ಭಾರತವು ನಿಂತಿರುವುದು ಭಾವೈಕ್ಯತೆಯ ನೆಲೆಯ ಮೇಲೆ

Source: sonews | By Staff Correspondent | Published on 21st August 2018, 6:44 PM | Coastal News | Don't Miss |

ಕಾರವಾರ: ನಮ್ಮ ದೇಶದಲ್ಲಿ ಬೇರೆ ಬೇರೆ ಜಾತಿ ಧರ್ಮದ ಜನರಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಬಾಳುತ್ತಿರುವುದೇ ನಮ್ಮಲ್ಲಿರುವ ದೇಶ ಪ್ರೆಮದ ಸಂಕೇತವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಧ್ಯೆಯವನ್ನು ಇಟ್ಟುಕೊಂಡು ಏಕತೆಯಿಂದ ಬಾಳಿ ದೇಶದ ಅಭಿವೃದ್ಧಿಗೆ ದುಡಿಯಬೇಕಾಗಿದೆ. ಭಾರತದ ಪ್ರಗತಿಯೇ ನಮ್ಮ ಗುರಿಯಾಗಿದೆ. ಭಾರತವು ನಿಂತಿರುವುದೇ ಭಾವೈಕ್ಯತೆಯ ಬುನಾದಿಯ ಮೇಲೆ ಎಂದು ಬಾಡದ ಶಿವಾಜಿ ಹೈಸ್ಕೂಲ್‌ನ ನಿವೃತ್ತ ಮುಖ್ಯಾಧ್ಯಾಪಕರಾದ ಶಿವಾನಂದ ಕದಂ ಮಾತನಾಡಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರದವರು ಸಂಯುಕ್ತವಾಗಿ ಸದ್ಭಾವನಾ ದಿನಾಚರಣೆಯ ನಿಮಿತ್ತ ಕಾರವಾರದ ಆಶಾನಿಕೇತನ  ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳನ್ನು ಉದ್ದೆಶಿಸಿ ಮಾತನಾಡಿದರು. 
 

ಇನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಡದ ಸರಕಾರಿ ಐ.ಟಿ.ಐನ ಪ್ರಭಾರ ಪ್ರಾಂಶುಪಾಲರಾದ ಶಂಕರ ಮಾಜಾಳಿಕರ್ ಮಾತನಾಡಿ ಸಮಾಜದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಸಮಾಜದಲ್ಲಿರುವ ದುರ್ಬಲರನ್ನು ಗುರುತಿಸಿ ಅವರ ಏಳಿಗೆಗಾಗಿ ಶ್ರಮಿಸುವುದು ಮಹತ್ತರವಾದ ಕರ‍್ಯವಾಗಿದೆ. ನಾವೆಲ್ಲರೂ ಸಹೋದರಭಾವದಿಂದ ಇದ್ದು ದೇಶವನ್ನು ಬೆಳೆಸುವುದರ ಜೊತೆಗೆ ಅಭಿವೃದ್ದಿ ಪಡಿಸಬೇಕಾಗಿದೆ ಎಂದರು. ಸಮಾಜ ಸೇವಕರಾದ ಅಬ್ದುಲ್ ಗಫೂರ್ ಮಾಂಡ್ಲಿಕ್ ಮಾತನಾಡಿ ನಾವು ಎಲ್ಲಾಭೇದ ಭಾವ ಮರೆತು ಒಗ್ಗಟ್ಟಿನಿಂದ ಬಾಳುವುದರ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿ ರಾಷ್ಟç ಹಾಗೂ ರಾಜ್ಯೊತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಯಮಿ ನಿಜಾಮುದ್ದಿನ್ ಶೇಖ್ ಆಶಾನಿಕೇತನ ಶಾಲೆಯ ಮಕ್ಕಳಿಗೆ ಕ್ರಿಡಾ ಸಾಮಗ್ರಿಯನ್ನು ವಿತರಿಸಿದರು. 
 

ಪ್ರಾರಂಭದಲ್ಲಿ ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಶೇಖ್ ಪ್ರಾಸ್ಥವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶಾಲೆಯ ಮೇಲ್ವಿಚಾರಕಿ ಸಿಸ್ಟರ್ ಎಲಿಜಾ ವಂದಿಸಿದರು. ಎಲ್ಲಾ ಮಕ್ಕಳಿಗೂ ಲಘು ಉಪಹಾರ, ಬಲೂನ್ ಹಾಗೂ ಸಿಹಿಯನ್ನು ಹಂಚಲಾಯಿತು. ಈ ಕರ‍್ಯಕ್ರಮದಲ್ಲಿ ಬಿ.ಎಸ್.ಎಫ್‌ನ ಮಾಜಿ ಸೈನಿಕ ಸಂಜಯ ನಾಯ್ಕ, ಅಬಕಾರಿ ಇಲಾಖೆಯ ನಿವೃತ್ತ ಸಿಬ್ಬಂದಿ ಸುರೇಶ ನಾಯ್ಕ, ಕ್ಲಬ್‌ನ ಸದಸ್ಯರಾದ ಶುವೇಬ್ ಝೈದಿ, ಜಾವೀದ್ ಶೇಖ್, ಮೊಹಮ್ಮದ್ ಅಸಿಫ್ ಶೇಖ್, ಮೊಹಮ್ಮದ್ ಫೌಜಿ ಮಿರ್ಜಾನ್‌ಕರ್, ಆಝಾದ್ ಯುಥ್ ಕ್ಲಬ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ಹಸನ್ ಮತ್ತಿತರರು ಉಪಸ್ಥಿತರಿದ್ದರು. ಈ ಕರ‍್ಯಕ್ರಮವನ್ನು ಕ್ಲಬ್‌ನ ಕರ‍್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಸಂಘಟಿಸಿದ್ದರು.  
 

Read These Next

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...