕಾನೆಲೆ ಹಾಗೂ ಇತರೆ ಎಲ್ಲಾ ಗ್ರಾಹಕರಿಗೂ ಮೂರು ದಿನಕೊಮ್ಮೆ ನೀರು ಸರಬರಾಜು ಮಾಡುವದು ಅನಿವಾರ್ಯವಾಗಿರುತ್ತದೆ. ನೀರಿನ ಮಟ್ಟ ಇನ್ನೂ ಕಡಿಮೆ ಆದಲ್ಲಿ ಎಲ್ಲಾ ಗ್ರಾಹಕರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾದ್ಯತೆ ಇರುತ್ತದೆ ಎಂದು ಕಾರವಾರ ಕನನೀಸ ಮತ್ತು ಒಳ ಚರಂಡಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಬಿಯಂತರು ತಿಳಿಸಿದ್ದಾರೆ. 

ಕಾರವಾರ: ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆಯ   ಪ್ರವೇಶ ಫಲಿತಾಂಶ ಪ್ರಕಟ
ಕಾರವಾರ ಏಪ್ರೀಲ್ 24 : ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕು ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆಯ 2017-18ನೇ ಸಾಲಿಗೆ 8ನೇ ತರಗತಿ ಇಂಗ್ಲೀಷ ಮಾಧ್ಯಮದ ವಿಭಾಗಕ್ಕೆ ಪ್ರವೇಶ ಪರೀಕ್ಷೆ ಮಾರ್ಚ 5 ರಂದು ನಡೆಸಲಾಗಿ,  ಪ್ರವೇಶ ಪರೀಕ್ಷೆಗೆ ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ವಿಜಯಪೂರ, ಭಾಗಲಕೋಟ, ಗದಗ, ಹಾವೇರಿ, ಕಾರವಾರ ಜಿಲ್ಲೆಗಳಿಂದ ಒಟ್ಟು 1631 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 50 ವಿದ್ಯಾರ್ಥಿಗಳನ್ನು ಮೆರಿಟ ಮತ್ತು ರೋಸ್ಟರ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. 
 ಫಲಿತಾಂಶವನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡ ಇಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡ, ಮೊ.ನಂ. 9740426777, 9738956826. ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...