‘ಯುವ ಶಕ್ತಿಯಲ್ಲಿನ ಸಂಘಟನಾ ಮನೋಭಾವ ವೃದ್ಧಿಯಾಗಬೇಕು - ಶಾಸಕ ಸುನೀಲ ನಾಯ್ಕ’

Source: sonews | By Staff Correspondent | Published on 14th September 2018, 5:08 PM | Coastal News | Don't Miss |

ಭಟ್ಕಳ: ಒಂದು ಕುಟುಂಬದಲ್ಲಿ ಪ್ರತಿ ವರ್ಷ ಕಾರ್ಯಕ್ರಮವನ್ನು ನಡೆಸುವುದು ಇಂದಿನ ದಿನದಲ್ಲಿ ಅಸಾಧ್ಯವಾಗಿದ್ದು, ಸತತ 25 ವರ್ಷ ಗಣೇಶ ಉತ್ಸವವನ್ನು ಸಂಭ್ರಮದಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಸುವುದು ಪ್ರಶಂಸನಾರ್ಹ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಮುಠ್ಠಳ್ಳಿ ಮೂಢಬಟ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನದಲ್ಲಿ ಯುವ ಪಡೆಯಲ್ಲಿ ಸಂಘಟನಾ ಆಸಕ್ತಿ ಕುಂಠಿತವಾಗುತ್ತಿದ್ದು, ಯುವಕರು ವಿವಿಧ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಸಂಘಟನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹಿನ್ನೆಲೆ ಎಲ್ಲರು ಒಂದು ಕಡೆ ಸೇರುವ ಉದ್ದೇಶಕ್ಕೆ ಗಣೇಶ ಹಬ್ಬವನ್ನು ಅಂದು ಬಾಲಗಂಗಾಧರ ತಿಲಕ ಅವರು ಆರಂಭಿಸಿದ್ದು ಈಗ ಇದೊಂದು ಊರಿನ ಒಗ್ಗಟ್ಟಿನ ಹಾಗೂ ಹಿಂದುಗಳ ಪ್ರಮುಖ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವಂತಾಗಿದೆ. ಅಂದು ಅವರ ನಿರ್ಧಾರ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ತಾಲೂಕಾ ಆಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ‘ನಿಯಮಿತ ಉದ್ದೇಶದೊಂದಿಗೆ ಆರಂಭವಾದ ಉತ್ಸವವೂ ಇಂದು ಕೇವಲ ಹಬ್ಬ ಹರಿದಿನಕ್ಕಾಗಿ ಮಾತ್ರ ಸೀಮಿತವಾಗಿದೆ. ಮನೆಯಲ್ಲಿ ಹಬ್ಬ ಆಚರಿಸಲು ಸಾಧ್ಯವಿಲ್ಲದ ಹಿನ್ನೆಲೆ ಊರ ಹಬ್ಬದ ರೀತಿಯಲ್ಲಿ ಸಾರ್ವಜನಿಕವಾಗಿ ಆಚರಿಸುವಂತಾಗಿದೆ. ಈ ಹಬ್ಬ ಆಚರಣೆ ಎನ್ನುವುದು ಅನಿವಾರ್ಯತೆಯಾಗದೇ ಊರಿನಲ್ಲಿ ಬಾಂದವ್ಯ ವೃದ್ಧಿಯಾಗಬೇಕು ಎಂದರು.

