ಜೆದ್ದಾ: ಈ ವರ್ಷದ ಹಜ್ ಗಾಗಿ ಜೆದ್ದಾ ವಿಮಾನ ನಿಲ್ದಾಣದ ಮೂಲಕ 850,000 ಯಾತ್ರಿಗಳ ಆಗಮನ

Source: so english | By Arshad Koppa | Published on 9th September 2016, 1:16 PM | Gulf News |

ಜೆದ್ದಾ, ಸೆ ೯: ಮುಸ್ಲಿಮರ ಪಾಲಿಗೆ ಪವಿತ್ರವಾಗಿರುವ ಹಜ್ ಯಾತ್ರೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಜೆದ್ದಾ ನಗರದ ವಿಮಾನ ನಿಲ್ದಾಣದ ಮೂಲಕ (The King Abdulaziz International Airport (KAIA) ಇದುವರೆಗೆ 850,000 ಕ್ಕೂ ಹೆಚ್ಚು ಯಾತ್ರಿಗಳು ಆಗಮಿಸಿದ್ದಾರೆ. ಆ ೪ ರಿಂದ ಪ್ರಾರಂಭವಾದ ಆಗಮನ ಸೆ ೬ ರವರೆಗೆ ನಿಗದಿಪಡಿಸಲಾಗಿತ್ತು. 

ವಿಮಾನ ನಿಲ್ದಾಣಕ್ಕಾಗಿ ಈ ಪ್ರಯಾಣಿಕರಿಗೆಂದೇ ವಿಶೇಷವಾದ ಹದಿನಾಲ್ಕು ಕೌಂಟರುಗಳನ್ನು ತೆರೆಯಲಾಗಿದ್ದು ಯಾತ್ರಿಗಳನ್ನು ದೇವರ ಅತಿಥಿಗಳು ಎಂಬ ಭಾವನೆಯಿಂದ ನಡೆಸಿಕೊಳ್ಳಲಾಗಿದೆ. ಹಾಗೂ ಯಾತ್ರಿಗಳಿಗೆ ಬಹಳಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ ಕೌಂಟರ್ ನಲ್ಲಿಯೂ ಯಾತ್ರಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಕಹಾರ, ಮಾಹಿತಿ ಮತ್ತು ನೆರವನ್ನು ಒದಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆಯನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದಿಂದ ರಚಿಸಲಾಗಿದ್ದು ಯಾತ್ರಿಗಳ ಸುಗಮ ಚಲನೆಗೆ ಸಹಕರಿಸಿ ಯಾವುದೇ ತೊಂದರೆ ಇಲ್ಲದೇ ಈ ವರ್ಷದ ಆಗಮನ ಕಾರ್ಯ ಸುಖಾಂತ್ಯಗೊಂಡಿದೆ. 

ಈ ವ್ಯವಸ್ಥೆಯ ಮೂಲಕ ಪ್ರತಿ ಘಂಟೆಗೆ 3,800 ಯಾತ್ರಿಗಳನ್ನು ಬರಮಾಡಿಕೊಳ್ಳಬಹುದು. ಹದಿಮೂರು ಕೌಂಟರುಗಳಲ್ಲಿ ಮಕ್ಕಾ ಪ್ರಯಾಣಿಸುವವರನ್ನೂ ಒಂದು ಕೌಂಟರಿನಲ್ಲಿ ನೇರವಾಗಿ ಮದೀನಾಕ್ಕೆ ತೆರಳುವ ವ್ಯವಸ್ಥೆ ಕಲ್ಪಿಸಿರುವ ಕಾರಣ ಹಿಂದೆ ಆಗುತ್ತಿದ್ದಂತೆ ಈ ಬಾರಿ ಯಾವುದೇ ತಡವಾಗದಿರುವುದು ಈ ವ್ಯವಸ್ಥೆಯ ಯಶಸ್ಸಿಗೆ ಕಾರಣವಾಗಿದೆ. 
 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.