ಅಕ್ರಮ ಜಮೀನು ಒತ್ತುವರಿ; ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

Source: sonews | By Staff Correspondent | Published on 28th September 2018, 3:45 PM | State News |

ಕೋಲಾರ: ನರಸಾಪುರ ವ್ಯಾಪ್ತಿಯ ಸರ್ವೇ ನಂ. 39ರಲ್ಲಿ 1 ಎಕರೆ 16 ಗುಂಟೆ ಕೆರೆ ಜಮೀನನ್ನು ಒತ್ತುವರಿ ಮಾಡಿಕೊಂಡು ಸೆಡ್‍ಗಳನ್ನು ನಿರ್ಮಿಸಿರುವ ಖಾಜಿಕಲ್ಲಹಳ್ಳಿ ಮುನಿರಾಜುರವರ(ಹಾಲಿ ರೇಷ್ಮೇ ಬೆಳೆಗಾರರ ಹಾಗೂ ರೈತರ  ಸೇವಾ ಸಹಕಾರ ಸಂಘದ ಅದ್ಯಕ್ಷ)  ವಿರುದ್ದ ಕಾನೂನು ಕ್ರಮ ಕೈಗೊಂಡು ಕೆರೆಯ ಜಮೀನನ್ನು ಉಳಿಸಿಕೊಡಬೇಕೆಂದು ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
                             

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಡಳಿತಕ್ಕೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಸರ್ಕಾರಿ ಜಮೀನು ಸಿಗುವುದಿಲ್ಲ ಮತ್ತೊಂದು ಕಡೆ ರೈತರ ಒಡನಾಡಿಯಾದ ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ಹುಡುಕಿಕೊಡಲು ವಿಪಲವಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಕ್ಕೆ ಕಣ್ಣೇದುರೇ ಪ್ರಭಾವಿ ರಾಜಕಾರಣಿಗಳು ಸರ್ಕಾರಿ ಜಮೀನನ್ನು ರಾಜಾರೊಷವಾಗಿ ಒತ್ತುವರಿ ಮಾಡಿಕೊಳ್ಳತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಕೋಟ್ಯಾಂತರ ರೂ ಬೆಲೆ ಬಾಳುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೂಲ್‍ಮ್ಯಾನ್ ಪ್ಯಾಕ್ಟರಿ ಪಕ್ಕದಲ್ಲಿರುವ ಸರ್ವೇ ನಂ. 39ರಲ್ಲಿ 1 ಎಕರೆ 16 ಗುಂಟೆ ಕೆರೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಖಾಜಿಕಲ್ಲಹಳ್ಳಿ ಮುನಿರಾಜುರವರು ರಾಜಾರೊಷವಾಗಿ ಯಾರ ಭಯವಿಲ್ಲದೆ ಸೆಡ್ ಗಳನ್ನು ನಿರ್ಮಿಸಿರುವುದು ಕಣ್ಣೇದುರೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ಬೇಜವಬ್ದಾರಿ ಎದ್ದು ಕಾಣುತ್ತಿದೆ. ಈ ವ್ಯಕ್ತಿಯು ಸದರಿ ಹಾಲಿ  ರೇಷ್ಮೇ ಬೆಳೆಗಾರರ ಹಾಗೂ ರೈತರ  ಸೇವಾ ಸಹಕಾರ ಸಂಘದ ಅದ್ಯಕ್ಷ ಹಾಗೂ ಪ್ರಭಾವಿ ಜೆ.ಡಿ.ಎಸ್ ಮುಖಂಡರಾಗಿದ್ದಾರೆ, ರೈತರ ಪರ ಕೆಲಸ ಮಾಡುವ ಇಂತಹ ದೊಡ್ಡ ವ್ಯಕ್ತಿಗಳೇ ಕೆರೆಯ ಜಮೀನನ್ನು ಒತ್ತುವರಿ ಮಾಡಿಕೊಂಡರೆ ಇನ್ನೂ ಕೆರೆ ಕುಂಟೆಗಳನ್ನು ಉಳಿಸಬೇಕಾದ ಜವಬ್ದಾರಿ ಯಾರದ್ದು, ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಣ್ಣು ಮುಂದೆಯೇ ಕೊಟ್ಯಾಂತರ ರೂ ಬೆಲೆ ಬಾಳುವ ಕೆರೆ ಅಂಗಳವನ್ನು  ಒತ್ತುವರಿ ಮಾಡಿಕೊಂಡಿರುವ ಇವರ ವಿರುದ್ದ ಸೂಕ್ತವಾದ ತನಿಖೆ ನಡೆಸಿ ಕೆರೆ ಒತ್ತುವರಿಯನ್ನು ಬಿಡಿಸಬೇಕೆಂದು ಅಗ್ರಹಿಸಿದರು

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳ ಪರೀಶೀಲನೆ ಮಾಡಲು ತಿಳಿಸಿ ಮಾಹಿತಿ ಪಡೆದು ಕೆರೆ ಒತ್ತುವರಿ ತೆರವುಗೊಳಿಸುವ ಭರವಸೆ ನೀಡಿದರು.

ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ,  ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿ ವೆಂಕಿ, ಸಂತೋಷ್, ಪ್ರಸನ್ ಕುಮಾರ್, ಮುಂತಾದವರಿದ್ದರು 


 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...