ಕಾರವಾರ: ತೆರೆದುಕೊಳ್ಳದ ಕೇಂದ್ರ ಕೌಶಲ್ಯ ಮಂತ್ರಿ ಕಚೇರಿ; ಅಂಗನವಾಡಿ ನೌಕರರ ಆಕ್ರೋಶ

Source: sonews | By Staff Correspondent | Published on 10th January 2018, 11:31 PM | Coastal News | Public Voice | Don't Miss |

ಕಾರವಾರ:ಕೇಂದ್ರ ಕೌಶಲ್ಯ ಮಂತ್ರಿ ಅನಂತ ಕುಮಾರ್ ಹೆಗಡೆಯವರ ಕಾರವಾರ ಕಛೇರಿಗೆ ಮನವಿ ಕೊಡಲು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಎಚ್.ಎಸ್ ಮತ್ತು ನಾವೆಲ್ಲ ಜಿಲ್ಲಾ ಪದಾಧಿಕಾರಿಗಳು ಹೋಗಿದ್ದೆವು.

ಈ ಕಛೇರಿಯ ಬಾಗಿಲು ಹಾಕಿದ್ದು ನೋಡಿ ಆಶ್ಚರ್ಯವೂ ಬೇಸರವೈ ಆಯಿತು. ಈಗ ಇಲ್ಲಿಯ ಕಛೇರಿಯು ಕೆಲಸ ಮಾಡದೇ ಹದಿನೈದು ದಿನಕ್ಕೂ ಮೇಲಾಗಿದೆಯಂತೆ. ಹಾಗಾಗಿ ಬಾಗಿಲ ಸಂಧಿಯಿಂದ ಒಳತೂರಿ ಬಂದೆವು. ಸಂಘಟನೆಯ ಪರವಾಗಿ ಶಿರಸಿ ಕಛೆರಿಗೆ ಹೋಗಿ ಈ ಮನವಿಯ ರಿಸೀವ್ಡ ತರಲು ನಿರ್ಧರಿಸಿದ್ದೇವೆ. ಜೊತೆಗೆ ಜಿಲ್ಲಾ ಕೇಂದ್ರದಲ್ಲಿರುವ ಮಂತ್ರಿಗಳ ಕಛೇರಿ ಕೆಲಸನಿರತವಾಗಬೇಕೆಂದು, ಅಹವಾಲು ಇಟ್ಟು ಬರುವ ಜಿಲ್ಲೆಯ ಹಾಗೂ ಕೆನರಾ ಕ್ಷೇತ್ರದ ಜನತೆಯ ಸಲುವಾಗಿ ಮಂತ್ರಿಗಳು ಸಿಗದಿದ್ದರೂ ಕಛೇರಿಯಾದರೂ ತೆರೆದಿರಬೇಕೆಂದು ಆಗ್ರಹಿಸುತ್ತೇವೆ.

ನಮ್ಮ ಮನವಿಯ ಮುಖ್ಯಾಂಶವೇನೆಂದರೆ, ಅಂಗನವಾಡಿಗಳಿಗೆ ಕೇಂದ್ರದ ಅನುದಾನ ಸರಿಯಾಗಿ ನೀಡಬೇಕೆಂದು, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಹಾಗೂ ಪ್ಯಾಕೆಟ್ ಆಹಾರ ಬೇಡವೆಂದು, ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸಲಾಗದೆಂದು ಲೋಕಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಚಿವಾಲಯ ಸ್ಪಷ್ಟಪಡಿಸಿದ್ದನ್ನು ನಾವು ಒಪ್ಪಲಾಗದೆಂದು ಮಾನ್ಯ ಸಚಿವರು ಅಂಗನವಾಡಿ ನೌಕರರ ಪರವಾಗಿ ಲೋಕಸಭೆಯಲ್ಲಿ ವಾದಿಸಬೇಕೆಂದು ಅದಕ್ಕಾಗಿ ಜನವರಿ 17 ರಂದು ಅವರ ಮನೆ ಮುಂದೆ ಹೋಗಿ ಮನವಿ ನೀಡುತ್ತಿದ್ದೇವೆ ಅಂದು ಮನವಿ ಸ್ವೀಕರಿಸಲು ಆಗಮಿಸಿರೆಂದು ಆಹ್ವಾನ ಪತ್ರ ನೀಡಲು ಇಂದು ಹೋಗಿದ್ದೆವು. ಕ. ರಾ. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಯಮುನಾ ಗಾಂವ್ಕರ್, ಮೋಹಿನಿ ನಮ್ಸೇಕರ್, ಲಲಿತಾ ಹೆಗಡೆ, ಲಕ್ಷ್ಮಿ ಸಿದ್ದಿ, ಶಾಲಿನಿ ಕಲ್ಮನೆ ಇನ್ನುಳಿದ ಪದಾಧಿಕಾರಿಗಳು ಇದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...