ಸ್ಚಯಂ ಪ್ರೇರಿತ ಕಾನೂನು ಸೇವಕರಿಗಾಗಿ ಕಾನೂನು ಆರಿವು-ನೆರವು ಕಾರ್ಯಕ್ರಮ

Source: S O News service | By Staff Correspondent | Published on 23rd September 2016, 6:57 PM | State News | Don't Miss |


ಚಿಂತಾಮಣಿ: ನಮ್ಮ ಸಂವಿದಾನದಲ್ಲಿ ಪ್ರತಿಯೊಬ್ಬ ನಾಗರಿಕನು ಸಹ ಘನತೆ ಗೌರವಗಳಿಂದ ಬಾಳಬೆಕೆಂಬ ಹಕ್ಕನ್ನು ನೀಡಿದ್ದು,ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬಾಳಬೇಕೆಂಬುದು ಸಂವಿದಾನದ ಆಶಯವಾಗಿದೆ. ಆ ನಿಟ್ಟಿನಲ್ಲಿ  ಕಾರಣಾಂತರಗಳಿಂದ ಬಂಧಿಗಳಾಗಿರುವ ತಾವು ಕಾನೂನಿನ ಆರಿವು ನೆರವು ಪಡೆದುಕೊಂಡು ಹೊರಬಂದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶ ಎಸ್ ನಟರಾಜ್ ರವರು ಖೈದಿಗಳಿಗೆ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಚಿಕ್ಕಬಳ್ಳಾಪುರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಚಿಂತಾಮಣಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಉಪಕಾರಾಗೃಹ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ  ನಗರದ ಉಪಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸೇವಾ ಕೇಂದ್ರದ ಉದ್ಘಾಟನೆ ಹಾಗೂ ಸ್ಚಯಂ ಪ್ರೇರಿತ ಕಾನೂನು ಸೇವಕರಿಗೆ ಕಾನೂನು ಆರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶ ಎಸ್ ನಟರಾಜ್ ಮಾತನಾಡಿ ಪ್ರತಿಯೊಬ್ಬ ನಾಗರೀಕನು ಸಮಾಜದಲ್ಲಿ ಘನತೆ ಗೌರವ ಹಾಗೂ ಸಮಾನತೆ ಸಹೋದರತ್ವದಿಂದ ಸಮಾನಾಗಿ ಬಾಳಿ ಬದುಕುಬೇಕೆಂಬ ಅವಕಾಶ ನಮ್ಮ ಸಂವಿದಾನ ನೀಡಿದ್ದು, ಪ್ರತಿಯೊಬ್ಬ ನಾಗರೀಕನಿಗೂ ಸಹಾ ಕಾನೂನಿನ ಸೇವೆ ಸಿಗಬೇಕೆಂಬ ಉದ್ದೇಶದಿಂದ ೧೯೮೭ರಲ್ಲಿ ರಾಷ್ಟ್ರೀಯ ಕಾನೂನು ಸೇವೆ ಜಾರಿಗೆ ಬಂತು. ಅ ನಿಟ್ಟಿನಲ್ಲಿ  ಕಾನೂನಿನ ಆರಿವನ್ನು ಪಡೆದುಕೊಂಡು ಜೀವದ ಬೆಲೆ  ಹಾಗೂ ಕಾನೂನಿನ ಅರಿವು ಗೋತ್ತಿಲ್ಲದೆ ತಾವುಗಳು ಇನ್ನೊಬ್ಬರಿಗೆ ತೊಂದರೆ ನೀಡಿ ಅವರ ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಿ ಜೈಲಿನಲ್ಲಿ ಖೈದಿಗಳಾಗಿ ಬಂದಿಗಳಾಗಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಂತಹ ಕೃತ್ಯಗಳನ್ನು ಮತ್ತೆ ಮತ್ತೆ ಮಾಡದೆ ಕಾನೂನಿನ ಅರಿವು ನೆರವು ಪಡೆದುಕೊಂಡು ಕಾರಾಗೃಹದಿಂದ ಹೊರಬಂದು ಇತರರಿಗೆ ತೊಂದರೆ ನೀಡದೇ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಬದುಕಬೇಕೆಂದರು.
ಈ ಸಂದರ್ಭದಲ್ಲಿ ಜೆ.ಎಂ.ಎಪ್.ಸಿ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯದೀಶೆ ಎಸ್. ಶಂಕುತಲಾ, ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಆರ್. ನಟೇಶ್ ತಹಸಿಲ್ದಾರ್ ಗಂಗಪ್ಪ, ಉಪಕಾರಾಗೃಹದ ಅಧೀಕ್ಷಕಿ ತಿಲೋತ್ತಮೆ, ಡಿವೈ‌ಎಸ್ಪಿ ಕೃಷ್ಣಮೂರ್ತಿ, ವಕೀಲರ ಸಂಗದ ಅಧ್ಯಕ್ಷ ಬೈರಾರೆಡ್ಡಿ, ಉಪಧ್ಯಕ್ಷ ನಾ.ಶಂಕರ್,ಕಾರ್ಯದರ್ಶಿ ಶಿವಾನಂದ ಹಿರಿಯವಕೀಲರಾದ ಜಿ.ಎಂ ಇಬ್ರಾಹಿ ಸೇರಿದಂತೆ ಎಲ್ಲಾ ವಕೀಲರು ಹಾಗೂ ಖೈದಿಗಳು ಉಪಸ್ಥಿತಿರಿದ್ದರು.
 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...