ಜಿದ್ದಾ: ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ವತಿಯಿಂದ ಭಾರತೀಯ ಗಣರಾಜ್ಯೋತ್ಸವದ ಅಂಗವಾಗಿ ಕಬಡ್ಡಿ ಆಯೋಜನೆ

Source: nri sports jeddah | By Arshad Koppa | Published on 11th January 2017, 10:46 PM | Gulf News | Sports News |

ಜಿದ್ದಾ: ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್, ಜಿದ್ದಾ ಇದರ ವತಿಯಿಂದ ಭಾರತೀಯ ಗಣರಾಜ್ಯೋತ್ಸವದ ಅಂಗವಾಗಿ -ಬ್ರವರಿ ೩ರಂದು ಜಿದ್ದಾದ ಶಬಾಬಿಯಾ ಮೈದಾನದಲ್ಲಿ ಕಬಡ್ಡಿ ಲೀಗ್ - ೨೦೧೭ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. 

ಸೌದಿ ಅರೇಬಿಯಾದ ರಿಯಾದ್, ಜಿದ್ದಾ, ದಮಾಮ್, ಖೋಬರ್ ಹಾಗೂ ಇನ್ನಿತರ ಪ್ರದೇಶಗಳಿಂದ ಸುಮಾರು ೧೬ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 

ಶ್ರೇಷ್ಠ ಭಾರತವು ಗಣರಾಜ್ಯಗೊಂಡ ಅವಿಸ್ಮರಣೀಯ ಸಂದರ್ಭವನ್ನು ನೆನಪಿಸುವ ಮತ್ತು ಆಚರಿಸುವ ಅವಕಾಶವನ್ನು ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರಿಗೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಈ ಕಬಡ್ಡಿ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. 

ದೇಹ ದಾರ್ಢ್ಯತೆಯ ಪ್ರತೀಕವಾದ ಭಾರತದ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಚುರಪಡಿಸಬೇಕೆಂಬ ಉದ್ದೇಶದಿಂದ ಎನ್‌ಆರ್‌ಐ ಸ್ಪೋರ್ಟ್ಸ್ -ಡರೇಶನ್ ಗಣರಾಜ್ಯೋತ್ಸವ ಆಚರಣೆಗೆ  ಕಬಡ್ಡಿಯನ್ನು ಆಯ್ಕೆ ಮಾಡಿದೆ. 

ಎನ್‌ಆರ್‌ಐ ಸ್ಪೋರ್ಟ್ಸ್ -ಡರೇಶನ್ ಜಿದ್ದಾದಲ್ಲಿರುವ ಅನಿವಾಸಿ ಭಾರತೀಯರನ್ನೊಳಗೊಂಡ ಒಂದು ಒಕ್ಕೂಟವಾಗಿದೆ. ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಮಧ್ಯೆ ಭಾರತೀಯ ಕ್ರೀಡೆ ಮತ್ತು ವ್ಯಾಯಾಮಗಳನ್ನು ಹರಡುವ ಪ್ರಮುಖ ಉದ್ದೇಶವನ್ನು ಫೆಡರೇಶನ್ ಹೊಂದಿದೆ. ಅನಿವಾಸಿ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ಕ್ರೀಡೆಗಳ ಕುರಿತ ಒಲವುಂಟುಮಾಡುವುದು, ಕ್ರೀಡಾ ಪ್ರತಿಭೆಗಳಿಗೆ ಮನ್ನಣೆ ನೀಡುವುದು ಮುಂತಾದ ಹಲವು ಉದ್ದೇಶಗಳನ್ನು ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಹೊಂದಿದೆ. 

೮ ಜನವರಿ ೨೦೧೭ರಂದು ಜಿದ್ದಾದ ಪ್ರಧಾನ ರಾಜತಾಂತ್ರಿಕ ಮಹಮ್ಮದ್ ರಹ್ಮಾನ್ ನೂರ್ ಶೈಖ್‌ರನ್ನು ಭೇಟಿಯಾಗಿರುವ ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್‌ನ ನಿಯೋಗವೊಂದು ಕಬಡ್ಡಿ ಲೀಗ್‌ಗೆ ಅವರ ಸಹಕಾರವನ್ನು ಕೋರಿದೆ. 

ಸೌದಿ ಅರೇಬಿಯಾದ ರಿಯಾದ್, ಜಿದ್ದಾ, ದಮಾಮ್, ಖೋಬರ್ ಹಾಗೂ ಇನ್ನಿತರ ಪ್ರದೇಶಗಳಿಂದ ಸುಮಾರು ೧೬ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 

ಶ್ರೇಷ್ಠ ಭಾರತವು ಗಣರಾಜ್ಯಗೊಂಡ ಅವಿಸ್ಮರಣೀಯ ಸಂದರ್ಭವನ್ನು ನೆನಪಿಸುವ ಮತ್ತು ಆಚರಿಸುವ ಅವಕಾಶವನ್ನು ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರಿಗೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಈ ಕಬಡ್ಡಿ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. 

ದೇಹ ದಾರ್ಢ್ಯತೆಯ ಪ್ರತೀಕವಾದ ಭಾರತದ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಚುರಪಡಿಸಬೇಕೆಂಬ ಉದ್ದೇಶದಿಂದ ಎನ್‌ಆರ್‌ಐ ಸ್ಪೋರ್ಟ್ಸ್ -ಡರೇಶನ್ ಗಣರಾಜ್ಯೋತ್ಸವ ಆಚರಣೆಗೆ  ಕಬಡ್ಡಿಯನ್ನು ಆಯ್ಕೆ ಮಾಡಿದೆ. 

ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಜಿದ್ದಾದಲ್ಲಿರುವ ಅನಿವಾಸಿ ಭಾರತೀಯರನ್ನೊಳಗೊಂಡ ಒಂದು ಒಕ್ಕೂಟವಾಗಿದೆ. ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಮಧ್ಯೆ ಭಾರತೀಯ ಕ್ರೀಡೆ ಮತ್ತು ವ್ಯಾಯಾಮಗಳನ್ನು ಹರಡುವ ಪ್ರಮುಖ ಉದ್ದೇಶವನ್ನು -ಡರೇಶನ್ ಹೊಂದಿದೆ. ಅನಿವಾಸಿ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ಕ್ರೀಡೆಗಳ ಕುರಿತ ಒಲವುಂಟುಮಾಡುವುದು, ಕ್ರೀಡಾ ಪ್ರತಿಭೆಗಳಿಗೆ ಮನ್ನಣೆ ನೀಡುವುದು ಮುಂತಾದ ಹಲವು ಉದ್ದೇಶಗಳನ್ನು ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಹೊಂದಿದೆ. 

೮ ಜನವರಿ ೨೦೧೭ರಂದು ಜಿದ್ದಾದ ಪ್ರಧಾನ ರಾಜತಾಂತ್ರಿಕ ಮಹಮ್ಮದ್ ರಹ್ಮಾನ್ ನೂರ್ ಶೈಖ್‌ರನ್ನು ಭೇಟಿಯಾಗಿರುವ ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್‌ನ ನಿಯೋಗವೊಂದು ಕಬಡ್ಡಿ ಲೀಗ್‌ಗೆ ಅವರ ಸಹಕಾರವನ್ನು ಕೋರಿದೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್