ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ದಿಢೀರ್ ಬೇಟಿನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ

Source: sonews | By Staff Correspondent | Published on 11th October 2018, 11:05 PM | State News |

ಶ್ರೀನಿವಾಸಪುರ: ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ದಿಢೀರ್ ಬೇಟಿನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಷಂಶುನ್ನೀಸಾ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿರುವ ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಬೇಟಿನೀಡಿ ಅಲ್ಪ ಸಂಖ್ಯಾತ ವಿದ್ಯಾರ್ಥಿವೇತನಕ್ಕೆ ಸಂಬಂದಿಸಿದಂತೆ ಇದೇ ತಿಂಗಳು 15.10.2018 ಎನ್.ಎಸ್.ಪಿ, ವಿದ್ಯಾರ್ಥಿ ವೇತನಕ್ಕೆ  ಕೊನೇ ದಿನಾಂಕವಾಗಿದ್ದು ಮತ್ತು ಎಸ್.ಎಸ್.ಪಿ, ವಿದ್ಯಾರ್ಥಿ ವೇತನಕೆ  30.10.2018 ಕೊನೇ ದಿನಾಂಕವಾಗಿದ್ದು  ತಾಲ್ಲೂಕಿನಾದ್ಯಂತ ಖಾಸಗಿ ಅನುದಾನಿತ ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿವೇತನಕ್ಕೆ ನೊಂದಣಿಗೆ ಸಂಬಂದಿಸಿದಂತೆ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧೀಕಾರಿ ಷಂಶುನ್ನೀಸಾ ರವರು ಸಂಗ್ರಹಿಸಲಾಯಿತು ಮತ್ತು ಇಲಾಖೆಗೆ ಸಂಬಂದಿಸಿದಂತೆ ಇನ್ನೂ ಜನಜಾಗೃತಿ ಮೂಡಿಸಬೇಕೆಂದು ಈ ಕೇಂದ್ರದ ಉಸ್ತುವಾರಿ ವಹಿಸಿರುವ ಸಿಬ್ಬಂದಿ ರವರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಇಸಿಓ ಸುಬ್ರಮಣಿ, ಮುಖ್ಯಶಿಕ್ಷಕ ಬೈರೇಗೌಡ ರವರು ಇದ್ದರು.

Read These Next