ಕಾರವಾರ :ಡಿಸೆಂಬರ್ ನಲ್ಲಿ ಗಾಳಿಪಟ ಉತ್ಸವ ನಡೆಸಲಾಗುವುದು: ಎಚ್.ಪ್ರಸನ್ನ

Source: so english | By Arshad Koppa | Published on 13th October 2017, 9:12 AM | Coastal News |

 ಕಾರವಾರ ಅಕ್ಟೋಬರ್ 12: ಬರುವ ಡಿಸೆಂಬರ್‍ನಲ್ಲಿ ಕಾರವಾರ ಮತ್ತು ಗೋಕರ್ಣದಲ್ಲಿ ಗಾಳಿಪಟ ಉತ್ಸವ ನಡೆಸಲು ಉದ್ದೇಶಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದರು.
    ಗಾಳಿಪಟ ಉತ್ಸವ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಉತ್ಸವ ಆಯೋಜಕರು, ಹೋಟೆಲ್ ಮಾಲಿಕರು ಸೇರಿದಂತೆ ಹಲವು ಪ್ರಮುಖರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
    ಪ್ರವಾಸಿಗರನ್ನು ಆಕರ್ಷಿಸುವುದೇ ಉತ್ಸವದ ಪ್ರಮುಖ ಉದ್ದೇಶವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಉತ್ಸವಗಳು ಜನಪ್ರಿಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು, ಬಯಲುಸೀಮೆಯನ್ನು ಮೇಳೈಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು ಪ್ರವಾಸಿಗರನ್ನು ಆಕರ್ಷಿಸಲು ಗಾಳಿಪಟ ಉತ್ಸವ ಆಯೋಜನೆ ಮಾಡಲು ಜಿಲ್ಲಾಧಿಕಾರಿಗಳು ಚಿಂತನೆ ನಡೆಸಿದ್ದರು. ಅದರಂತೆ ಅದರ ಪೂರ್ವ ತಯಾರಿಗೆ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದರು.
    ಡಿಸೆಂಬರ್ ತಿಂಗಳಲ್ಲಿಯೇ ಕರಾವಳಿ ಉತ್ಸವ ಕೂಡ ಜರುಗಲಿದ್ದು ಕರಾವಳಿ ಉತ್ಸವದ ಮೊದಲು ಅಥವಾ ನಂತರ ಗಾಳಿಪಟ ಉತ್ಸವ ಆಯೋಜನೆಗೆ ಚಿಂತನೆ ನಡೆದಿದೆ. ಈ ಉತ್ಸವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ವೃತ್ತಿಪರ ಗಾಳಿಪಟ ಹಾರಿಸುವವರನ್ನು ಆಹ್ವಾನಿಸಲಾಗುವುದು. ಅಲ್ಲದೆ, ಜಿಲ್ಲೆಯ ಎಲ್ಲ ಶಾಲಾ ಮಕ್ಕಳು, ನಾಗರಿಕರು ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದರು.
    ಗಾಳಿಪಟ ಉತ್ಸವ ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗುತ್ತಿದ್ದು ಹೋಟೆಲ್ ಉದ್ಯಮಿಗಳು ಹಾಗೂ ಪ್ರವಾಸೋದ್ಯಮ ಪೂರಕ ಚಟುವಟಿಕೆಯಲ್ಲಿರುವ ಉದ್ಯಮಿಗಳು ಹಾಗೂ ಸಾಹಸ ಕ್ರೀಡಾ ಸಂಸ್ಥೆಗಳನ್ನು ಸೇರಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯಬಹುದಾದ ಉತ್ಸವವನ್ನಾಗಿ ರೂಪಿಸುವ ಉದ್ದೇಶವಿದೆ ಎಂದರು ಅವರು ತಿಳಿಸಿದರು.
    ಸಭೆಯಲ್ಲಿ ಗಾಳಿಪಟ ಉತ್ಸವ ಕುರಿತು ವಿವಿಧ ಕ್ಷೇತ್ರದ ಪರಿಣಿತರು ವಿವಿಧ ಸಲಹೆಗಳನ್ನು ನೀಡಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಯೋಗೇಶ್ವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣನಾಯಕ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ನಗರಾಭಿವೃದ್ಧಿ ಕೋಶ ಎಂಜಿನಿಯರ್ ಆರ್.ಪಿ.ನಾಯಕ್ ಸೇರಿದಂತೆ ವಿವಿಧ ಅಧಿಕಾರಿಗಳು, ಉದ್ಯಮಿಗಳು ಭಾಗವಹಿಸಿದ್ದರು.
 

Read These Next

ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕು-ಜಯಶ್ರೀ ಮೊಗೇರ್

ಭಟ್ಕಳ: ಮುಸ್ಲಿಮರ ಕುರಿತಂತೆ ನಮ್ಮಲ್ಲಿನ ಮನೋಭಾವನೆಗಳನ್ನು ಬದಲಿಸಿಕೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ...