ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಸಂಚಿಕೆ ವಿತರಣೆ

Source: sonews | By sub editor | Published on 18th July 2018, 7:15 PM | Coastal News |

ಭಟ್ಕಳ: ಪುಸ್ತಕ, ಕೈಪಿಡಿಗಳು ವಿದ್ಯಾರ್ಥಿಗಳಲ್ಲಿ ಭೌಧ್ದಿಕ ಶಕ್ತಿ ಸಾಮಥ್ರ್ಯವನ್ನು ಹೆಚ್ಚಿಸಿ, ಬುದ್ದಿಯನ್ನು ಒರೆಗೆ ಹಚ್ಚಿಸುವ ಕೆಲಸಮಾಡಿಸುತ್ತದೆ. ಪ್ರತಿದಿನ ನೀವು ಒದುವ ಅರ್ದಗಂಟೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಸಹಕಾರಿ ಎಂದು ಸಮಾಜ ಸೇವಕಿ ಶಿವಾನಿ ಶಾಂತರಾಮ ಅಭಿಪ್ರಾಯಪಟ್ಟರು
    
ಅವರು ಬುಧವಾರ ಬೆಳಕೆ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾಮಾನ್ಯ ಜ್ಞಾನದ ಸಂಚಿಕೆ ವಿತರಿಸಿ ಮಾತನಾಡಿದರು. ಎಸ್ಸೆಸ್ಸೆಎಲ್ಸಿಯ ವಿದ್ಯಾರ್ಥಿಗಳು ಆತ್ತ ಕಿರಿಯರು ಅಲ್ಲದ ಆತ್ತ ಪರಿಪಕ್ವತೆ ಹೊಂದಿರದ ಪ್ರೌಢಾವ್ಯಸ್ಥೆಯಲ್ಲಿ ಇರುತ್ತಾರೆ. ಈ ಸಂದರ್ಭದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿದ್ದು,  ಹೇಳಿದ್ದನ್ನು ಬೇಗ ಮನನ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತಾರೆ. ಇದು ಜೀವನದ ಮುಂದಿನ ಗುರಿಯನ್ನು ನಿರ್ಧರಿಸಿ ಮುನ್ನಡೆಯುವ ಸೂಕ್ತ ಸಮಯ. ಅವಕಾಶಗಳು ಬಂದಾಗಲೆ ಅದರ ಪ್ರಯೋಜನ ಪಡೆಯಬೇಕು. ವ್ಯಾಸಾಂಗ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ಇಂತಹ ಪತ್ರಿಕೆಗಳಿಂದ ಪಡೆದ ಸಾಮಾನ್ಯ ಜ್ಞಾನವೆ ಮುಂದೆ ಸಹಾಯಕ್ಕೆ ಬರಲಿದೆ. ಗ್ರಾಮೀಣ ಭಾಗದ ಜನರಿಗೂ ಇದರ ಪ್ರಯೋಜನ ಲಭಿಸಬೇಕು. ನೀವೂ ಒದಿ ಇತರರನ್ನು ಓದುವಂತೆ ಪ್ರೇರೇಪಿಸಬೇಕು. ವಿದ್ಯೆ ವಿನಯವನ್ನು ಕಲಿಸಿದರೆ, ಒದು ಮನುಷತ್ವ ಕಲಿಸುತ್ತದೆ. ಸಾಮಾಜಿಕ, ರಾಜಕೀಯ ಬಾಹ್ಯ ಪ್ರಪಂಚಗಳ ಅರಿವು ಹೊಂದಿದಲ್ಲಿ ತಿಳುವಳಿಕೆ ಮಾತ್ರವಲ್ಲದೆ ತನ್ನ ಮೇಲೆ ತನಗೆ ನಂಬಿಕೆ ಮೂಡುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
  
ಇನ್ನೊರ್ವ ಮುಖ್ಯ ಅತಿಥಿ ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿ ಸಾಮಾನ್ಯ ಜ್ಞಾನ ನೀಡುವ ಸಂಚಿಕೆಗಳು ಕೇವಲ ವಿದ್ಯಾರ್ಥಿಗಳ ಮಿತ್ರನಲ್ಲ.  ಬದ್ರ ಭವಿಷ್ಯದ ಬುಡಗಟ್ಟಿಗೊಳಿಸುವ ಸಂಗಾತಿ. ಅಡಿಪಾಯ ಅವಲಂಬಿಸಿ ಹೇಗೆ ಕಟ್ಟಡಗಳ ಮಹಡಿ ಸಂಖ್ಯೆ ನಿರ್ಧರಿಸುತ್ತಾರೊ, ಹಾಗೆ ನಿಮ್ಮ ಜ್ಞಾನವನ್ನು ಪರಿಗಣಿಸಿ ನಿಮ್ಮನ್ನು ಅಳೆಯುತ್ತಾರೆ. ಪತ್ರಿಕೆಗಳು ಸ್ಥಳೀಯ, ಜಿಲ್ಲಾ ರಾಜ್ಯ, ದೇಶ ವಿದೇಶದ ಆಗುಹೋಗುಗಳ ಸಂಪೂರ್ಣ ಪರಿಚಯವನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತ್ತದೆ. ವಿದ್ಯಾರ್ಥಿ ದೆಸೆಯಿಂದಲೆ ಒದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಕಾಂತ ಗಾಂವಕರ್ ಮಾತನಾಡಿ ಶಾಲೆಯ ಪ್ರಯೋಗಾಲಯಕ್ಕೆ ಸಿಂಡಿಕೇಟ್ ಬ್ಯಾಂಕನ ನಿವೃತ್ತ ನಿಭಂದಕ ಸದಾಶಿವ ಆಚಾರ್ಯ, ಬೆಳಗಾವಿಯಲ್ಲಿರುವ ಭಟ್ಕಳದ ಮೂಲನಿವಾಸಿ ನಾರಾಯಣ ನಾಯ್ಕ, ಜನಪ್ರತಿನಿಧಿ ಶಿವಾನಿ ಶಾಂತರಾಮ ಅವರಂತಹ ಕೊಡುಗೈ ದಾನಿಗಳು ನೀಡಿದ ದಾನದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು. ಯಂತ್ರ ನಿರ್ವಾಹಕ ದೇವೇಂದ್ರ ನಾಯ್ಕ, ರಂಜನ್ ಇಂಡೇನ್ ಗ್ಯಾಸ್‍ನ ಶಾಂತರಾಮ ಭಟ್ಕಳ ಇದ್ದರು. ದೈಹಿಕ ಶಿಕ್ಷಕ ಪ್ರಕಾಶ ಶಿರಾಲಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.  ಶಿಕ್ಷಕ ಚಂದ್ರಶೇಖರ ಶಿರೂರು ವಂದಿಸಿದರು. ಭಾವನ ಸಂಗಡಿಗರು ಪ್ರಾರ್ಥಿಸಿದರೆ, ಶಿಕ್ಷಕ ಎನ್. ಜಿ. ಗೌಡ ಕಾರ್ಯಕ್ರಮ ನಿರೂಪಿಸಿದರು.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...