ಆಸಿಫಾಗೆ ನ್ಯಾಯದ ಬೆಳಕಾದ ಕಾಶ್ಮೀರಿ ಪಂಡಿತರು

Source: sonews | By sub editor | Published on 13th April 2018, 5:23 PM | National News | Don't Miss |

ಜಮ್ಮು: ಅತ್ಯಾಚಾರದಂತಹ ಹೀನ ಅಪರಾಧಗಳಿಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಾರೆ ಕಥುವಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆಸಿಫಾ ಪರ ವಾದಿಸಲಿರುವ ಕಾಶ್ಮೀರಿ ಪಂಡಿತ್ ವಕೀಲೆ ದೀಪಿಕಾ ಸಿಂಗ್ ರಾಜವತ್. 38 ವರ್ಷದ ದೀಪಿಕಾ ಸಿಂಗ್ ಅವರ ಕಾಶ್ಮೀರಿ ಪಂಡಿತ್ ಕುಟುಂಬ 1986ರಲ್ಲಿ ಉತ್ತರ ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರಗೊಂಡಿತ್ತು. 

ಆಸಿಫಾ ಅತ್ಯಾಚಾರ ಪ್ರಕರಣದಲ್ಲಿ ದೀಪಿಕಾ ಸಿಂಗ್ ರದ್ದು ಬಹುಮುಖ್ಯ ಪಾತ್ರ. ಈ ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ. ಎಪ್ರಿಲ್ 4ರಂದು ಜಮ್ಮು ಹೈಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಭುಪಿಂದರ್ ಸಿಂಗ್ ಸಲಥಿಯಾ ತನಗೆ ಬೆದರಿಕೆಯೊಡ್ಡಿದ್ದಾರೆ ಹಾಗೂ  ನ್ಯಾಯಾಲಯಕ್ಕೆ ಹಾಜರಾಗದಂತೆ ಧಮ್ಕಿ ಹಾಕಿದ್ದಾರೆ ಎಂದು ದೀಪಿಕಾ ಆರೋಪಿಸಿದ್ದಾರೆ.

ವಿಚಾರಣಾ ನ್ಯಾಯಾಲಯಗಳ ಮಹಿಳಾ ವಕೀಲರ ಕೊಠಡಿಯಲ್ಲಿ ತನಗೆ ನೀರು ಕೂಡ ನೀಡದಂತೆ ಅಲ್ಲಿನ ಸಹಾಯಕರಿಗೆ ಹೇಳಲಾಗಿದೆ ಎಂದು ರಾಜವತ್ ಎಪ್ರಿಲ್ 9ರಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಆರೋಪಿಸಿದ್ದರು. "ಮಹಿಳೆಯೊಬ್ಬಳಿಗೆ ಬೆದರಿಸಿದ ಮಾತ್ರಕ್ಕೆ ಆಕೆ ಹೆದರಿ ಅಡಗಿ ಕುಳಿತು ಬಿಡುತ್ತಾಳೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಈ ಮಹಿಳೆ ಹೆದರುವವಳಲ್ಲ ಎಂದು ಅವರಿಗೆ ತಿಳಿದಿಲ್ಲ. ಈ ಮಹಿಳೆ ಒಬ್ಬ ಮನುಷ್ಯಳಾಗಿರುವುದರಿಂದ ಆಕೆ ಹಿಂದೂ, ಮುಸಲ್ಮಾನ, ಮುಸ್ಲಿಂ, ಸಿಕ್ಖ್ ಯಾರಿಗೆ ಬೇಕಾದರೂ ಸಹಾಯ ಮಾಡುತ್ತಾಳೆ. ನನಗೂ ಐದು ವರ್ಷದ ಮಗಳಿದ್ದಾಳೆ, ಸಲಥಿಯಾ ಅವರ ಮನೆಯಲ್ಲೂ ಅವರ ಪುತ್ರಿಯಿದ್ದಾರೆ'' ಎಂದು ದೀಪಿಕಾ ಹೇಳುತ್ತಾರೆ.

ಕಥುವಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ರಮೇಶ್ ಕುಮಾರ್ ಜಲ್ಲಾ ಕೂಡ ಕಾಶ್ಮೀರಿ ಪಂಡಿತ್. ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ 90 ದಿನಗಳ ಗಡುವಿಗೂ ಮೊದಲೇ ವಿಚಾರಣೆಯನ್ನು ಪೂರ್ಣಗೊಳಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ ಇವರು ಕ್ರೈಂ ಬ್ರಾಂಚ್ ಅಧಿಕಾರಿ. ಆರೋಪಿಗಳ ರಕ್ಷಣೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರಿಂದ ಈ ಪೊಲೀಸ್ ಅಧಿಕಾರಿಗೆ ಭಾರೀ ಒತ್ತಡವಿದೆ ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಜಗ್ಗದ ಅಧಿಕಾರಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.

Read These Next

ಉಗ್ರನೊಂದಿಗೆ ರಾಹುಲ್ ಫೋಟೊ; ವಿಕೃತ ಮನಸ್ಸಿನ ಕಿಡಿಗೇಡಿಗಳ ಕೃತ್ಯ;ಯೋಧರ ಬಲಿದಾನದಲ್ಲೋ ರಾಜಕೀಯ

ಹೊಸದಿಲ್ಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...