ಕಾರವಾರ: ಸೂಕ್ತ ಪ್ರತಿಭೆಗಳು ಅನಾವರಣಗೊಳ್ಳಲಿ : ಸತೀಶ ಸೈಲ್ 

Source: varthabhavan | By Arshad Koppa | Published on 9th September 2017, 8:14 AM | Coastal News | Special Report |

ಕಾರವಾರ ಸೆಪ್ಟಂಬರ್ 8 : ಮಕ್ಕಳು ಸೂಕ್ತ ಪ್ರತಿಭೆಗಳು ಅನಾವರಣಗೊಳಿಸುವದರೊಂದಿಗೆ ಉತ್ತಮ ಶಿಕ್ಷಣ ಪಡೆದು ತಾವು ಶಿಕ್ಷಣ ಪಡೆದ ಶಾಲೆ, ಜಿಲ್ಲೆ ರಾಜ್ಯ ಮತ್ತು ದೇಶದ ಕೀರ್ತಿ ಪತಾಕೆ ಹಾರಿಸಬೇಕು ಎಂದು ಶಾಸಕ ಸತೀಶ ಕೆ.ಸೈಲ್ ಹೇಳಿದರು. 
  ಅವರು ಶುಕ್ರವಾರ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರವಾರ ಮತ್ತು ಶಿರಸಿ ಶೈಕ್ಷಣ ಕ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ 6 ರಿಂದ 14 ವರ್ಷದೊಳಗಿನ ಶಾಲಾ ಮಕ್ಕಳ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಹಾಕುವದರಿಂದ ಭವಿಷ್ಯದಲ್ಲಿ ಭಯವಿಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಸಹಕಾರಿಯಾಗುತ್ತದೆ ಮತ್ತು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪಾಲಕರು ಹಾಗೂ ಶಿಕ್ಷಕರು ನಿರಂತರವಾದ ಪ್ರೋತ್ಸಾಹ ನೀಡಬೇಕು ಎಂದು ಹಾಳಿದರು. 


  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ ನಗರಸಭೆ ಅಧ್ಯಕ್ಷ ಗಣಪತಿ ವಿ.ನಾಯ್ಕ ಮಾತನಾಡಿ ಶಾಲಾ ಮಕ್ಕಳ ಮುಂದಿನ ಭವಿಷ್ಯಕ್ಕೆ ಚಿಗುರು ಕಾರ್ಯಕ್ರಮ ಸಹಕಾರಿಯಾಗಿದೆ. ಪ್ರತಿ ಮಗುವಿನಲ್ಲೂ ಕೂಡಾ ಒಂದೊಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಗಳನ್ನು ಅನಾವರಣಗೊಳಿಸಿ ಪ್ರದರ್ಶಿಸಲು ಚಿಗುರುದಂತಹ ಕಾರ್ಯಕ್ರಮಗಳ ಮುಖ್ಯ ಪಾತ್ರ ವಹಿಸುತ್ತವೆ. ಶಾಲೆ ಎಂಬುದು ಒಂದು ಮಂದಿರವಿದ್ದಂತೆ ಅದನ್ನು ಆರಾಧಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು. 
  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ಧೇಶಕ ರಾಮಕೃಷ್ಣ ನಾಯ್ಕ ಸ್ವಾಗತಿಸಿದರು. ಸುರೇಶ ಗಾಂವಕರ್ ಕಾರ್ಯಕ್ರಮ ನಿರೂಪಿಸಿದರು. ಕಾರವಾರ ನಗರಸಭೆ ಸದಸ್ಯೆ ಛಾಯಾ ಜಾವಕರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕಗಳ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. 
ಮಕ್ಕಳಿಂದ ಅನಾವರಣಗೊಂಡ ಕಾರ್ಯಕ್ರಮಗಳು : ವಿರಾಜ್ ಗಡ್ಕರ್ ಹಾಗೂ ತಂಡ, ಕಾರವಾರ ಇವರಿಂದ ಶಾಸ್ತ್ರೀಯ ವಾದ್ಯ ಸಂಗೀತ, ತುಳಸಿ ಹೆಗಡೆ ಹಾಗೂ ತಂಡ ಶಿರಸಿ ಯಕ್ಷಗಾನ, ಶಿರವಾಡ ಪ್ರಾಥಮಿಕ ಶಾಲಾ ಮಕ್ಕಳಿಂದ ಜನಪದ ಗೀತೆಗಳು, ಯಲ್ಲಾಪುರ ಶ್ರೇಯಾ ಮಹಾಬಲೇಶ್ವರ ಹೆಗಡೆ ಇವರಿಂದ ಶಾಸ್ತ್ರೀಯ ನೃತ್ಯ- ಭರತನಾಟ್ಯ, ಹಳಿಯಾಳದ ಶ್ರೀದೇವಿ ಅಮ್ರಾಪುರ ಹಾಗೂ ತಂಡದವರಿಂದ ಸಮೂಹ ನೃತ್ಯ ರೂಪಕ, ಜೋಯಿಡಾದ ರಶ್ಮಿ ರೆಡಕರ,ಸಾಕ್ಷಿ ಪವಾಸ್ಕರ ಹಾಗೂ ತಂಡದರಿಂದ ಶಾಸ್ತ್ರೀಯ ಸಂಗೀತ, ಅಂಕೋಲಾದ ಮಾರುತಿ ಬೀರಪ್ಪ ನಾಯ್ಕ ಏಕ ಪಾತ್ರ ಅಭಿನಯ, ಕುಮಟಾ ವೀಣಾ ಬಂಡಾರಿ ಹಾಗೂ ಅನನ್ಯ ಜಗದೀಶ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ.   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...