ಕಾಯ್ಕಿಣಿ ಪಾರ್ಶ್ವನಾಥ ಜಿನಾಲಯದ ಜೀರ್ಣೋದ್ಧಾರದ ಪೂರ್ವಭಾವಿ ಸಭೆ

Source: S O News service | By Staff Correspondent | Published on 6th December 2016, 7:33 PM | Coastal News |

ಭಟ್ಕಳ : ತಾಲ್ಲೂಕಿನ ಕಾಯ್ಕಿಣಿ ಬಸ್ತಿಯ ಅತಿ ಪ್ರಾಚೀನ ಕಾಲದ ಭಗವಾನ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಜಿನಾಲಯದ ಜೀರ್ಣೋದ್ದಾರ ಕಾರ್ಯ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಶ್ರೀ ಸ್ವಾಧಿ ದಿಗಂಬರ ಜೈನ ಮಠದ ಶ್ರೀಗಳಾದ ಭಟ್ಟಾಕಲಂಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಜಿನಮಂದಿರದ ಧಾಮ ಸಂಪ್ರೋಕ್ಷಣೆ ಮತ್ತು ಲಘು ಪಂಚಕಲ್ಯಾಣ ಮಹೋತ್ಸವದ ಕುರಿತು ಪೂರ್ವ ಭಾವಿ ಸಭೆ ಕರೆದು ಚರ್ಚಿಸಲಾಯಿತು. 
ಸಭೆಯಲ್ಲಿ ಕಾರ್ಯಕ್ರಮವನ್ನು ೨೦೧೭, ಫೆ,೨ರಿಂದ ೧೦ ರ ವರೆಗೆ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಶ್ರಾವಕ-ಶ್ರಾವಕಿಯರ ಹಾಗೂ ಸ್ಥಳೀಯರ ಸಹಕಾರದಿಂದ ಅತಿ ಪ್ರಾಚೀನ ಕಾಲದ ಭಗವಾನ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಜಿನಾಲಯ ಜೀಣೋದ್ಧಾರ ಕಂಡಿದೆ. ಸಮುದಾಯದಲ್ಲಿ ಸಂಘಟನೆ ಇದ್ದರೆ ಎಂತಹ ಮಹತ್ವದಾದ ಕಾರ್ಯವನ್ನಾದರೂ ಮಾಡಬಹುದು. ಪ್ರಾಚೀನ ಜಿನಾಲಯವೊಂದು ಎಲ್ಲರ ಸಹಾಯ, ಸಹಕಾರದಿಂದ ಜೀರ್ಣೋದ್ದಾರವಾಗಿರುವುದು ಸಂತಸ ತಂದಿದ್ದು, ಸಮಾಜ ಬಾಂದವರು ಮುಂದೆಯೂ ಕೂಡ ಸ್ಥಳೀಯರ ಸಹಕಾರ ಪಡೆದು ಉತ್ತಮ ಕಾರ್ಯವನ್ನು ಮಾಡಲು ಮುಂದಾಗಬೇಕು ಎಂದರು. ಸಭೆಯಲ್ಲಿ ತಾ.ಪಂ.ಸದಸ್ಯ ಪಾರ್ಶ್ವನಾಥ ಶೆಟ್ಟಿ, ನ್ಯಾಯವಾದಿ ಧನ್ಯಕುಮಾರ ಜೈನ್, ವಜ್ರನಾಭ ಗೌಡ ಮಂಕಿ,ಚಂದ್ರರಾಜ ಗೋಳಿಕುಂಬ್ರಿ ಸೇರಿದಂತೆ ಸಮಾಜ ಬಾಂದವರು ಉಪಸ್ಥಿತರಿದ್ದರು. ಪಂಚಕಲ್ಯಾಣ ಸಮಿತಿಯ ಅಧ್ಯಕ್ಷ ಜಗದೀಶ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪದ್ಮಪ್ರಸಾದ ಜೈನ್ ಸ್ವಾಗತಿಸಿದರು. ಪದ್ಮರಾಜ ಜೈನ ಹಾಡುವಳ್ಳಿ ವಂದಿಸಿದರು. ಯೋಗೇಂದ್ರ ಇಂದ್ರ ನಿರೂಪಿಸಿದರು.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...