ಶಾರ್ಜಾ ರಸ್ತೆ ಅಪಘಾತದಲ್ಲಿ ಕಾಸರಗೋಡಿನ ಯುವಕ ಸಾವು

Source: so news | By Manju Naik | Published on 17th June 2018, 6:54 PM | Coastal News | State News | Don't Miss |

ಕಾಸರಗೋಡಿನ ಯುವಕನೋರ್ವ ಶಾರ್ಜಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದ್ದು,  ಕಾರಿನಲ್ಲಿದ್ದ ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆಂದು ತಿಳಿದು ಬಂದಿದೆ.

ಹಾತೀಬ್ ಹ್ಯಾರಿಸ್(23) ಮೃತಪಟ್ಟ ಯುವಕ. ಇವರು ಕಾಸರಗೋಡಿನ ತಳಂಗರೆಯ ನಿವಾಸಿ ಎನ್ನಲಾಗಿದೆ. ಶಾರ್ಜಾದ ರಿಯಲ್ ಎಸ್ಟೇಟ್ ವೊಂದರಲ್ಲಿ ಕಂಪೆನಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ನೇಹಿತರ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಸ್ಫೋಟಗೊಂಡಿದ್ದು, ಪರಿಣಾಮವಾಗಿ ಕಾರು ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದ ಹ್ಯಾರಿಸ್ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ

Read These Next