ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಮಂತ್ರಣ

Source: sonews | By Staff Correspondent | Published on 4th January 2019, 11:29 PM | Coastal News |

ಮುಂಡಗೋಡ : ಮುಂಡಗೋಡ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ, ಪತ್ರಕರ್ತ ರಾಜಶೇಖರ ನಾಯ್ಕ ಅವರನ್ನು ಗೌರವಿಸಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಗಮಿಸಬೇಕೆಂದು ತಾಲೂಕಾ ಕ.ಸಾ.ಪ. ಅಧ್ಯಕ್ಷರಾದ ಡಾ.ನಾಗೇಶ ಪಾಲನಕರ ಆಮಂತ್ರಿಸಿದರು. 

ಈ ಸಂದರ್ಭದಲ್ಲಿ ಎಸ್.ಬಿ.ಹೂಗಾರ, ಆರ್.ವಿ.ಹಿರೇಮಠ, ಸಂಗಪ್ಪ ಕೊಳೂರ, ಎನ್.ಎನ್.ನಾಯ್ಕ, ಶ್ಯಾಮಲಾ ನಾಯ್ಕ, ಸುಭಾಸ ಡೋರಿ ಇದ್ದರು.

ದಿ.27ರಂದು ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಗ್ರಾಮದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
     

Read These Next