ಇನ್ನೋರ್ವ ಅತಿಥಿ ರಂಜನ ಗ್ಯಾಸ ಎಜೆನ್ಸಿ ಮಾಲಕಿ ಶಿವಾನಿ ಶಾಂತಾರಾಮ ಮಾತನಾಡಿ ‘ಊರಿನಲ್ಲಿನ ಯುವಕ ಉತ್ಸಾಹ ಹಾಗೂ ಇನ್ನೊಬ್ಬರನ್ನು ಗೌರವಿಸುವ ಗುಣ ಮೆಚ್ಚುಗೆಗೆ ಅರ್ಹವಾಗಿದೆ. ಯುವಕರಲ್ಲಿನ ಆಸಕ್ತಿಯನ್ನು ಮನಕಂಡು ಶಾಸಕರು ತಾಲೂಕಿನಲ್ಲಿ ಒಂದು ಕೈಗಾರಿಕೆಯನ್ನು ಸ್ಫಾಪಿಸಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವಂತೆ ಮಾಡಬೇಕೆಂಬ ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾಜಿ ಶಾಸಕ ಶಿವಾನಂದ ನಾಯ್ಕ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಚಂದ್ರಹಾಸ ನಾಯ್ಕ, ಮಂಜುನಾಥ ನಾಯ್ಕ, ಕೃಷ್ಣ ನಾಯ್ಕ, ಹಾಗೂ ಹಾಲಿ ಅಧ್ಯಕ್ಷ ಶನಿಯಾರ ನಾಯ್ಕ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಮುಠ್ಠಳ್ಳಿ ಮೂಢಬಟ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಮಹೋತ್ಸವ ಸಮಿತಿ ವತಿಯಿಂದ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಶಿವಾನಂದ ನಾಯ್ಕ ಹಾಗೂ ಶಿವಾನಿ ಶಾಂತಾರಾಮ ಅವರಿಗೆ ಸನ್ಮಾನಿಸಲಾಯಿತು. 
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಮಕ್ಕಳಿಂದ ಛದ್ಮವೇಶ ಕಾರ್ಯಕ್ರಮ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ಭಕ್ತಿಗೀತೆ ಮತ್ತು 15 ವರ್ಷದೊಳಗಿನ ಮಕ್ಕಳಿಗೆ ನೃತ್ಯ ಸ್ಪರ್ಧೇ ನಡೆಯಿತು.

ಈ ಸಂಧರ್ಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಎಮ್.ಆರ್.ನಾಯ್ಕ, ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ನಾಯ್ಕ,  ಮುಠ್ಠಳ್ಳಿ ಮೂಢಬಟ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶನಿಯಾರ ನಾಯ್ಕ, ನ್ಯೂ ಇಂಗ್ಲಿಷ್ ಸ್ಕೂಲ್ ಮುಖ್ಯಾಧ್ಯಾಪಕ ಎಂ.ಕೆ.ನಾಯ್ಕ ಉಪಸ್ಥಿತರಿದ್ದರು. 

ಇದಕ್ಕು ಪೂರ್ವದಲ್ಲಿ ಬೆಳಿಗ್ಗೆ ಇಲ್ಲಿನ ಚೌಥನಿ ಗುಡಿಗಾರ ಮನೆಯಲ್ಲಿ ಶ್ರೀ ವಿಘ್ನೇಶ್ವರ ಮೂರ್ತಿಗೆ ಚಿನ್ನದ ಕಿರೀಟವನ್ನು ಅರ್ಪಿಸಿ ವಿಶೇಷವಾಗಿ ಮಹಿಳೆಯರು ಭವ್ಯ ಪೂರ್ಣ ಕುಂಭ ಮೆರವಣಿಗೆಯ ಮೂಲಕ ಪುರುಷರು ಬಿಳಿ ಬಟ್ಟೆಯನ್ನು ಧರಿಸಿ ಅದ್ದೂರಿಯಾಗಿ ಮುಠ್ಠಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪಕ್ಕೆ ಕರೆತಂದು ಪುರೋಹಿತರ ಮೂಲಕ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೆರಿತು. ನಂತರ ಬಂದತಹ ಎಲ್ಲಾ ಭಕ್ತಾದಿಗಳಿಗೆ ಶ್ರೀ ಕಟ್ಟೇವೀರ ಸೇವಾ ಸಮಿತಿಮುಠ್ಠಳ್ಳಿ ಇವರಿಂದ ಅನ್ನ ಸಂತರ್ಪಣೆ ಸೇವೆ ನಡೆಯಿತು.  

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...