ಕಾರವಾರ : ಉದ್ಯೋಗ ವಿನಿಮಯ ಕಚೇರಿಯಲ್ಲಿ  108 ಉದ್ಯೋಗಾಕಾಂಕ್ಷಿಗಳಿಂದ ನೋಂದಣಿ

Source: so english | By Arshad Koppa | Published on 13th October 2017, 9:14 AM | Coastal News |

ಕಾರವಾರ ಅಕ್ಟೋಬರ 12: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೆಪ್ಟೆಂಬರ  ತಿಂಗಳನಲ್ಲಿ 43 ಮಹಿಳೆಯರು ಸೇರಿದಂತೆ 108 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿದ್ದಾರೆ.


ಕಳೆದ ಆಗಸ್ಟ ಮಾಹೆಯಲ್ಲಿ 112 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ.ಉದ್ಯೋಗ ನಿರೀಕ್ಷೆಯಲ್ಲಿ ಓಟ್ಟು 9401 ಅಭ್ಯರ್ಥಿಗಳು ಇದ್ದು ಅವರಲ್ಲಿ 3021 ಮಹಿಳಾ ಅಭ್ಯರ್ಥಿಗಳು, 2704 ಪರಿಶಿಷ್ಟ ಜಾತಿ, 307 ಪರಿಶಿಷ್ಟ ಪಂಗಡ, 970 ಅಂಗವಿಕಲ ಅಭ್ಯರ್ಥಿಗಳು ಇದ್ದಾರೆ ಎಂದು ಕಾರವಾರ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.


ಅಂಗನವಾಡಿಯಲ್ಲಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ ಅಕ್ಟೋಬರ 12:  ಶಿರಸಿ  ತಾಲೂಕಿನ ಮಾಡನಕೇರಿ ಅಂಗನವಾಡಿಯಲ್ಲಿ ಕಾರ್ಯಕರ್ತೆ ಮತ್ತು  ಮಾಳಂಜಿ, ಕದಂಬನಗರ, ಗಣೇಶನಗರ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು ಅಕ್ಟೋಬರ 23 ಕೊನೆಯ ದಿನವಾಗಿರುತ್ತದೆ. ಸ್ಥಳಿಯ ಮಹಿಳಾ ಅಭ್ಯರ್ಥಿಗಳು ಅವಶ್ಯಕ ಮೂಲ ದಾಖಲಾತಿಗಳ ಝೆರಾಕ್ಸ ಪ್ರತಿಗಳೊಂದಿಗೆ ಅಂಚೆ ಲಕೋಟಿ ಮೇಲೆ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ  ಅರ್ಜಿ ಎಂದು ಬರೆದು ಶಿರಸಿ  ಶಿಶು ಅಭಿವೃದ್ಧಿ ಕಾರ್ಯಾಲಯದಲ್ಲಿರಿಸಿದ ಅರ್ಜಿ ಪೆಟ್ಟಿಗೆಯಲ್ಲಿ ಸಲ್ಲಿಸುವಂತೆ ಶಿರಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next

ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕು-ಜಯಶ್ರೀ ಮೊಗೇರ್

ಭಟ್ಕಳ: ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ...