ಜಿದ್ದಾ: ಬಾಬರಿ ಮಸ್ಚಿದ್ ಧ್ವಂಸವು ಸೌಹಾರ್ಧ ಪರಂಪರೆಯ ಧ್ವಂಸ : ಇಸ್ಮಾಯಿಲ್ ಕಲ್ಲಡ್ಕ

Source: dksc | By Arshad Koppa | Published on 18th December 2016, 11:41 AM | Gulf News | Special Report |

ಜಿದ್ದಾ-ಸೌದಿ ಅರೇಬಿಯಾ, ಡಿ ೧೫:  ಬಾಬರಿ ಮಸ್ಚಿದ್ ಧ್ವಂಸವು ಜಾತ್ಯಾತೀತ ಮೌಲ್ಯಗಳ ಮತ್ತು ಸೌಹಾರ್ಧ ಪರಂಪರೆಯ ಧ್ವಂಸವೆಂದು ಇಂಡಿಯನ್ ಸೋಶಿಯಲ್ ಫಾರಂ, ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಕಲ್ಲಡ್ಕ ಹೇಳಿದರು. ಅವರು ಇಂಡಿಯನ್ ಸೋಶಿಯಲ್ ಫಾರಂ, ಕರ್ನಾಟಕ ಚಾಪ್ಟರ್, ಜಿದ್ದಾ ವತಿಯಿಂದ ಶುಕ್ರವಾರ ರಾತ್ರಿ ಶರಫೀಯಾದ ಇಂಫಾಲ ಅಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಬಾಬರಿ ಮಸ್ಚಿದ್ ಪುನರ್ ನಿರ್ಮಿಸಿ, ಜಾತ್ಯಾತೀತತೆಯನ್ನು ಮರುಸ್ಥಾಪಿಸಿ’ ಎಂಬ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 

 

ಸ್ವಾತಂತ್ಯ ಭಾರತವು ಒಂದು ಸಂಕೀರ್ಣ ಸಂದಿಗ್ನ ಸ್ಥಿತಿಯಲ್ಲಿ ಸಿಲುಕಿಕೊಂಡಾಗ 90ರ ದಶಕದಿಂದ ಮೊದಲುಗೊಂಡು ದೇಶಾದಾದ್ಯಂತ ಕೋಮುವಾದವನ್ನು ತನ್ನ ಸಾಮಾಜಿಕ ಅಜೆಂಡಾ ಮತ್ತು ಸಿದ್ಧಾಂತವಾಗಿಸಿಕೊಂಡು ಆರ್.ಎಸ್.ಎಸ್ ಹಾಗೂ ಬಿಜೆಪಿ ಯು ರಾಷ್ಟ್ರದ ಸಂವಿಧಾನವನ್ನು, ಪ್ರಜಾಸತ್ತತವಾದ ಮೌಲ್ಯಗಳನ್ನು ಗಾಳಿಗೆ ತೂರಿ ಮನಸೃತಿಯನ್ನು ಅಧಿಕಾರಕ್ಕೆ ತರುವ ಕಾಲಘಟ್ಟವಾಗಿತ್ತು ಬಾಬರಿ ಮಸೀದಿಯ ಧ್ವಂಸ. ಸಂಘಪರಿವಾರಕ್ಕೆ ದೇಶದ ಬಗ್ಗೆ ಕಲ್ಪನೆಗಳಿಲ್ಲ, ಸಬಲೀಕರಣದ ಬಗ್ಗೆ ಕಾಳಜಿಯಿಲ್ಲ, ಮನುವಾದವನ್ನು ಹುಟ್ಟುಹಾಕಿಕೊಂಡು ತಾರತಮ್ಯ ನೀತಿ ಸ್ಥಾಪಿಸಿ, ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ವೈಷಮ್ಯವನ್ನು ಹುಟ್ಟು ಹಾಕುವ ಕನಸಾಗಿದೆ ಎಂದು ಈ ಸಂದರ್ಭ ಅವರು ತಿಳಿಸಿದರು. ಬಾಬರಿ ಮಸೀದಿಯೊಂದಿಗೆ ಸಂವಿಧಾನವೂ ಉರುಳಿ ಬಿದ್ದಿದೆ, ಅದಕ್ಕಾಗಿ ಮಸೀದಿಯನ್ನು ಯಥಾ ಸ್ಥಳದಲ್ಲಿ ಪುನರ್ ನಿರ್ಮಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು. 


ಸ್ವಾತಂತ್ರ್ಯನಂತರ ದೇಶದಲ್ಲಿ ದುರ್ಬಲವಾದಂತಹ ಆರ್ಥಿಕ ನೀತಿಯಿಂದಾಗಿ ಬಡವರು ಬಡವರಾಗಿ ಮತ್ತು ಶ್ರೀಮಂತರು ಶ್ರೀಮಂತರಾಗಿಯೇ ಉಳಿದಿದ್ದಾರೆ. ದೇಶದ ರಾಜಕೀಯ ಪಕ್ಷಗಳು ಬಂಡವಾಳಶಾಹಿತ್ವ ಮತ್ತು ಸಾಮ್ರಾಜ್ಯಶಾಹಿಗಳ ಹಿಡಿತದಲ್ಲಿದೆ. ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಅವರ ಋಣವನ್ನು ಹೊತ್ತುಕೊಂಡೇ ಇರಬೇಕಾದ ಪರಿಸ್ಥಿತಿಯಲ್ಲಿದೆ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಮಾತನಾಡಿದ ಇಂಡಿಯಾ ಪ್ರೆಟರ್ನಿಟಿ ಫಾರಂ ಜಿದ್ದಾ ಅಧ್ಯಕ್ಷರಾದ ಆರೀಫ್ ಬಜ್ಪೆ, ರಾಜಕೀಯವಾಗಿ ಅಧಿಕಾರ ಪಡೆಯಲು ಬಿಜೆಪಿಯು ಕಂಡುಕೊಂಡ ಸೂತ್ರವಾಗಿದೆ ಬಾಬರಿ ಮಸೀದಿ ಧ್ವಂಸ. ಅದನ್ನು ಪುನರ್ ನಿರ್ಮಿಸುವುದರೊಂದಿಗೆ, ಧ್ವಂಸಗೈದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ನಮ್ಮ ಸಂವಿಧಾನ ಬದ್ಧವಾದ ಹೋರಾಟವು ನಿರಂತರವಾಗಿರುತ್ತದೆ ಎಂದರು. ಸಂಘಪರಿವಾರವು ಸಹಬಾಳ್ವೆಯನ್ನು ಒಡೆಯುವುದಕ್ಕೊಸ್ಕರ ಬಾಬರಿಯನ್ನು ಬಳಸಲಾಗಿದೆ. ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಜೀವಕ್ಕೆ ನೀಡದ ಬೆಲೆ, ದನಗಳಿಗೆ ನೀಡುತ್ತಿರುವುದು ವಿಪರ್ಯಾಸವೆಂದರು. 

ಇಂಡಿಯನ್ ಸೋಶಿಯಲ್ ಫಾರಂ ಕೇಂದ್ರ ಸಮಿತಿ ಸದಸ್ಯ ಹನೀಫ್ ಹಾರಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಇಂಡಿಯನ್ ಸೋಶಿಯಲ್ ಫಾರಂ, ಕರ್ನಾಟಕ ಚಾಪ್ಟರ್, ಜಿದ್ದಾ ಉಪಾಧ್ಯಕ್ಷರಾದ ಮುಹಮ್ಮದ್ ಅಲಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಜಲೀಲ್ ಸೂರಿಂಜೆ ವಂದಿಸಿದರು. 
 

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...