ಭಾರತೀಯ 6 ಮಂದಿ ಮೀನುಗಾರರನ್ನು ಜೈಲನಿಂದ ಬಿಡುಗಡೆ:ಬೋಟ ಬಂಧನಕ್ಕೆ ನೀಡಿದ ಇರಾನ 

Source: S.O. News Service | By MV Bhatkal | Published on 14th October 2018, 4:42 PM | Coastal News | Don't Miss |

ಭಟ್ಕಳ: ದುಬೈನಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಇರಾನ್ ಗಡಿ ದಾಟಿದ ಆರೋಪದಲ್ಲಿ ಬಂಧಿತರಾಗಿದ್ದ 6 ಮಂದಿ ಭಾರತೀಯ ಮೀನುಗಾರರನ್ನು ಶನಿವಾರದಂದು ಇರಾನ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿ ಬೋಟ್ ಬಂಧನದಲ್ಲಿರಿಸಿದೆ. 
ಜುಲೈ 27ರಂದು ಕಿಶ್ ಐಸ್‍ಲೆಂಡ್‍ನಲ್ಲಿ ಇರಾನಿನ ಪೊಲೀಸರು ದುಬೈ ಗಡಿ ದಾಟಿ ಇರಾನ್ ಪ್ರವೇಶಿಸಿದ್ದಾರೆ ಎಂದು ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿದ್ದರು. 18 ಜನರಲ್ಲಿ 12 ಮಂದಿ ಮಾತ್ರ ಇದ್ದು ಉಳಿದವರು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಬೇರಿ ಕಚೇರಿಯಲ್ಲೂ ಮನವಿ ಸಲ್ಲಿಸಿದ್ದರು. 
ಗಡಿ ದಾಟಿದ ಆರೋಪದಲ್ಲಿ ಇರಾನ್ ಜೈಲಿನಲ್ಲಿ ಬಂಧಿಯಾಗಿದ್ದ ಇನಾಯತ್ ಅಬ್ದುಲ್ ಖಾದಿರ್ ಶಮಾಲಿ, ಅಜ್ಮಲ್ ಮೂಸಾ ಶಮಾಲಿ, ಇಲಿಯಾಸ್ ಅಂಬಾಡಿ, ಖ್ವಾಶಿಮ್ ಶೆಖ್, ಇಲಿಯಾಸ್ ಘಾರು ಬೈಟ್ಕುಳಿ, ಖಲೀಲ್ ಇಸ್ಮಾಹಿಲ್ ಪಾನಿಬುಡೊ ಎನ್ನುವವರನ್ನು ಶನಿವಾರದಂದು ಪೊಲೀಸರು ತಂದು ಬೋಟಿನಲ್ಲಿ ಇರಿಸಿದ್ದಾರೆ. 
ವಶದಲ್ಲಿದ್ದವರ ಬೋಟ್ ಬಂಧನ ಮುಂದುವರೆದಿದ್ದು ಪ್ರತಿದಿನ ಒಬ್ಬೊಬ್ಬರನ್ನು ದಡಕ್ಕೆ ಕಳುಹಿಸಿ ಆಹಾರ ಸಾಮಗ್ರಿ ನೀಡಲಾಗುತ್ತಿದೆ ಎನ್ನಲಾಗಿದೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...