ಕೇಂದ್ರ ಸರಕಾರ ಗೋಹತ್ಯೆ ನಿಷೇಧಕ್ಕೆ :ಭಟ್ಕಳ ಶಂಶುದ್ದೀನ್ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

Source: s o news | By MV Bhatkal | Published on 27th May 2017, 1:52 AM | Coastal News | Don't Miss |

ಭಟ್ಕಳ: ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಮಾಡಿರುವುದನ್ನು ಇಲ್ಲಿನ ಹುರುಳಿಸಾಲ್ ಯುವಕರ ಗುಂಪು ಸ್ವಾಗತಿಸಿ ಶಂಶುದ್ಧೀನ್ ಸರ್ಕಲ್‍ನಲ್ಲಿ ಗೋವನ್ನು ಪೂಜಿಸಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿತು. 

ಶಂಶುದ್ಧೀನ್ ಸರ್ಕಲ್‍ನಲ್ಲಿ ಸೇರಿದ ಯುವಕರು ಗೋವೊಂದನ್ನು ತಂದು ಪೂಜಿಸಿ ಗೋಮಾತೆಯ ರಕ್ಷಣೆಗೆ ಕೇಂದ್ರ ಸರಕಾರ ತಂದಿರುವ ಕಾನೂನು ಅತ್ಯಂತ ಸಂತಸ ತಂದಿದೆ.  ಗೋವನ್ನು ನಾವು ದೇವರಂತೆ ಪೂಜಿಸುತ್ತಿರುವುದರಿಂದ ಈ ಕಾನೂನು ದೇಶದಲ್ಲಿಯ ಹಲವಾರು ಗೊಂದಲಗಳಿಗೆ, ಅಶಾಂತಿಗೆ ಕಾರಣವಾಗುತ್ತಿರುವ ಸನ್ನಿವೇಶಗಳನ್ನು ತಪ್ಪಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು. 
ಈ ಸಂದರ್ಭದಲ್ಲಿ ಹುರುಳಿಸಾಲ್ ನಿವಾಸಿಗಳಾದ ಲಕ್ಷ್ಮಣ ನಾಯ್ಕ, ರಾಜೇಶ ನಾಯ್ಕ, ಲೋಕೇಶ, ಪಾಂಡು ನಾಯ್ಕ, ರವಿ ನಾಯ್ಕ, ಶಿವಾ ನಾಯ್ಕ, ವಿನೋದ ನಾಯ್ಕ, ರಾಜು ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...