ಅಳ್ವೆಕೋಡಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ

Source: sonews | By Staff Correspondent | Published on 18th August 2018, 11:13 PM | Coastal News |

ಭಟ್ಕಳ: ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜ ವಂದನೆಯ ನಂತರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ದೈಮನೆ ಅವರು ಹಸಿರು ಸ್ವಾತ್ರಂತ್ರ್ಯೋತ್ಸವದ ಪ್ರಯುಕ್ತ ಗಿಡವನ್ನು ನೆಟ್ಟು ನೀರೆರೆದರು. 

ಮುಖ್ಯಾಧ್ಯಾಪಕರಾದ ಕೆ.ಬಿ. ಮಡಿವಾಳ ಇವರು ಸ್ವಾತಂತ್ರ್ಯೋತ್ಸವದ ಮಹತ್ವ ಹಾಗೂ ಹಿನ್ನಲೆಯನ್ನು ಕುರಿತು ಮಾತನಾಡಿದರು. 

ದೇವಸ್ಥಾನದ ಧರ್ಮದರ್ಶಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯ ತಿಮ್ಮಪ್ಪ ನಾರಾಯಣ ಹೊನ್ನಿಮನೆ ಮಾತನಾಡಿ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಕಾಣಬೇಕಾದರೆ ವೀರ ಯೋಧರ ಚರಿತ್ರೆಗಳನ್ನು ಅರಿಯಬೇಕು ಎಂದರು. 

ಮೀನುಗಾರಿಕಾ ಸಹಕಾರಿ ಸಂಘ ಅಳ್ವೆಕೋಡಿಯ ಅಧ್ಯಕ್ಷ ವಿಠ್ಠಲ್ ಶನಿಯಾರ ದೈಮನೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಭಾಸ್ಕರ ದೈಮನೆ, ಸದಸ್ಯ ಭಾಸ್ಕರ ವೆಂಕಟ್ರಮಣ ಮುಂಗ್ರಿಮನೆ, ಮಾದೇವ ಮೊಗೇರ ತುಳಸಿಮನೆ, ಚಂದ್ರಕಾಂತ ಮೊಗೇರ ಬುಳ್ಳನಮನೆ ಮುಂತಾದವರು ಉಪಸ್ಥಿತರಿದ್ದರು. 
 

Read These Next

ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜುಲೈ 27 ಮತ್ತು 28ರಂದು ಉಚಿತ ಹೃದ್ರೋಗ್ರ ...

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'